ETV Bharat / state

ಕೇಂದ್ರ ಬಜೆಟ್​​ನಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನ: ಯೋಜನಾ ಆಯೋಗದ ಸದಸ್ಯ ಶಿವಕುಮಾರ್

ಪಕ್ಕದ ತಮಿಳುನಾಡಿಗೆ ಒಂದು ಲಕ್ಷದ ಐದು ಸಾವಿರ ಕೋಟಿ ಕೊಡಲಾಗಿದೆ. ಕೇರಳ ಸೇರಿದಂತೆ ಇತರೆ ರಾಜ್ಯಗಳಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಉದ್ದಿಮೆ ಬೆಳೆಯಬೇಕಾದರೆ ಮೂಲಭೂತ ಸೌಕರ್ಯ ಬಹಳ ಮುಖ್ಯ. ಆ ದಿಸೆಯಲ್ಲಿ ಕರ್ನಾಟಕಕ್ಕೆ ನಿರಾಸೆಯಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಸದಸ್ಯ ಶಿವಕುಮಾರ್ ಹೇಳಿದರು.

f-kcci-former-president-shivakumar-reaction-about-union-budget
ರಾಜ್ಯ ಯೋಜನಾ ಆಯೋಗದ ಸದಸ್ಯ ಶಿವಕುಮಾರ್
author img

By

Published : Feb 1, 2021, 7:56 PM IST

ಬೆಂಗಳೂರು: ಬೇರೆ ನಗರಗಳಿಗೆ ಹೋಲಿಸಿದರೆ, ಕೇಂದ್ರ ಬಜೆಟ್​​ನಲ್ಲಿ ಬೆಂಗಳೂರಿಗೆ ಕಡಿಮೆ ಅನುದಾನ ಬಂದಿದೆ. ಒಟ್ಟಾರೆಯಾಗಿ ರಾಜ್ಯಕ್ಕೆ ಕಡಿಮೆ ಪಾಲು ಸಿಕ್ಕಿದೆ ಎಂದು ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಯೋಜನಾ ಆಯೋಗದ ಸದಸ್ಯ ಶಿವಕುಮಾರ್ ಹೇಳಿದರು.

ಕೇಂದ್ರ ಬಜೆಟ್​​ನಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನ: ರಾಜ್ಯ ಯೋಜನಾ ಆಯೋಗದ ಸದಸ್ಯ ಶಿವಕುಮಾರ್

ಕೇಂದ್ರ ಬಜೆಟ್​​ ಕುರಿತು ಪ್ರತಿಕ್ರಿಯಿಸಿರುವ ಅವರು, ಪಕ್ಕದ ತಮಿಳುನಾಡಿಗೆ ಒಂದು ಲಕ್ಷದ ಐದು ಸಾವಿರ ಕೋಟಿ ರೂ. ಕೊಡಲಾಗಿದೆ. ಕೇರಳ ಸೇರಿದಂತೆ ಇತರೆ ರಾಜ್ಯಗಳಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಉದ್ದಿಮೆ ಬೆಳೆಯಬೇಕಾದರೆ ಮೂಲಭೂತ ಸೌಕರ್ಯ ಬಹಳ ಮುಖ್ಯ. ಆ ದಿಸೆಯಲ್ಲಿ ಕರ್ನಾಟಕಕ್ಕೆ ನಿರಾಸೆಯಾಗಿದೆ.

