ಬೆಂಗಳೂರು: ಕೋವಿಡ್ನಿಂದ ಮೃತಪಟ್ಟಿರುವ ಬಿಪಿಎಲ್ ಕಾರ್ಡ್ದಾರ ವ್ಯಕ್ತಿಯ ಕುಟುಂಬಕ್ಕೆ ಒಟ್ಟು 1.50 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರದ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಪ್ರಾಧಿಕಾರದಿಂದ 1 ಲಕ್ಷ ರೂ. ಪರಿಹಾರ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ 50 ಸಾವಿರ ರೂ. ಪರಿಹಾರ ಸಿಗುತ್ತದೆ. ಬಿಪಿಎಲ್ ಕಾರ್ಡ್ ಇರುವವರಿಗೆ ಮಾತ್ರ 1.50 ಲಕ್ಷ ರೂ. ಪರಿಹಾರ ಸಿಗುತ್ತದೆ. ಇನ್ನು ಜನರಲ್ ಕೆಟಗರಿ ಅವರಿಗೆ 50 ಸಾವಿರ ರೂ. ಪರಿಹಾರ ಬರಲಿದೆ ಎಂದಿದ್ದಾರೆ.
ಹಾಗೆಯೇ, ಪರಿಹಾರಕ್ಕೆ ಹಲವು ಕ್ರಮಗಳ ಜಾರಿ ಮಾಡಲಾಗಿದೆ. ಕೋವಿಡ್ ಪಾಸಿಟಿವ್ ವರದಿಯ ಬಿಯು ನಂಬರ್, ಮೃತ ವ್ಯಕ್ತಿಯ ಮರಣ ಪತ್ರ, ಆಧಾರ್ ಪ್ರತಿ, ಬಿಪಿಎಲ್ ಗುರುತಿನ ಚೀಟಿ, ಅರ್ಜಿದಾರರ ಬ್ಯಾಂಕ್ ಅಕೌಂಟ್ ಕೊಡಬೇಕು. ಅರ್ಜಿದಾರರ ಸ್ವಯಂ ಘೋಷಣಾ ಫಾರಂ- 2, ಕುಟುಂಬದ ಉಳಿದವರಿಗೆ ಕೊಡಬೇಕೆಂದರೆ ಫಾರಂ 3 ಅರ್ಜಿ ಕೊಡಬೇಕು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಹಣ 50 ರೂ. ಆರ್ಟಿಜಿಎಸ್ ಮೂಲಕ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರ ಅಕೌಂಟ್‌ಗೆ ಜಮೆ ಆಗುತ್ತದೆ. ಇದಕ್ಕೆ ಕಮಿಟಿ ರಚಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರಿ ಕೊಡಿಸಿವುದಾಗಿ ವಂಚನೆ : ಮಹಿಳಾ SDA ಅರೆಸ್ಟ್