ಬೆಂಗಳೂರು: ರೆಡ್ ಅಲರ್ಟ್ ಅಡಿ ಬೆಂಗಳೂರನ್ನು ಗುರುತಿಸಿರುವುದರಿಂದ ಬೇರೆ ಬೇರೆ ರಾಜ್ಯಗಳ ವರದಿ ಆಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿದ್ದು, ಪರಿಸ್ಥಿತಿ ಕೈಜಾರುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ಸಭೆಯಲ್ಲಿ ದೆಹಲಿಯಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಿಎಂ ಗಮನಕ್ಕೆ ತಂದಿತು.
ಬೆಂಗಳೂರಿನ ಪಾಸಿಟಿವಿಟಿ ದರ ಹಾಗೂ ರಾಜ್ಯದ ಗಡಿ ಜಿಲ್ಲೆಗಳ ಪಾಸಿಟಿವಿಟಿ ದರದ ಬಗ್ಗೆಯೂ ಪಿಪಿಟಿ ಪ್ರೆಸೆಂಟೇಷನ್ ಮೂಲಕ ವಿವರಿಸಿತು. ಈ ವೇಳೆ ದೆಹಲಿ ಮಾದರಿಯನ್ನೇ ಅನುಸರಿಸುವುದು ಸೂಕ್ತ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ. ಎಂ ಕೆ ಸುದರ್ಶನ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಸಭೆಯಲ್ಲಿ ರಾಜ್ಯದಲ್ಲಿ ಬೆಡ್ ಸ್ಟೇಟಸ್ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡರು. ಎಷ್ಟು ಬೆಡ್ ವ್ಯವಸ್ಥೆ ಇದೆ, ಹೆಚ್ಚುವರಿಯಾಗಿ ಎಷ್ಟು ಬೆಡ್ ಹೆಚ್ಚಿಸಬೇಕು. ಬೆಡ್ ಗಳನ್ನ ಹೆಚ್ಚಳ ಮಾಡಿಕೊಳ್ಳಬೇಕು ಅಂತಾ ತಜ್ಞರಿಂದ ಬಂದಿರುವ ಮಾಹಿತಿ ಬಗ್ಗೆಯೂ ಸಮಾಲೋಚನೆ ನಡೆಸಿದರು.
ದೇಶದಲ್ಲಿ ಒಮಿಕ್ರಾನ್, ಕೋವಿಡ್ ಹೆಚ್ಚಿರುವ ರಾಜ್ಯಗಳ ಪರಿಸ್ಥಿತಿ ಬಗ್ಗೆ ಸಭೆಗೆ ಮಾಹಿತಿ ನೀಡಿದ ತಜ್ಞರು, ಮಹಾರಾಷ್ಟ್ರ, ಕೇರಳ, ತಮಿಳುನಾಡು, ದೆಹಲಿ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ಜಾರಿ ಮಾಡಿರುವ ಟಫ್ ರೂಲ್ಸ್ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಗರ್ಭಿಣಿ ಪತ್ನಿ, ಮೂರು ವರ್ಷದ ಮಗನ ಜೀವಂತ ಸುಟ್ಟು ಹಾಕಿದ ಪಾಪಿ ಗಂಡ
ಕೋವಿಡ್ ಸೋಂಕಿನ ಪ್ರಮಾಣ ಶೇ5 ಕ್ಕಿಂತ ಹೆಚ್ಚಾದರೆ ಲಾಕ್ ಡೌನ್ ಗೆ ತಜ್ಞರು ಶಿಪಾರಸು ಮಾಡಿದ್ದಾರೆ. ಪ್ರತಿಯೊಂದಕ್ಕೂ ಎರಡು ಡೋಸ್ ಲಸಿಕೆ ಕಡ್ಡಾಯ. ವೀಕೆಂಡ್ ಕರ್ಫ್ಯೂ ಜಾರಿ ಮಾಡುವಂತೆ ಸಿಎಂಗೆ ಸಮಿತಿ ಸಲಹೆ ನೀಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಹಾಫ್ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಿದರು ಎನ್ನಲಾಗ್ತಿದೆ.
ಎರಡು ವಾರ ನೈಟ್ ಕರ್ಫ್ಯೂ ಮುಂದುವರಿಕೆ ಜೊತೆಗೆ ಕಠಿಣ ರೂಲ್ಸ್ ಜಾರಿ ಮಾಡಬೇಕು, ಪ್ರವಾಸೋದ್ಯಮ ಸ್ಥಳಗಳಿಗೆ ನಿರ್ಬಂಧ ವಿಧಿಸಬೇಕು, ಸಾರ್ವಜನಿಕ ಸಮಾರಂಭಗಳಿಗೆ ಜನರ ಮಿತಿ ನಿಗದಿಪಡಿಸಬೇಕು ಎಂದು ಸಮಿತಿ ತಿಳಿಸಿದೆ.
ಶಾಲೆ-ಕಾಲೇಜು ಬಗ್ಗೆಯೂ ಚರ್ಚೆ ನಡೆದಿದ್ದು, ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವ ಬಗ್ಗೆ ಚರ್ಚೆ ನಡೆಸಲಾಯಿತು. ನಮ್ಮ ರಾಜ್ಯದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದು, ವ್ಯಾಕ್ಸಿನೆಷನ್ ಆಗದ ಮಕ್ಕಳಿಗೆ ರಜೆ ನೀಡಿ ಅನ್ಲೈನ್ ತರಗತಿ ಮಾಡಿದರೆ ಹೇಗೆ ಎಂಬ ಸಮಾಲೋಚನೆ ನಡೆಸಲಾಯಿತು.