ಬೀದರ್, ಚಾಮರಾಜನಗರ ಜಿಲ್ಲೆಗಳಿಗೆ 70 ವರ್ಷಗಳಿಂದ ರೈಲ್ವೆ ವ್ಯವಸ್ಥೆ ಸಮರ್ಪಕವಾಗಿಲ್ಲ. ಎಲ್ಲಿಯವರೆಗೂ ಮೂಲಭೂತ ಸಂಪರ್ಕ ಬರುವುದಿಲ್ಲವೋ ಅಲ್ಲಿಯವರೆಗೆ ಕೆಲಸ ನಡೆಯುವುದಿಲ್ಲ. ಬೀದರ್, ಚಾಮರಾಜನಗರ ಇರಬಹುದು ಅಥವಾ ಬೇರೆ ಜಿಲ್ಲೆಗಳೇ ಇರಬಹುದು ಬೇಕಾದಂತಹ ಸಾಗಾಣಿಕೆ ವ್ಯವಸ್ಥೆ ಇಲ್ಲ. ಅಂದರೆ ಬೆಳೆಗಳನ್ನು ಮಾರಲು ಸಾಧ್ಯವಿಲ್ಲ. ಕೃಷಿ ಹಾಗೂ ಕಾರ್ಖಾನೆಗಳ ಆದಾಯವು ಜಾಸ್ತಿಯಾಗುವುದಿಲ್ಲ. ಎಲ್ಲ ತರಹದ ಸೌಲಭ್ಯಗಳು ಇದ್ದಾಗ ಮಾತ್ರ ಆದಾಯ ಜಾಸ್ತಿಯಾಗುತ್ತದೆ. ಮೇಲ್ನೋಟಕ್ಕೆ ನೋಡಿದರೆ ರಾಜ್ಯಕ್ಕೆ ಒಳ್ಳೆಯ ಮೂಲಭೂತ ಸೌಕರ್ಯಗಳಿಗೆ ಅನುದಾನ ಸಿಕ್ಕಿಲ್ಲ ಎಂದರು.

ದಿನಸಿ ಪದಾರ್ಥಗಳಿಗೆ ಸಮಾಧಾನಕರ ಬೆಲೆ, ರೈತರಿಗೆ ಸಮಾಧಾನಕರ ಧಾರಣೆ ಸಿಕ್ಕರೆ ಮಾತ್ರ ಒಳ್ಳೆಯ ಉತ್ತೇಜನ ಸಿಕ್ಕ ಹಾಗೆ ಆಗುತ್ತದೆ. ಬೆಂಬಲ ಬೆಲೆ ಕೊಟ್ಟಿದ್ದೇವೆ ಅಂತ ಸರ್ಕಾರ ಹೇಳುತ್ತದೆ. ಆದರೆ, ನಮ್ಮ ರಾಜ್ಯದ ವಿಷಯ ತೆಗೆದುಕೊಂಡರೆ ಅತ್ಯಂತ ಶ್ರೇಷ್ಠವಾದ ಭತ್ತ ನಮ್ಮ ಕರ್ನಾಟಕದ್ದು, ಪಂಜಾಬಿನ ಗೋದಿಗೆ ಕೊಟ್ಟಷ್ಟು ಬೆಂಬಲ ಬೆಲೆ ನಮಗೆ ಸಿಕ್ಕಿಲ್ಲ ಎಂದರು.

ಕೇಂದ್ರ ಬಜೆಟ್​​ ಬಗ್ಗೆ ವೈದ್ಯರ ಅಭಿಪ್ರಾಯ:

ಈ ವರ್ಷದ ಕೇಂದ್ರ ಬಜೆಟ್​​ನಲ್ಲಿ ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಬೆಳವಣಿಗೆ ಹಾಗೂ ಬದಲಾವಣೆ ಬಯಸುತ್ತಿದ್ದೆವು. ಆದರೆ, ಯಾವುದೇ ರೀತಿಯ ಬದಲಾವಣೆ ಕಂಡುಬಂದಿಲ್ಲ. ಇಂಡಿಯನ್ ಮೆಡಿಕಲ್ ಸರ್ವೀಸ್ ಆರಂಭ ಮಾಡುತ್ತಾರೆಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಆರೋಗ್ಯ ಅಂದರೆ ಕಾಯಿಲೆ ಬಾರದ ರೀತಿಯಲ್ಲಿ ಜೀವನಶೈಲಿ ಬದಲಾಯಿಸೋದು ಹಾಗೂ ಆರೋಗ್ಯವಂತ ಜೀವನ. ಈ ಮೂಲಭೂತ ಬದಲಾವಣೆ ತರಬೇಕು ಅಂದರೆ ಇದನ್ನ ಅರ್ಥ ಮಾಡಿಕೊಂಡು ಬಜೆಟ್ ತಯಾರು ಮಾಡುವವರು ಇರಬೇಕು. ಐಎಎಸ್ ಅಧಿಕಾರಿಗಳಿಗೆ ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಬದಲಿಗೆ ವೈದ್ಯರನ್ನು ಆಡಳಿತ ವಿಭಾಗಕ್ಕೆ ತಂದು, ಬಜೆಟ್​ಗೆ ಚಾಲನೆ ನೀಡಿದ್ದರೆ ಉತ್ತಮವಾಗಿರುತ್ತಿತ್ತು.

