ETV Bharat / state

ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯ ಸ್ಥಿರ: ಅಪೋಲೋ ಆಸ್ಪತ್ರೆ

Health bulletin on HD Kumaraswamy: ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮಾಜಿ ಸಿಎಂ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ
author img

By ETV Bharat Karnataka Team

Published : Aug 30, 2023, 5:26 PM IST

Updated : Aug 30, 2023, 10:34 PM IST

ಅಪೋಲೋ ಆಸ್ಪತ್ರೆಯ ಡಾ. ಸತೀಶ್ ಚಂದ್ರ ಮಾತನಾಡುತ್ತಿರುವುದು

ಬೆಂಗಳೂರು : ತೀವ್ರ ಜ್ವರದಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಜಯನಗರದಲ್ಲಿರುವ ಅಪೊಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಸ್ತು ಹಾಗೂ ತೀವ್ರ ಜ್ವರದಿಂದಾಗಿ ಇಂದು ಬೆಳಗಿನಜಾವ 3.40ರ ಸುಮಾರಿಗೆ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ತಕ್ಷಣ ಅವರನ್ನು ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗಿದೆ. ಕುಮಾರಸ್ವಾಮಿ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಪ್ರಕಟಣೆಯಲ್ಲಿ ಆಸ್ಪತ್ರೆ ತಿಳಿಸಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ನೀಡಲಾಗುವುದು ಎಂದು ಹೇಳಿದೆ.

ಹೆಚ್ ಡಿ ಕುಮಾರಸ್ವಾಮಿ ಹೆಲ್ತ್​ ಬುಲೆಟಿನ್
ಹೆಚ್ ಡಿ ಕುಮಾರಸ್ವಾಮಿ ಹೆಲ್ತ್​ ಬುಲೆಟಿನ್

''ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಆರಾಮಾಗಿದ್ದಾರೆ. ರಾಜ್ಯದ ಜನತೆ ಗಾಬರಿಯಾಗಬೇಡಿ'' ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ''ವೈದ್ಯರು ಗುರುವಾರ ಡಿಸ್ಚಾರ್ಜ್ ಮಾಡ್ತೀವಿ ಅಂದ್ರು. ನಾನೇ ಬೇಡ ಅಂದಿದ್ದೇನೆ. ಶುಕ್ರವಾರದಂದು ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಲಿದ್ದಾರೆ'' ಎಂದು ತಿಳಿಸಿದರು. ''ಅಲ್ಲದೇ ಯಾರೂ ಸಹ ಆತಂಕಕ್ಕೆ ಒಳಗಾಗಬೇಡಿ. ಊಹಾಪೋಹದ ಸುದ್ದಿಗಳನ್ನು ಹರಡಿಸಬೇಡಿ'' ಎಂದು ಸಹ ಅವರು ಇದೇ ವೇಳೆ ಮನವಿ ಮಾಡಿದರು.

ಅಪೋಲೋ ಆಸ್ಪತ್ರೆಯ ಡಾ. ಸತೀಶ್ ಚಂದ್ರ ಮಾತನಾಡಿ, ''ಕುಮಾರಸ್ವಾಮಿ ಅವರು ಮುಂಜಾನೆ 3 ಗಂಟೆ ಸುಮಾರಿಗೆ ನಮ್ಮ ಆಸ್ಪತ್ರೆಗೆ ಬಂದ್ರು. ಅವರು ಬಂದಾಗ ಮಾತಿನಲ್ಲಿ ತೊದಲು ಇತ್ತು. ಕೈ ನಲ್ಲಿ ವೀಕ್ನೆಸ್ ಇತ್ತು. ಅದಕ್ಕೆ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದ್ರು. ಅವರಿಗೆ ತಕ್ಷಣವೇ ಪರಿಶೀಲನೆ ನಡೆಸಲಾಯಿತು. ಎಂಆರ್​ಐ ಸ್ಕ್ಯಾನ್ ಮಾಡಿ ಚಿಕಿತ್ಸೆಯನ್ನು ನೀಡಿದ್ದೇವೆ. ತಕ್ಷಣವೇ ಚಿಕಿತ್ಸೆ ನೀಡಿರುವುದರಿಂದ ಗುಣಮುಖರಾಗಿದ್ದಾರೆ. ಈಗ ಎಲ್ಲರ ಜೊತೆಗೆ ಚೆನ್ನಾಗಿ ಮಾತನಾಡುತ್ತಿದ್ದಾರೆ'' ಎಂದು ಮಾಹಿತಿ ನೀಡಿದರು.

