ಬೆಂಗಳೂರು : ಆಂಧ್ರಪ್ರದೇಶ ಹಾಗೂ ಒಡಿಶಾ ಸೇರಿ ವಿವಿಧ ರಾಜ್ಯಗಳಿಂದ ನಗರಕ್ಕೆ ತಂದು ಗಾಂಜಾ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮಹಿಳೆ ಸೇರಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿ 79 ಕೆ.ಜಿ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ರೈಲು ಹಾಗೂ ಬಸ್ ಮಾರ್ಗವಾಗಿ ನಗರದಲ್ಲಿ ಅವ್ಯವಾಹತವಾಗಿ ನಗರಕ್ಕೆ ತಂದು ಸಣ್ಣ ಪೊಟ್ಟಣಗಳಲ್ಲಿ ಇಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಮಧುಸ್ಮಿತಾ, ನರೇಶ್, ದಿಲ್ಮಾಜ್, ಸುಬ್ರತ್ ಪ್ರಧಾನ್, ರಾಜ್ ಮೋಹನ್ ಹಾಗೂ ಲಕ್ಷ್ಮೀಕಾಂತ್ ಸೇರಿ ಒಟ್ಟು 8 ಮಂದಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಪಾಲಿ ಹೌಸ್ ಮಾದರಿಯಲ್ಲಿ ಮನೆಯಲ್ಲೇ ಗಾಂಜಾ ಬೆಳೆದ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳ ಬಂಧನ
ಸತತ ಮೂರು ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ 79 ಕೆಜಿ ಗಾಂಜಾ ಜಪ್ತಿ ಮಾಡಿದ್ದು, ಆಂಧ್ರ, ಒಡಿಶಾದಿಂದ ಬರುತ್ತಿದ್ದ ಗಾಂಜಾವನ್ನ ಅಬಕಾರಿ ಇಲಾಖೆಯ ನಗರದ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ವೀರಣ್ಣ ಬಾಗೆವಾಡಿ ನೇತೃತ್ವದ ತಂಡ ತಡೆದಿದೆ. ಅಬಕಾರಿ ಅಧಿಕಾರಿಗಳ ಕೈಗೆ ಲೇಡಿ ಪೆಡ್ಲರ್ ಲಾಕ್ ಆಗಿದ್ದು ಒಡಿಶಾದಿಂದ ಬರ್ತಿದ್ದ ಪೆಡ್ಲರ್ ಮದುಸ್ಮಿತಾ ಮತ್ತು ನರೇಶ್ ಸ್ಥಳೀಯವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇಬ್ಬರನ್ನ ಅರೆಸ್ಟ್ ಮಾಡಿ ಸುಮಾರು 18 ಕೆಜಿ ಗಾಂಜಾ ಸೀಜ್ ಮಾಡಿದ್ದಾರೆ.
ಇದನ್ನೂ ಓದಿ: ಡಿಜಿ, ಐಜಿಪಿ ಸೂಚನೆಯಿಂದ ಪೊಲೀಸರು ಅಲರ್ಟ್: ಮಾದಕ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ
ಒಡಿಶಾ ಮೂಲದ ಆರು ಜನ ಅರೆಸ್ಟ್: ಗಾಂಜಾವನ್ನು ಒಣಗಿಸಿ ಇಟ್ಟಿಗೆ ರೀತಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದ ಜೋಡಿ ಒಡಿಶಾದಿಂದ ಬರುತ್ತಿದ್ದ ಗಾಂಜಾವನ್ನು ಸಣ್ಣ, ಸಣ್ಣ ಪ್ಯಾಕ್ ಮಾಡಿ ಸ್ಥಳೀಯವಾಗಿ ಮಾರಾಟ ಮಾಡುತ್ತಿತ್ತು. ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳನ್ನ ಟಾರ್ಗೆಟ್ ಮಾಡುತ್ತಿದ್ದ ಗಾಂಜಾ ಗ್ಯಾಂಗ್ನ ಮತ್ತೆರಡು ತಂಡಗಳನ್ನ ಬಂಧಿಸಲಾಗಿದೆ. ಒಂದು ಪ್ರಕರಣದಲ್ಲಿ 18 ಕೆಜಿ ಹಾಗೂ ಮತ್ತೊಂದು ಪ್ರಕರಣದಲ್ಲಿ 48 ಕೆಜಿ ಗಾಂಜಾ ಸೀಜ್ ಮಾಡಲಾಗಿದೆ. ಒಡಿಶಾ ಮೂಲದ ಆರು ಜನ ಅರೆಸ್ಟ್ ಮಾಡಿದ್ದು, ಅಬಕಾರಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಅಸ್ಸೋಂನ ಖಟ್ಖಾತಿಯಲ್ಲಿ ಗುಂಡಿನ ದಾಳಿ: ಹೆರಾಯಿನ್ ಸಮೇತ ಇಬ್ಬರು ಆರೋಪಿಗಳು ಅಂದರ್..!
ಇನ್ನು ಕಳೆದ ಒಂದು ವರ್ಷದಲ್ಲಿ 73 ಪ್ರಕರಣವನ್ನು ಬೇಧಿಸಿದ್ದು, 65 ಜನ ಆರೋಪಿಗಳನ್ನ ಬಂಧಿಸಲಾಗಿದೆ. ಅಬಕಾರಿ ಇಲಾಖೆ 150 ಕೆಜಿ ಗಾಂಜಾ ವಶಪಡಿಸಿಕೊಂಡಿಸಿದ್ದಾರೆ. ಇಲಾಖೆಯಲ್ಲಿ ತಂತ್ರಜ್ಞಾನವನ್ನ ಬಳಕೆ ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳಿಗೆ ರೈಲ್ವೆ ಪೊಲೀಸರು ಹಾಗೂ ಲಾ ಅಂಡ್ ಆರ್ಡರ್ ಪೊಲೀಸರು ಸಾಥ್ ನೀಡಿರೋದಾಗಿ ಡಿಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: Bengaluru crime: ಜ್ಯೂಸ್, ನೀರಿನಲ್ಲಿ ಬೆರೆಸಿ ಕುಡಿದರೆ ನಶೆ.. ಬೆಂಗಳೂರಿನಲ್ಲಿ ಹೊಸ ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು