ಬೆಂಗಳೂರು : ಸಾಂಕ್ರಾಮಿಕ ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡಿದ ಪರಿಣಾಮ ಇದೀಗ ದಿನೇದಿನೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲಿದೆ.
ಈ ಕಾರಣಕ್ಕೆ ಸರಿಯಾದ ಸಮಯಕ್ಕೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಆಕ್ಸಿಜನ್ ವ್ಯವಸ್ಥೆ ಆಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಮಧ್ಯೆ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಹೆಚ್ಚು ಸುದ್ದಿ ಆಗುತ್ತಿರೋದು ರೆಮ್ಡಿಸಿವಿರ್ ಚುಚ್ಚುಮದ್ದಿನ ಕೊರತೆ. ಇದರ ನಡುವೆ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ರೆಮ್ಡಿಸಿವಿರ್ ಮಾರಾಟವಾಗುತ್ತಿದೆ. ಹಾಗಾದ್ರೆ, ಇದರ ಅವಶ್ಯಕತೆ ಎಷ್ಟಿದೆ ಎಂಬುದನ್ನು ತಿಳಿಯುವುದು ಈಗಿನ ತುರ್ತು.
ಈ ಸಂಬಂಧ ಮಾತನಾಡಿರುವ ಡಾ. ಅಂಜನಪ್ಪ, ರೆಮ್ಡಿಸಿವಿರ್ NOT A LIFE Saving drug. WHO( ವಿಶ್ವ ಆರೋಗ್ಯ ಸಂಸ್ಥೆ) ಕೂಡ ಇದನ್ನೇ ಹೇಳುತ್ತೆ. ರೆಮ್ಡಿಸಿವರ್ನ ಯಾವ ಸಂದರ್ಭದಲ್ಲಿ ಕೂಡಬೇಕು ಎಂಬುದು ಶ್ವಾಸಕೋಶ ತಜ್ಞರಿಗೆ ಗೊತ್ತು. ಇದು ಜೀವ ಉಳಿಸುವ ನಿರ್ದಿಷ್ಟವಾದ ಔಷಧವಲ್ಲ.
ರೆಮ್ಡಿಸಿವಿರ್ ಚುಚ್ಚುಮದ್ದು ಆಂಟಿ ವೈರಲ್ ಡ್ರಗ್ಸ್ ಆಗಿದೆ. ಸೋಂಕಿತ ರೋಗಿಗೆ ಉಸಿರಾಟದ ತೊಂದರೆ ಏನು ಇಲ್ಲದೇ ಇದ್ದಾಗ ರೆಮ್ಡಿಸಿವಿರ್ ಕೊಟ್ಟರೆ, ಆಗ ಅದು ದೇಹದಲ್ಲಿ ಸೋಂಕು ಉಲ್ಬಣಗೊಳ್ಳುವುದನ್ನ ಕಡಿಮೆ ಮಾಡುತ್ತೆ ಅಂತ ಕೊಡಲು ಶುರು ಮಾಡಿದ್ದು ಎಂದು ವಿವರಿಸಿದ ಅವರು, ಇದೀಗ ರೆಮ್ಡಿಸಿವಿರ್ ಕೊರತೆ ಉಂಟಾಗಿದೆ. ಆದರೆ, ಇದನ್ನ ಕೊಡದೇ ಇದ್ದರೂ ಸೋಂಕಿತರಿಗೆ ಯಾವುದೇ ತೊಂದರೆ ಆಗೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಾಗಾದರೆ, ಜೀವ ಉಳಿಸಲು ಏನು ಬೇಕು? ಅಂದರೆ, ಆಕ್ಸಿಜನ್ ಹಾಗೂ ಶ್ವಾಸಕೋಶದಲ್ಲಿ ಆಗಿರುವ ಸೋಂಕನ್ನು ಹೋಗಲಾಡಿಸಲು ಸ್ಟೀರೈಡ್ ಡ್ರಗ್ಸ್ ಅಷ್ಟೇ ಸಾಕು. ಆದರೆ, ಜನರು ವಿನಾ ಕಾರಣ ಮೂಗಿಗೆ ನಿಂಬೆರಸ, ಹಬೆಯಿಂದ ಸೋಂಕು ಸತ್ತು ಹೋಗುತ್ತೆ ಎಂಬುದನ್ನ ನಂಬಬೇಡಿ ಅಂತ ಕಿವಿ ಮಾತು ಹೇಳಿದರು.
ಯಾರೋ ಮೂರನೇ ವ್ಯಕ್ತಿ ಬಂದು ಅವರಿಗೆ ರೆಮ್ಡಿಸಿವಿರ್ ಇಂಜೆಕ್ಷನ್ ಕೊಟ್ಟಮೇಲೆ ಸೋಂಕು ನಿವಾರಣೆಯಾಯ್ತು ಅಂತ ಹೇಳಿದ್ದನ್ನು ನಂಬಿಕೊಂಡು, ಅದರ ಬೆನ್ನ ಹಿಂದೆ ಬಿದ್ದರೆ, ಡಿಮ್ಯಾಂಡ್ ಜಾಸ್ತಿ ಮಾಡಿದರೆ ಸಪ್ಲೈ ಕಡಿಮೆ ಇದ್ದಾಗ ಕಾಳಸಂತೆಯಲ್ಲಿ ಹೆಚ್ಚಿನ ಮಾರಾಟಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದು ಎಚ್ಚರಿಸಿದರು.
ಓದಿ: ಬಂಗಾಳ ಸರ್ಕಾರವೇ ಗೂಂಡಾಗಳಿಗೆ ಬೆಂಬಲವಾಗಿ ನಿಂತಿದೆ: ದೀದಿ ವಿರುದ್ಧ ಸಿ.ಟಿ.ರವಿ ಕಿಡಿ