''ಅವರ ಹಾರ್ಟ್​ಗೆ ಸಮಸ್ಯೆ ಇಲ್ಲ. ರಕ್ತ ಚಲನೆ ಕಡಿಮೆ ಆಗಿ ವೀಕ್ನೆಸ್ ಆಗಿತ್ತು. ಇವತ್ತು ನೋಡಿ ನಾಳೆ ವಾರ್ಡ್​ಗೆ ಶಿಫ್ಟ್ ಮಾಡ್ತೀವಿ. ಮುಂದೆ ಯಾವುದೇ ತೊಂದರೆ ಇಲ್ಲ. ವಿಶ್ರಾಂತಿ ಏನು ಬೇಡ, ಎರಡು ಮೂರು ದಿನಗಳ ಬಳಿಕ ಅವರು ಕೆಲಸ ಮಾಡಬಹುದು'' ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಬೇಗ ಗುಣಮುಖರಾಗುವಂತೆ ಬಿಜೆಪಿ ನಾಯಕರು ಆಶಿಸಿದ್ದು, ವೈದ್ಯರನ್ನು ಸಂಪರ್ಕಿಸಿ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಪೋಲೋ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದರು. ಅಲ್ಲದೇ ಚಿಕಿತ್ಸೆಗೆ ಸ್ಪಂದಿಸಿರುವ ಹಾಗೂ ಆರೋಗ್ಯ ಸ್ಥಿರವಾಗಿರುವ ಕುರಿತು ಮಾಹಿತಿ ಪಡೆದುಕೊಂಡು ಶೀಘ್ರ ಗುಣಮುಖರಾಗುವಂತೆ ಆಶಿಸಿದರು.

  • ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ @hd_kumaraswamy ಅವರು ಅದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.

    ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಆರೋಗ್ಯ ವಿಚಾರಿಸಿದ್ದೇನೆ.

    — Basavaraj S Bommai (@BSBommai) August 30, 2023 " class="align-text-top noRightClick twitterSection" data=" ">

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದರು. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಬೊಮ್ಮಾಯಿ, ಕುಮಾರಸ್ವಾಮಿ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದಿದ್ದಾರೆ. ಈ ಬಗ್ಗೆ ಬಸವರಾಜ ಬೊಮ್ಮಾಯಿ ಟ್ವೀಟ್​ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದ ಹಿನ್ನೆಲೆ ಮಾಜಿ ಸಿಎಂ ಹೆಚ್​ಡಿಕೆ ಆಸ್ಪತ್ರೆಗೆ ದಾಖಲು.. ಕೋಲಾರ ಭೇಟಿ ರದ್ದು

ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಇಂದು ಅವರ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಅನಾರೋಗ್ಯದ ಹಿನ್ನೆಲೆ ಮಾಜಿ ಸಿಎಂ ಅವರ ಶ್ರೀನಿವಾಸಪುರ ಭೇಟಿ ರದ್ದಾಗಿದೆ ಎಂದು ಪಕ್ಷ ಬೆಳಗ್ಗೆಯೇ ಸ್ಪಷ್ಟಪಡಿಸಿದೆ. ಜೆಡಿಎಸ್​ ಪಕ್ಷದ ಬಲವರ್ಧನೆಗೆ ಮುಂದಾಗಿರುವ ದಳಪತಿಗಳು, ಸೆಪ್ಟೆಂಬರ್​ನಲ್ಲಿ ರಾಜ್ಯ ಪ್ರವಾಸ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮೊದಲ ವಾರದಲ್ಲಿ ಕೋರ್ ಕಮಿಟಿ ಸಭೆ ನಡೆಸಿ ನಂತರ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗುವುದಾಗಿ ಜೆಡಿಎಸ್​ ತಿಳಿಸಿದೆ.

Last Updated : Aug 30, 2023, 10:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.