ETV Bharat / state

ಜನಪ್ರತಿನಿಧಿಗಳಿಗೆ ಸಾಯುವವರಿಗೂ ಪಿಂಚಣಿ ಇದೆ: ಆದರೆ ನಮಗೇಕೆ ಇಲ್ಲ? - ಪಿಂಚಣಿ

ಅರೆಸೇನಾ ಯೋಧರಿಗೆ ಪಿಂಚಣಿ ಸೌಕರ್ಯ ನೀಡುವಂತೆ ಆಗ್ರಹಿಸಿ ಮಾಜಿ ಸೈನಿಕರು ನಗರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Protest by former Central Reserve Force employees
ಮಾಜಿ ಸೈನಿಕರಿಂದ ಪ್ರತಿಭಟನೆ
author img

By

Published : Dec 13, 2022, 7:45 PM IST

ಬೆಂಗಳೂರು: ಎಂಎಲ್‌ಎ, ಎಂಪಿ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸಾಯುವವರಿಗೂ ಪಿಂಚಣಿ ನೀಡಲಾಗುತ್ತದೆ. ಆದರೆ, ದೇಶಕ್ಕಾಗಿ ಪ್ರಾಣ ನೀಡಿದ ಅದೆಷ್ಟೋ ಅರೆಸೇನಾ ಯೋಧರಿಗೆ ಈವರೆಗೂ ಪಿಂಚಣಿ ಸೌಕರ್ಯ ನೀಡಲಾಗುತ್ತಿಲ್ಲ ಎಂದು ಸಿಪಿಎಂಎಫ್ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹನುಮಂತರಾಜು ಬೇಸರ ಹೊರಹಾಕಿದರು.

Protest by former Central Reserve Force employees
ಮಾಜಿ ಸೈನಿಕರಿಂದ ಪ್ರತಿಭಟನೆ

ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಸಾಂವಿಧಾನಿಕ ಹಕ್ಕಿಗಾಗಿ ಹೋರಾಟದಲ್ಲಿ ಮಾತನಾಡಿದ ಅವರು, ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಹೋರಾಟ ನೆಡೆಸಲಾಗುತ್ತಿದೆ. ರಾಜ್ಯಾದ್ಯಂತ ಸುಮಾರು 2,500 ಸಾವಿರ ಮಾಜಿ ಯೋಧರು ಈ ಹೋರಾಟದಲ್ಲಿ ಪಾಲ್ಕೊಂಡಿದ್ದಾರೆ.

150ಕ್ಕೂ ಹೆಚ್ಚು ಯೋಧರು ಪ್ರತಿ ತಾಲೂಕಿನಿಂದ ಪಾಲ್ಗೊಂಡಿದ್ದಾರೆ. 2004ರಿಂದ ಮಾಜಿ ಯೋಧರಿಗೆ ಸರ್ಕಾರ ಪಿಂಚಣಿ ನಿಲ್ಲಿಸಿದ್ದು, ಸರ್ಕಾರದ ಈ ಧೋರಣೆ ಖಂಡಿಸಿ ನಾವು ಬೀದಿಗಿಳಿದು ಹೋರಾಟ ಮಾಡುವಂತಾಗಿದೆ ಎಂದರು. ಈ ಹಿಂದೆ ಯೋಧರು ಮತ್ತು ಅರೆಸೇನಾ ಯೋಧರ ಕಲ್ಯಾಣ ಸಮಿತಿ ಒಟ್ಟಿಗೆ ರಚಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ನ್ಯಾಯ ಒದಗಿಸಿದ್ದರು.

ಆದರೆ, ಆನಂತರ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಕಿತ್ತು ಹಾಕಿದ್ದರು. ಹೀಗಾಗಿ ನಮಗೆಲ್ಲಾ ತುಂಬಾ ಆನ್ಯಾಯವಾಗಿದ್ದು, ಈ ಅನ್ಯಾಯದ ಬಗ್ಗೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ, ದೇಶಕ್ಕಾಗಿ ಪ್ರಾಣ ನೀಡಿದ ಅದೆಷ್ಟೋ ಅರೆಸೇನಾ ಯೋಧರಿಗೆ ಮಾತ್ರ ಈವರೆಗೂ ಪಿಂಚಣಿ ಸೌಕರ್ಯ ನೀಡುತ್ತಿಲ್ಲ ಎಂದು ದೂರಿದರು.

ಎಲ್ಲ ಸೌಲಭ್ಯಗಳು ದೊರೆಯಬೇಕು: ಯೋಧರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನಮಗೂ ನೀಡಬೇಕು. ಸಂಸತ್‌ ಹಾಗೂ ಪುಲ್ವಾಮಾ ದಾಳಿಯಾದಾಗ ದೇಶಕ್ಕಾಗಿ ಪ್ರಾಣ ಕೊಟ್ಟವರು ನಮ್ಮ ಅರೆಸೇನಾ ಯೋಧರು. ಈಗ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಈಡೇರಿಸದಿದ್ದರೆ ಬೆಳಗಾವಿ ಅಧಿವೇಶನದ ವೇಳೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಮಂಡಳಿ ಸ್ಥಾಪಿಸಿ: ಕೇಂದ್ರೀಯ ಅರೆಸೇನಾ ಪಡೆಗಳ ಯೋಧರು, ಮಾಜಿ ಯೋಧರು ಹಾಗೂ ಹುತಾತ್ಮ ಯೋಧರ ಕುಟುಂಬಗಳು ನ್ಯಾಯಯುತ ಬೇಡಿಕೆಗಳನ್ನು ಇಟ್ಟಿದೆ. ಎಲ್ಲ ಅರೆಸೇನಾ ಪಡೆಗಳಲ್ಲಿ ಸೇವೆ ಮಾಡುತ್ತಿರುವ ಯೋಧರು, ಸೇವೆಯಿಂದ ನಿವೃತ್ತರಾದ ರಾಜ್ಯದ ಮಾಜಿ ಯೋಧರು, ಹುತಾತ್ಮರ ಕುಟುಂಬಗಳ ಕ್ಷೇಮಾಭಿವೃದ್ಧಿಗಾಗಿ ರಾಜ್ಯದ ರಾಜಧಾನಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಮಂಡಳಿಯನ್ನು ಸ್ಥಾಪನೆ ಮಾಡಬೇಕು.

ಅದರಲ್ಲಿ ಕೆಲಸ ಮಾಡಲು ಅರೆಸೇನಾ ಪಡೆಗಳ ನಿವೃತ್ತ ಯೋಧರನ್ನು ವಾರ್ಷಿಕ ಒಪ್ಪಂದ ಮೇಲೆ ನೇಮಕ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಹುದ್ದೆಗಳಿಗೆ ಹಾಗೂ ಸರ್ಕಾರದ ಸ್ವಾಯತ್ತ ಸಂಸ್ಥೆಗಳ ಹುದ್ದೆಗಳಿಗೆ ಅರ್ಹತೆ ಆಧಾರದ ಮೇಲೆ ನೇಮಿಸಿಕೊಳ್ಳಬೇಕು ಎಂಬ ಹಲವು ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ.

ಇದನ್ನೂ ಓದಿ: ಮುರುಘಾ ಮಠ ಟ್ರಸ್ಟ್​ಗೆ ಆಡಳಿತಾಧಿಕಾರಿ ನೇಮಕ: ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ನೇಮಕ ಮಾಡಿ ಸರ್ಕಾರದ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.