ETV Bharat / state

ಯಾವುದೇ ಕಾರಣಕ್ಕೂ ದೂರದರ್ಶನ, ಆಕಾಶವಾಣಿಯಲ್ಲಿ ಪ್ರಸಾರ ಆಗುತ್ತಿರುವ ಪ್ರಾದೇಶಿಕ ಕಾರ್ಯಕ್ರಮಗಳು ನಿಲ್ಲಬಾರದು:ಹೆಚ್​ಡಿಕೆ

ಅಕ್ಟೋಬರ್‌ 31ರಿಂದ ಕಲಬುರಗಿ ಪ್ರಾದೇಶಿಕ ಕೇಂದ್ರಕ್ಕೂ ಬೀಗ ಜಡಿಯಲು ಪ್ರಸಾರ ಭಾರತಿ ಹೊರಟಿದ್ದು, ಯಾವುದೇ ಕಾರಣಕ್ಕೂ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಪ್ರಸಾರ ಆಗುತ್ತಿರುವ ಪ್ರಾದೇಶಿಕ ಕಾರ್ಯಕ್ರಮಗಳು ನಿಲ್ಲಬಾರದು ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಟ್ವೀಟ್​ ಮೂಲಕ ಆಗ್ರಹಿಸಿದ್ದಾರೆ.

ex cm hd kumarswamy tweet
ಹೆಚ್​ಡಿಕೆ
author img

By

Published : Oct 19, 2021, 10:31 PM IST

ಬೆಂಗಳೂರು:ʼ ಒಂದೇ ದೇಶ, ಒಂದೇ ಭಾಷೆʼ ಎನ್ನುವ ಕರಾಳ ನೀತಿಯ ಮೂಲಕ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಈಗ ನಮ್ಮ ನಾಡಿನ ಗ್ರಾಮೀಣ, ಜಾನಪದ, ಸಾಂಸ್ಕೃತಿಕ ಸೊಗಡಿನ ದನಿಯಾಗಿರುವ ಆಕಾಶವಾಣಿ ಮತ್ತು ದೂರದರ್ಶನದ ಪ್ರಾದೇಶಿಕ ಕೇಂದ್ರಗಳಿಗೆ ಬೀಗ ಜಡಿಯುವ ಹೇಯ ಕೃತ್ಯಕ್ಕೆ ಕೈಹಾಕಿರುವುದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಖಂಡಿಸಿದ್ದಾರೆ.

  • ದೇಶ ಭಾಷೆಗಳಲ್ಲಿ ಒಂದಾದ ಹಿಂದಿಯನ್ನೇ ಉಳಿಸಿ ಬೆಳೆಸುವ ಹಾಗೂ ಅದನ್ನೇ ಕನ್ನಡಿಗರ ಮೇಲೆ ಹೇರುವ ಏಕೈಕ ದುರಾಲೋಚನೆಯಿಂದ ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು ಕಡೆಗಣಿಸಿ, ಮೂಲೋತ್ಪಾಟನೆ ಮಾಡಲು ಕೇಂದ್ರ ಸರಕಾರ ಈ ಮೂಲಕ ಹೊಂಚು ಹಾಕಿರುವುದು ಗೊತ್ತಾಗುತ್ತದೆ. 4/5

    — H D Kumaraswamy (@hd_kumaraswamy) October 19, 2021 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ವರದಿ ಮತ್ತು ಸಂಪಾದಕೀಯ ಅತ್ಯಂತ ಕಳವಳಕಾರಿ. ವಿವಿಧತೆಯಲ್ಲಿ ಏಕತೆಯನ್ನು ಮೈದುಂಬಿಕೊಂಡು ಜಗತ್ತಿಗೆ ʼಬಹುತ್ವತೆಯ ಆದರ್ಶʼ ಆಗಿರುವ ಭಾರತದ ಪ್ರಾದೇಶಿಕ ವೈವಿಧ್ಯಮಯ ಅನನ್ಯ ಸಾಂಸ್ಕೃತಿಕ, ಜಾನಪದ ಸಂಪತ್ತಿಗೆ ಕೇಂದ್ರ ಸರ್ಕಾರ ಕೊಳ್ಳಿ ಇಡಲು ಹೊರಟಿದೆ ಎಂದು ದೂರಿದ್ದಾರೆ.

ಈಗಾಗಲೇ ಡಿಡಿ, ಆಕಾಶವಾಣಿಯ ಒಂದೊಂದೇ ಪ್ರಾದೇಶಿಕ ಕಾರ್ಯಕ್ರಮ ಸ್ಥಗಿತಗೊಳಿಸಿದ ನಂತರ ಪ್ರಾದೇಶಿಕ ಪ್ರಸಾರ ಕೇಂದ್ರಗಳನ್ನೂ ಮುಚ್ಚುವ ಹುನ್ನಾರ ನಡೆಸಿದೆ. ಅಕ್ಟೋಬರ್‌ 31ರಿಂದ ಕಲಬುರಗಿ ಪ್ರಾದೇಶಿಕ ಕೇಂದ್ರಕ್ಕೂ ಬೀಗ ಜಡಿಯಲು ಪ್ರಸಾರ ಭಾರತಿ ಹೊರಟಿದೆ. ಇದು ಕನ್ನಡ ವಿರೋಧಿ ನಡೆ, ಪ್ರಾದೇಶಿಕ ಭಾಷೆಗಳಿಗೆ ಚರಮಗೀತೆ ಹಾಡುವ ದಮನ ನೀತಿ.

ದೇಶ ಭಾಷೆಗಳಲ್ಲಿ ಒಂದಾದ ಹಿಂದಿಯನ್ನೇ ಉಳಿಸಿ ಬೆಳೆಸುವ ಹಾಗೂ ಅದನ್ನೇ ಕನ್ನಡಿಗರ ಮೇಲೆ ಹೇರುವ ಏಕೈಕ ದುರಾಲೋಚನೆಯಿಂದ ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು ಕಡೆಗಣಿಸಿ, ಮೂಲೋತ್ಪಾಟನೆ ಮಾಡಲು ಕೇಂದ್ರ ಸರ್ಕಾರ ಈ ಮೂಲಕ ಹೊಂಚು ಹಾಕಿರುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಪ್ರಸಾರ ಆಗುತ್ತಿರುವ ಪ್ರಾದೇಶಿಕ ಕಾರ್ಯಕ್ರಮಗಳು ನಿಲ್ಲಬಾರದು, ಕಲಬುರಗಿ ಸೇರಿ ಯಾವುದೇ ಭಾಗದಲ್ಲಿರುವ ಪ್ರಾದೇಶಿಕ ಪ್ರಸಾರ ಕೇಂದ್ರಗಳನ್ನು ಮುಚ್ಚಬಾರದು ಎಂದು ಹೆಚ್​​ಡಿಕೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.