ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಅನುತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಕಟ್ಟಲು ಕೊನೆಯ ದಿನಾಂಕವನ್ನ ವಿಸ್ತರಿಸಲಾಗಿದೆ.
ಈವರೆಗೆ ನಾಲ್ಕು ಸಲ ವಿಸ್ತರಿಲಾಗಿದ್ದು, ಇದೀಗ ಮತ್ತೇ ವಿದ್ಯಾರ್ಥಿಗಳ ಮನವಿಯ ಮೇರೆಗೆ ಪರೀಕ್ಷೆಗೆ ಶುಲ್ಕ ಪಾವತಿಸುವ ದಿನಾಂಕವನ್ನು ಜನವರಿ 11 ರಿಂದ 22ರವೆಗೆ ಅವಕಾಶ ಕಲ್ಪಿಸಲಾಗಿದೆ.
ಅಂತಿಮ ದಿನಾಂಕದ ನಂತರ ದಂಡ ಶುಲ್ಕ 500, ವಿಶೇಷ ದಂಡ ಶುಲ್ಕ 700ರೂ ಹಾಗೂ 1320ರೂಪಾಯಿ ಆಗಿದೆ. ಇನ್ನು ಜಿಲ್ಲಾ ಉಪನಿರ್ದೇಶಕರು ಪ್ರಾಂಶುಪಾಲರಿಂದ ಸ್ವೀಕರಿಸಿದ ಪರೀಕ್ಷಾ ಅರ್ಜಿಗಳನ್ನು ಆನ್ ಲೈನ್ ಪೋರ್ಟಲ್ ನಲ್ಲಿ ಅಪಡೇಟ್ ಮಾಡಿರುವುದಕ್ಕೆ ಮುಚ್ಚಳಿಕೆ ಪತ್ರ ಪಡೆದ ನಂತರ ಕಾಲೇಜುವಾರು ಕ್ರೋಢಿಕೃತ ವಿದ್ಯಾರ್ಥಿಗಳ ಪಟ್ಟಿ, ಹಣ ಪಾವತಿಸಿರುವ ಮೂಲ ಚಲನ್ ಹಾಗೂ ಪತ್ರವನ್ನು ಖುದ್ದಾಗಿ ಕೇಂದ್ರ ಕಚೇರಿಗೆ ಜನವರಿ 28ಕ್ಕೆ ಸಲ್ಲಿಸಬೇಕು.
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಾಯಿಸಿಕೊಳ್ಳಲು ಸಹ ದಿನಾಂಕ ವಿಸ್ತರಿಸಲಾಗಿದೆ. ಶುಲ್ಕದ ಜೊತೆಗೆ ದಂಡ ಶುಲ್ಕ 500 ರೂ ಹಾಗೂ ವಿಶೇಷ ದಂಡ ಶುಲ್ಕ 350 ರೂ ಆಗಿದೆ. ಅಭ್ಯರ್ಥಿಗಳು ಕಾಲೇಜಿಗೆ ಶುಲ್ಕ ಪಾವತಿಸಲು ಕಡೆ ದಿನಾಂಕ ಜನವರಿ 11ರಿಂದ 22 ರವರೆಗೆ ವಿಸ್ತರಿಸಲಾಗಿದೆ.
ಪ್ರಥಮ- ದ್ವಿತೀಯ ಪಿಯುಸಿಯ ದಾಖಲಾತಿ ಮತ್ತು ಕಾಲೇಜು ಬದಲಾವಣೆ ದಿನಾಂಕವನ್ನು ವಿಸ್ತರಿಸಲಾಗಿದೆ.. 2020-21ನೇ ಶೈಕ್ಷಣಿಕ ಸಾಲಿಗೆ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪೋಷಕರು ವಿದ್ಯಾರ್ಥಿಗಳ ಮನವಿ ಮೇರೆಗೆ ಜನವರಿ 22ರವರಗೆ ವಿಸ್ತರಿಸಲಾಗಿದೆ. ದಾಖಲಾತಿ ಶುಲ್ಕವನ್ನ ಮಾರನೇಯ ದಿನದಂದು ಕಡ್ಡಾಯವಾಗಿ ಪಾವತಿಸಬೇಕು.