ETV Bharat / state

ವಿವಾಹೇತರ ಸಂಬಂಧ ಶಂಕೆ: ಮಲಗಿದ್ದ ಪತ್ನಿಯ ಕತ್ತು ಕೊಯ್ದ ಪತಿ! - husband murders wife in anekal,

ವಿವಾಹೇತರ ಸಂಬಂಧ ಶಂಕೆಯಿಂದ ಪತಿಯೇ ಪತ್ನಿಯ ಕತ್ತು ಕೊಯ್ದು ಹೆಣ ಉರುಳಿಸಿದ್ದಾನೆ. ಆನೇಕಲ್​ ತಾಲೂಕಲ್ಲಿ ಈ ಪ್ರಕರಣ ನಡೆದಿದೆ.

Illegal relationship Murder of wife by husband in Anekal
ಪತಿಯಿಂದ ಪತ್ನಿಯ ಬರ್ಬರ ಕೊಲೆ
author img

By

Published : Jun 22, 2021, 1:05 PM IST

Updated : Jun 22, 2021, 3:44 PM IST

ಆನೇಕಲ್: ತಾಲೂಕಿನಲ್ಲಿ ಒಂದು ಶಂಕೆಯಿಂದ ನೆತ್ತರು ಹರಿದಿದೆ. ಪತ್ನಿ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಶಂಕೆಯಿಂದ ಪತಿಯೇ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಳಿಮಾವು ಸಮೀಪದ ಅರಕೆರೆ ಬಿಟಿಎಸ್ ಲೇಔಟ್ ನಲ್ಲಿ ನಡೆದಿದೆ.

ಪತಿಯಿಂದ ಹತ್ಯೆಯಾದ ಪತ್ನಿ ಆಶಾ
ಪತಿಯಿಂದ ಹತ್ಯೆಗೀಡಾದ ಆಶಾ

ಇತ್ತೀಚಿಗೆ ಪತಿ ಮಣಿ ಮತ್ತು ಪತ್ನಿ ಆಶಾ ನಡುವೆ ಸಣ್ಣಪುಟ್ಟ ಗಲಾಟೆಯಾಗುತ್ತಿತ್ತು. ಜೊತೆಗೆ ಮಣಿ ಇತ್ತೀಚೆಗೆ ಹೆಚ್ಚು ಮದ್ಯಕ್ಕೆ ದಾಸನಾಗಿದ್ದು, ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಗಲಾಟೆ ಮಾಡುತ್ತಿದ್ದ ಎನ್ನಲಾಗ್ತಿದೆ.

ಮಲಗಿದ್ದ ಪತ್ನಿಯ ಕತ್ತು ಕೊಯ್ದ ಪತಿ!

ಇಂದು ಬೆಳಗಿನ ಜಾವ ಪತ್ನಿ ಮಲಗಿದ್ದಾಗ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾನೆ. ಆಶಾ ಬೆಳಗ್ಗೆ ಮನೆಯಿಂದ ಹೊರ ಬರದ ಹಿನ್ನೆಲೆ ಅಕ್ಕಪಕ್ಕದ ಮನೆಯವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಮಣಿಯನ್ನು ಬಂಧಿಸಿದ್ದಾರೆ.

ಹುಳಿಮಾವುನಲ್ಲಿ ಮಲಗಿದ್ದ ಪತ್ನಿಯ ಕತ್ತು ಕೊಯ್ದ ಪತಿ

ಘಟನೆ ಹಿನ್ನೆಲೆ:

15 ವರ್ಷಗಳ ಹಿಂದೆ ಮಣಿ, ಆಶಾಳನ್ನು ಮದುವೆಯಾಗಿದ್ದ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಮಣಿ ನಿತ್ಯ ಕುಡಿದು ಬಂದು ಆಶಾಳೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿಯು ಗಂಡನಿಂದ ದೂರಾಗಿದ್ದಳು. ಕೆಲ ದಿನಗಳ ಬಳಿಕ ಎರಡೂ ಕುಟುಂಬಗಳ ಹಿರಿಯರು ಸೇರಿ ದಂಪತಿಗೆ ಬುದ್ಧಿ ಹೇಳಿ ಒಟ್ಟಿಗೆ ವಾಸಿಸುವಂತೆ ಹೇಳಿದ್ದರು. ಬಳಿಕ ಆಶಾ, ಪತಿಯನ್ನು ಕುಡಿತದ ಚಟದಿಂದ ದೂರವಾಗಿಸಲು ರಿಹ್ಯಾಬಿಲಿಟೇಷನ್ ಸೆಂಟರ್​ಗೆ ಸೇರಿಸಿದ್ದಳು. 15 ದಿನಗಳ ಕಾಲ ಚಿಕಿತ್ಸೆ ಪಡೆದು ಕಳೆದ ಮೂರು ದಿನಗಳ ಹಿಂದೆ ಮನೆಗೆ ಹಿಂದಿರುಗಿದ್ದ. ಆದರೂ ಕುಡಿತ ಮಾತ್ರ ಬಿಟ್ಟಿರಲಿಲ್ಲ.

ತಮಿಳುನಾಡಿನಿಂದ ಬಂದು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ದಂಪತಿ ದುಡಿತಕ್ಕೆ ಲಾಕ್​ಡೌನ್​ ಭಾರಿ ಹೊಡೆತ ಕೊಟ್ಟಿತ್ತು. ಹಾಗಾಗಿ, ಮಣಿ ಮತ್ತೆ ಆಶಾಳ ಬಳಿ ಕುಡಿತಕ್ಕೆ ಹಣ ಕೇಳೋಕೆ ಶುರು ಮಾಡಿದ. ಹಣ ಕೊಡಲು ನಿರಾಕರಿಸಿದಾಗ, ನೀನು ಬೇರೆಯವರೊಡನೆ ವಿವಾಹೇತರ ಸಂಬಂಧ ಹೊಂದಿದ್ದೀಯಾ. ಅದಕ್ಕೆ ನನಗೆ ಹಣ ಕೊಡುತ್ತಿಲ್ಲ ಎಂದು ಕಿರಿಕ್ ಮಾಡ್ತಿದ್ದನಂತೆ. ಇದೇ ವಿಚಾರವಾಗಿ ಜಗಳ ತಾರಕಕ್ಕೇರಿ ಪತಿಯು ಪತ್ನಿಯ ಹತ್ಯೆಗೈದಿದ್ದಾನೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಮಾಹಿತಿ ನೀಡಿದ್ದಾರೆ.

Last Updated : Jun 22, 2021, 3:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.