ಬೆಂಗಳೂರು: ವಿದ್ಯಾಭ್ಯಾಸ, ಕೆಲಸ ಅರಸಿಕೊಂಡು ಬರುವ ವಿದೇಶಿಗರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಿದೆ. ನಕಲಿ ನೋಟು, ಕಳ್ಳತನ, ಆಧುನಿಕ ಆನ್ಲೈನ್ ವಂಚನೆ ನಡೆಸುತ್ತಿದ್ದ ಆರೋಪಿಗಳನ್ನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಲೂಯಿಸ್, ಅಕ್ರೋಮನ್ ಬೆಟ್ರೋಜೇನ್ ಬಾಸ್ಟೀಸ್ಟ್, ಬಂಧಿತ ಆರೋಪಿಗಳು.
ಏನಿದು ಪ್ರಕರಣ:
ಈ ವಿದೇಶಿ ಆರೋಪಿಗಳು ಹೈದ್ರಾಬಾದ್ ಮೂಲದ ಉದ್ಯಮಿಯೊಬ್ಬರಿಗೆ ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಕೊಡುವುದಾಗಿ ಕರೆಸಿಕೊಂಡು ನಕಲಿ ನೋಟುಗಳ ಆಮಿಷ ಒಡ್ಡಿದ್ದರು. ಇವರ ಮಾತನ್ನು ನಂಬಿದ್ದ ಅಪ್ಪಲ್ ನಾಯ್ಡು 50 ಲಕ್ಷ ನಕಲಿ ನೋಟು ಪಡೆದುಕೊಳ್ಳಲು 15 ಲಕ್ಷ ಹಣ ತೆಗೆದುಕೊಂಡು ಖಾಸಗಿ ಹೋಟೆಲ್ಗೆ ಹೋಗಿದ್ದರು. ಈ ವೇಳೆ ಆರೋಪಿಗಳು ಕೆಮಿಕಲ್ ಸ್ಪ್ರೆ ಮಾಡಿ ಹಣದೊಂದಿಗೆ ಪರಾರಿಯಾಗಿದ್ದರು.
ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. ಆರೋಪಿಗಳನ್ನ ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಡಾಲರ್ ಹಾಗೂ ನಕಲಿ ನೋಟು ತಯಾರು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇವರು ಬಾಂಗ್ಲಾದೇಶ, ಶ್ರಿಲಂಕಾ ಸೇರಿದಂತೆ ಅನೇಕ ಕಡೆ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ 6 ಪ್ರಕರಣ ಪತ್ತೆ ಮಾಡಿ 35 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು ದೂರುದಾರರಿಗೆ ಹಿಂತಿರುಗಿಸಿದ್ದಾರೆ.