ETV Bharat / state

ಸಂಚಾರ ದಂಡ ಪಾವತಿಗೆ ಶೇ 50ರ ರಿಯಾಯಿತಿ ಕಾಲಾವಕಾಶ ವಿಸ್ತರಣೆ

author img

By

Published : Feb 13, 2023, 7:07 PM IST

Updated : Feb 13, 2023, 9:01 PM IST

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಸಲು ಶೇಕಡಾ 50ರಷ್ಟು ರಿಯಾಯಿತಿಯನ್ನು ಮತ್ತೆ ಎರಡು ವಾರಗಳ ಅವಧಿಗೆ ವಿಸ್ತರಿಸಲಾಗುತ್ತಿದೆ.

extension-of-50-percent-discount-on-payment-of-traffic-fine
ಸಂಚಾರ ದಂಡ ಪಾವತಿಗೆ ಶೇ 50ರ ರಿಯಾಯಿತಿ ಕಾಲಾವಕಾಶ ವಿಸ್ತರಣೆ

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಮತ್ತೆ ಎರಡು ವಾರಗಳ ಅವಧಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ವಿಶೇಷ ಸಂಚಾರ ಆಯುಕ್ತರು ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ. ಹೀಗಾಗಿ ಮತ್ತೆ ಎರಡು ವಾರಗಳ ಕಾಲ ವಿಸ್ತರಿಸಲು ಆದೇಶಲಾಗುವುದು ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಹಕ ಅಧ್ಯಕ್ಷರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ತಿಳಿಸಿದರು.

ಹೈಕೋರ್ಟ್‌ನ ಸಭಾಂಗಣದಲ್ಲಿ ಲೋಕ ಅದಾಲತ್ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡ ಮೊತ್ತದ ಶೇಕಡಾ 50ರಷ್ಟು ರಿಯಾಯಿತಿಯನ್ನು ವಿಸ್ತರಿಸುವ ಸಂಬಂಧ ವಿಶೇಷ ಪೊಲೀಸ್ ಆಯುಕ್ತರು ಕಾನೂನು ಸೇವಾ ಪ್ರಾಧಿಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಕುರಿತಂತೆ ಮಂಗಳವಾರ (ಫೆ.14) ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಲಿದ್ದೇವೆ. ರಾಜ್ಯ ಸರ್ಕಾರ ಮುಂದಿನ ಒಂದೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ವಿವರಿಸಿದರು.

ಎರಡು ಕೋಟಿ ಪ್ರಕರಣಗಳು ವಿಲೇವಾರಿಗೆ ಬಾಕಿ : ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 2 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಇದ್ದವು. ಇದರಿಂದ 1,300 ಕೋಟಿ ರೂಪಾಯಿ ದಂಡ ಸಂಗ್ರಹ ಆಗಬೇಕಾಗಿತ್ತು. ಸರ್ಕಾರವು ಸಾರ್ವಜನಿಕರು ದಂಡ ಪಾವತಿಸುತ್ತಾರೆಂದು ಕಾಯುತ್ತಿತ್ತು. ಆದರೆ, ಪ್ರಾಧಿಕಾರದಿಂದ ರಿಯಾಯಿತಿ ನೀಡಿದ ಬಳಿಕ ಜನರು ದಂಡ ಪಾವತಿಸಲು ಮುಂದಾಗಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸರು ಮತ್ತು ಕಾನೂನು ಸೇವಾ ಪ್ರಾಧಿಕಾರಕ್ಕೂ ಹೆಚ್ಚು ಮನವಿಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಅವಧಿ ವಿಸ್ತರಣೆ ಮಾಡುವ ಸಂಬಂಧ ನಿರ್ಧರಿಸಲಾಗಿದೆ ಎಂದು ನ್ಯಾ. ಬಿ. ವೀರಪ್ಪ ಅವರು ವಿವರಿಸಿದರು.

ರಿಯಾಯಿತಿ ನೀಡಿ ದಂಡ ಪಾವತಿಗೆ ಅವಕಾಶ ನೀಡಿದ ಬಳಿಕ ಫೆಬ್ರುವರಿ 3 ರಿಂದ ಫೆ. 11ರ ವರೆಗೆ 53.11 ಲಕ್ಷ ಪ್ರಕರಣಗಳಲ್ಲಿ ಸಾರ್ವಜನಿಕರೇ ಮುಂದೆ ಬಂದು ದಂಡ ಪಾವತಿ ಮಾಡಿದ್ದಾರೆ. ಸುಮಾರು 152 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ಇಷ್ಟೊಂದು ಪ್ರಕರಣಗಳನ್ನು ವಿಲೇವಾರಿ ಮಾಡಿರುವುದು ಮತ್ತು ದಂಡ ಸಂಗ್ರಹ ಆಗಿರುವುದು ಕಾನೂನು ಪ್ರಾಧಿಕಾರಕ್ಕೆ ಹಿರಿಮೆ ತಂದಿದೆ. ರಾಜ್ಯ ಸರ್ಕಾರದ ಅಧಿಕಾರಿಗಳು ಪ್ರಾಧಿಕಾರದ ಕ್ರಮಕ್ಕೆ ಖುಷಿ ಪಡಬೇಕು. ರಾಜ್ಯದಲ್ಲಿ ಇನ್ನೂ ಸುಮಾರ 1.5 ಕೋಟಿಗೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥ ಆಗಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ 14,250 ರೂಪಾಯಿ ಸಂಚಾರ ದಂಡ ಪಾವತಿಸಿದ ಯುವಕ

Last Updated : Feb 13, 2023, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.