ಬೆಂಗಳೂರು : ಕೋವಿಡ್ ಪ್ರಕರಣಗಳು ಹೆಚ್ಚಾಗ್ತಿದೆ, ಸರ್ಕಾರ ತಜ್ಞರ ಅಭಿಪ್ರಾಯ ಪಡೆದು ಲಾಕ್‌ಡೌನ್ ಬಗ್ಗೆ ನಿರ್ಧರಿಸಲಿ ಎಂದು ಮಾಜಿ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿ ತಜ್ಞರು ಲಾಕ್‌ಡೌನ್ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ. ರಾಜಕೀಯ ತಜ್ಞರು ಹೇಳಿದ್ದರೋ ಇಲ್ವೋ ಗೊತ್ತಿಲ್ಲ. ರಾತ್ರಿ ಸಮಯದಲ್ಲಿ ಕೊರೊನಾ ಕರ್ಪ್ಯೂ ಜಾರಿ ಮಾಡಿದ್ದಾರೆ. ಇದು ರಾಜಕೀಯ ತಜ್ಞರ ಸಲಹೆ ಎಂದು ವ್ಯಂಗ್ಯವಾಡಿದರು.
ಕೊರೊನಾ ರಾತ್ರಿ ಸಮಯದಲ್ಲಿ ಓಡಾಡಿ, ಹಗಲೊತ್ತು ಮಲಗುತ್ತಾ..? ಕರ್ಫ್ಯೂ ಮಾಡುವುದಾದರೆ ಹಗಲೊತ್ತು ಮಾಡಲಿ. ಪ್ರಧಾನಿ ಲಕ್ಷಗಟ್ಟಲೆ ಜನ ಸೇರಿಸಿ ಭಾಷಣ ಮಾಡ್ತಾರೆ. ಅಲ್ಲಿ ಕೊರೊನಾ ಹರಡಲ್ವಾ ಎಂದು ಪ್ರಶ್ನಿಸಿದರು. ಬರೀ ಅಪಾರ್ಟ್ಮೆಂಟ್ ಇರುವ ಕಡೆ ಲಸಿಕೆ ಕೊಡುತ್ತಿದ್ದಾರೆ. ಬಡ ಜನರು ಇರುವ ಕಡೆ ಕೂಡ ಲಸಿಕೆ ಕೊಡ್ಲಿ ಎಂದರು.
ಓದಿ : 'ರಾಜ್ಯದ 1 ಕೋಟಿ ಕುಟುಂಬಗಳಿಗೆ ತಲಾ ₹10 ಸಾವಿರ ಕೊಡಿ.. ಆಮೇಲೆ ಲಾಕ್‌ಡೌನ್ ಮಾಡಿ..'
ಕೊರೊನಾ ನಿಯಂತ್ರಣ ಸರ್ಕಾರ ತೆಗೆದುಕೊಳ್ಳುವ ಕ್ರಮಗಳಿಗೆ ನಮ್ಮ ಬೆಂಬಲ ಇರುತ್ತದೆ. ಆದರೆ, ಮೋದಿ, ಅಮಿತ್ ಶಾ ಫಾಲೋ ಮಾಡಲ್ಲ ಅಂದ್ರೆ ಜನ ಮಾಡ್ತಾರಾ..? ಎಲ್ಲರೂ ಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರೆ. ಸಿದ್ದರಾಮಯ್ಯ, ಯಡಿಯೂರಪ್ಪ ಎಲ್ಲರ ಸಭೆಯಲ್ಲೂ ಜನ ಸೇರ್ತಾರೆ. ಹಾಗಾದರೆ ಕೊರೊನಾ ನಿಯಂತ್ರಣ ಮಾಡಬೇಕಾಗಿದ್ದು ಯಾರು ಎಂದು ಪ್ರಶ್ನಿಸಿದರು.