ಬೆಂಗಳೂರು: ಸಮ್ಮಿಶ್ರ ಸರ್ಕಾರದ ಪತನ, ಆನಂತರ ನಡೆದ ವಿದ್ಯಮಾನಗಳ ತೀವ್ರ ಒತ್ತಡದ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಂಗಡಿಗರ ಜತೆ ಇಂದು ಹೋಟೆಲ್ನಲ್ಲಿ ಗರಿಗರಿ ಮಸಾಲೆ ದೋಸೆ ಸವಿದರು.
ಮಲ್ಲೇಶ್ವರದ ಸಿಟಿಆರ್ ಹೋಟೆಲ್ಗೆ ತಮ್ಮ ಆಪ್ತರಾದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಅಶೋಕ್ ಪಟ್ಟಣ, ಪ್ರಕಾಶ್ ರಾಥೋಡ್ ಮತ್ತಿತರರ ಜತೆ ಸಿದ್ದರಾಮಯ್ಯ ದೋಸೆ ಸವಿದರು. ಇಂದು ಬೆಳಗ್ಗೆಯಿಂದಲೂ ತೀವ್ರ ಒತ್ತಡದಿಂದ ಬಳಲಿದ್ದ ಅವರು, ಸಂಜೆ ಆರಾಮಾಗಿ ದೋಸೆ ಸವಿದು, ವಿಶ್ರಾಂತಿ ಮಾಡಿದ್ರು.
ಮಧ್ಯಾಹ್ನ ಮಾಜಿ ಸಚಿವ ಕೃಷ್ಣಭೈರೇಗೌಡ ನಿವಾಸದಲ್ಲಿ ಭೋಜನಕ್ಕೆ ತೆರಳಿದ್ದ ಸಿದ್ದರಾಮಯ್ಯ ಅಲ್ಲೇ ಕೆಲಕಾಲ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು. ಆ ಬಳಿಕ ಸದಾಶಿವನಗರದ ಎಸ್.ಎಂ. ಕೃಷ್ಣ ನಿವಾಸಕ್ಕೆ ತೆರಳಿ ಸಿದ್ದಾರ್ಥ್ ಕಣ್ಮರೆ ಹಿನ್ನೆಲೆಯಲ್ಲಿ ಸಮಾಧಾನ ಹೇಳಿದ್ರು. ಸಂಜೆ ತಮ್ಮ ನಿವಾಸ ಕಾವೇರಿಗೆ ವಾಪಸಾಗುವ ಮೊದಲು ಮಲ್ಲೇಶ್ವರಂನ ಹೋಟೆಲ್ಗೆ ತೆರಳಿದರು.
ಸಾಮಾನ್ಯವಾಗಿ ಶಿವಾನಂದ ಸರ್ಕಲ್ ಸಮೀಪದ ಜನಾರ್ಧನ್ ಹೋಟೆಲ್ ಅವರ ನೆಚ್ಚಿನ ತಾಣಗಳಲ್ಲಿ ಒಂದು. ಅಂತೆಯೇ ಸಿಟಿಆರ್ ಹೋಟೆಲ್ಗೂ ಸಹ ಸಿದ್ದರಾಮಯ್ಯ ಆಗಾಗ ಭೇಟಿ ನೀಡುತ್ತಿರುತ್ತಾರೆ.