ಈ ಸಲದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 64.180 ಕೋಟಿ ರೂ. ಅನುದಾನ ನೀಡಿದ್ದಾರೆ. ಇದು ಬಹಳ ಕಡಿಮೆಯಾಗಿದೆ. ಕೋವಿಡ್ ವ್ಯಾಕ್ಸಿನ್​ಗಾಗಿ 35,000 ಕೋಟಿ ರೂಪಾಯಿ ಮೀಸಲು ಇಟ್ಟಿರುವುದು ಬಹಳ ಒಳ್ಳೆಯ ಕೆಲಸ. ಈ ಮೂಲಕ ಜನ ಸಾಮಾನ್ಯರಿಗೆ ಉಚಿತವಾಗಿ ಲಸಿಕೆ ನೀಡಬಹುದು ಎಂದರು.

ಸ್ವಾವಲಂಬಿ- ಸಶಕ್ತ ಭಾರತದ ಪರಿಕಲ್ಪನೆಯೊಂದಿಗೆ ಬಜೆಟ್​ ಮಂಡನೆ:

ಸ್ವಾವಲಂಬಿ-ಸಶಕ್ತ ಭಾರತದ ಪರಿಕಲ್ಪನೆಯೊಂದಿಗೆ 2021-22ರ ಕೇಂದ್ರ ಬಜೆಟ್ ಅನ್ನು ಮಂಡಿಸಲಾಗಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮೆಚ್ಚುಗೆ ಸೂಚಿಸಿದ್ದಾರೆ.

ಕೇಂದ್ರದ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ 19 ವಿರುದ್ಧ ಸ್ವದೇಶಿ ಲಸಿಕೆ ಉತ್ಪಾದನೆಗೆ ಹೆಚ್ಚು ಹಣ ನೀಡಿದ್ದು, ಇದರಿಂದಾಗಿ ಜನರಲ್ಲಿದ್ದ ಆತಂಕ ನಿವಾರಣೆಯಾಗಿ, ಧೈರ್ಯ ಹೆಚ್ಚಳವಾಗಲಿದೆ. ಇದು ಉತ್ಪಾದಕತಾ ವೃದ್ಧಿಗೆ ಪೂರಕವಾಗಲಿದೆ. ಮೂಲಸೌಕರ್ಯ ವೃದ್ಧಿ, ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹಣ ಹೂಡಿಕೆ, ಮೆಟ್ರೊ, ರೈಲ್ವೆ, ಬಂದರು ಅಭಿವೃದ್ಧಿಯ ಕ್ರಮದಿಂದ ದೇಶವು ಪ್ರಗತಿಪಥದಲ್ಲಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದ ಭವಿಷ್ಯದ ಚಿಂತನೆಯನ್ನು ಮನಸ್ಸಿನಲ್ಲಿಟ್ಟು ಯೋಜನೆಗಳನ್ನು ರೂಪಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸಲು ಪೂರಕ ಚಿಂತನೆಗಳೂ ಬಜೆಟ್‍ನಲ್ಲಿವೆ. ಇದಕ್ಕಾಗಿ ಜನಪರ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಜನರ ಪರವಾಗಿ ಅಭಿನಂದಿಸುವುದಾಗಿ ಸಿ.ಟಿ.ರವಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.