ETV Bharat / state

ಸಂಚಾರಿ ಪೊಲೀಸ​ನಿಂದ ಹಲ್ಲೆಗೊಳಗಾಗಿದ್ದ ಚಾಲಕನ ವಿರುದ್ಧವೇ ಪ್ರಕರಣ ದಾಖಲು..

ಸಂಚಾರಿ ಪೊಲೀಸನಿಂದ ಹಲ್ಲೆಗೊಳಗಾಗಿದ್ದ ಚಾಲಕನ ಸುನೀಲ ವಿರುದ್ಧವೇ ಎಫ್​ಐಆರ್​ ದಾಖಲಿಸಲಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಚಾಲಕ ಸುನೀಲ್ ಮೇಲೆ ಎಫ್​ಐಆರ್​ ದಾಖಲು
author img

By

Published : Sep 22, 2019, 6:15 PM IST

ಬೆಂಗಳೂರು: ಸಂಚಾರಿ ಪೊಲೀಸ್​ನಿಂದ ಸೆಪ್ಟಂಬರ್​ 20ರಂದು ಹಲ್ಲೆಗೊಳಗಾಗಿದ್ದ ಲಾರಿ ಚಾಲಕ ಸುನೀಲ್​ ಎಂಬುವರ ವಿರುದ್ಧವೇ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕ ಸುನೀಲ್ ಮೇಲೆ ಎಫ್​ಐಆರ್​ ದಾಖಲು..

ಇಲ್ಲಿನ ಟೌನ್ ಹಾಲ್ ಬಳಿ ಟ್ರಕ್ ಚಾಲಕ ಸುನೀಲ್ ನಿಯಮ‌ ಉಲ್ಲಂಘನೆ ಮಾಡಿದ್ದಾರೆಂದು ಹಲಸೂರು ಗೇಟ್ ಸಂಚಾರಿ ಪೊಲೀಸ್​ ಪೇದೆ ಮಹಾಸ್ವಾಮಿ ಎಂಬುವರು ವಾಹನ ತಡೆದಿದ್ದರು. ಈ ವೇಳೆ ಚಾಲಕ ಹಾಗೂ‌ ಪೇದೆ‌ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಲಾರಿ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದರು.‌ ಈ ಘಟನೆಯ ದೃಶ್ಯಾವಳಿಯನ್ನು ಚಾಲಕ ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೊೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.

ಈ ಸಂಬಂಧ ಸಂಚಾರಿ ಕಮಿಷನರ್ ರವಿಕಾಂತೇಗೌಡ ಅವರು ಕಾರಣ ಕೇಳಿ ಪೇದೆ​ಗೆ ಶೋಕಾಸ್ ನೀಡಿದ್ದರು.‌ ಏಕಮುಖ ರಸ್ತೆಯಲ್ಲಿ ಟೆಂಪೊ ಚಲಾಯಿಸಿದ್ದಕ್ಕೆ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಪೇದೆ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Intro:Body:ಟ್ರಾಫಿಕ್ ಕಾನ್ ಸ್ಟೇಬಲ್ ಹಲ್ಲೆಗೆ ಒಳಗಾಗಿದ್ದ ಟ್ರಕ್ ಚಾಲಕ ವಿರುದ್ಧವೇ ಪ್ರಕರಣ ದಾಖಲು

ಬೆಂಗಳೂರು: ಟ್ರಾಫಿಕ್ ಪೊಲೀಸ್ ಕಾನ್ ಸ್ಟೇಬಲ್ ನಿಂದ ಹಲ್ಲೆಗೆ ಒಳಗಾಗಿದ್ದ ಟ್ರಕ್ ಚಾಲಕನ ವಿರುದ್ಧ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಕ್ ಚಾಲಕ ಸುನೀಲ್ ಎಂಬಾತನ ಮೇಲೆ ಎಫ್ಐಆರ್ ದಾಖಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಟೌನ್ ಹಾಲ್ ಬಳಿ ಟ್ರಕ್ ಚಾಲಕ ಸುನಿಲ್ ನಿಯಮ‌ ಉಲ್ಲಂಘನೆ ಮಾಡಿದ್ದಾರೆಂದು ಹಲಸೂರು ಗೇಟ್ ಟ್ರಾಫಿಕ್ ಕಾನ್ ಸ್ಟೇಬಲ್ ಮಹಾಸ್ವಾಮಿ ಅವರು ವಾಹನ ತಡೆದಿದ್ದರು. ಈ ವೇಳೆ ಚಾಲಕ ಹಾಗೂ‌ ಕಾನ್ ಸ್ಟೇಬಲ್‌‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಅನಂತರ ಟ್ರಕ್ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಾನ್ ಸ್ಟೇಬಲ್ ಹಲ್ಲೆ ಮಾಡಿದ್ದರು.‌ ಸಂಪೂರ್ಣ ದೃಶ್ಯಾವಳಿ ಚಾಲಕ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ. ಈ ವಿಡಿಯೊ‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಘಟನೆ ಸಂಬಂಧ ಟ್ರಾಫಿಕ್ ಕಮೀಷನರ್ ರವಿಕಾಂತೇಗೌಡ ಅವರು ಕಾರಣ ಕೋರಿ ಕಾನ್ಸ್ ಸ್ಟೇಬಲ್ ಗೆ ಶೋಕಾಸ್ ನೀಡಿದ್ದರು.‌
ಏಕಮುಖ ರಸ್ತೆಯಲ್ಲಿ ಟೆಂಪೊ ಚಲಾಯಿಸಿದ್ದಕ್ಕೆ ಚಾಲಕ ನನ್ನ‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸರ್ಕಾರಿ ಕರ್ತವ್ಯಕ್ಕೆ
ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕಾನ್ ಸ್ಟೇಬಲ್ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.