ETV Bharat / state

ಕಾರ್ಮಿಕರಿಗೆ ಸುಸಜ್ಜಿತ ಪೆಟ್ಟಿ ಅಂಗಡಿ ನೀಡುವ ಭರವಸೆ: ಇದು ಈಟಿವಿ ಭಾರತ ಇಂಪ್ಯಾಕ್ಟ್​

ಬೀದಿಗೆ ಬಿದ್ದ ಕಾರ್ಮಿಕರ ಬಗ್ಗೆ ವರದಿ ಎಚ್ಚೆತ್ತ ಕೈಗಾರಿಕಾ ಪ್ರದೇಶಾಭಿವೃದ್ದಿ ಸಂಘ, ಸುಸಜ್ಜಿತ ಪೆಟ್ಟಿ ಅಂಗಡಿ ನೀಡುವ ಭರವಸೆ ನೀಡಿದೆ.

author img

By

Published : Jun 9, 2019, 7:12 PM IST

ಕಾರ್ಮಿಕರಿಗೆ ಸುಸಜ್ಜಿತ ಪೆಟ್ಟಿ ಅಂಗಡಿ ನೀಡುವ ಭರವಸೆ

ಆನೇಕಲ್: ಕಳೆದ ವಾರದಿಂದ ಬೆಂಗಳೂರು-ಹೊಸೂರು ಹೆದ್ದಾರಿಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ರಸ್ತೆ ಬದಿಯಲ್ಲಿ ಚಿಲ್ಲರೆ ಅಂಗಡಿ ಸಣ್ಣ-ಪುಟ್ಟ ಹೋಟೆಲ್, ತರಕಾರಿ ಇನ್ನಿತರೆ ಅಂಗಡಿ ಮುಂಗಟ್ಟುಗಳನ್ನು ಬೊಮ್ಮಸಂದ್ರ ಕೈಗಾರಿಕಾಭಿವೃದ್ದಿ ಒಕ್ಕೂಟ ತೆರವುಗೊಳಿಸಿತ್ತು. ಇದರಿಂದ ಹಲವು ಕುಟುಂಬಗಳು ಬೀದಿಗೆ ಬಿದ್ದಿದ್ದವು.

ಈ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ಬೀದಿಗೆ ಬಿದ್ದ ಬೀದಿ ಬದಿ ವ್ಯಾಪಾರಿಗಳ ಅಳಲನ್ನು ಮನದಟ್ಟು ಮಾಡಿಕೊಡಲಾಗಿತ್ತು. ಹೃದಯ ಕಾಯಿಲೆ, ಅಂಗವೈಕಲ್ಯದಂತಹ ಆರೋಗ್ಯ ಸಮಸ್ಯೆಗಳ ನಡುವೆ ಬೆನ್ನಿಗೆ ಬಿದ್ದ ಸಂಸಾರದ ಹೊಣೆಯನ್ನು ಬೀದಿ ಬದಿ ವ್ಯಾಪಾರಿಗಳು ನಿಭಾಯಿಸುತ್ತಿದ್ದರು. ಆದರೆ ಏಕಾಏಕಿ ಬಿಐಎ ತಂಡ ಜೆಸಿಬಿಗಳ ಮೂಲಕ ಕ್ಷಣಾರ್ಧದಲ್ಲಿ ಅಂಗಡಿಗಳ ಧ್ವಂಸಗೊಳಿಸಿ ಚಿಲ್ಲರೆ ವ್ಯಾಪಾರಿಗಳ ಬದುಕನ್ನು ನುಚ್ಚು ನೂರು ಮಾಡಿತ್ತು. ಮೂರು ದಶಕಗಳಿಂದ ಆಧಾರವಾಗಿದ್ದ ಜೋಪಡಿ ಅಂಗಡಿಗಳು ಕಣ್ಣ ಮುಂದೆ ನುಚ್ಚು ನೂರಾಗುತ್ತಿರುವುದನ್ನು ಕಂಡು ನೆಲ ಕುಸಿದಂತೆ ಬೀದಿಯಲ್ಲಿ ಸಂತ್ರಸ್ತರತ ನರಳಾಡಿದ್ದರು.

ಘಟನೆ ಖಂಡಿಸಿ ಬೀದಿಗಿಳಿದು ಹೋರಾಟ ಮಾಡಲೆತ್ನಿಸಿದ ವ್ಯಾಪಾರಿಗಳ ಪರ ಪ್ರಜಾ ಪರಿವರ್ತನಾ ಪಾರ್ಟಿ, ದಲಿತ ಸಂಘರ್ಷ ಸಮಿತಿ ಭೀಮಾವಾದದ ಜೊತೆ ನಮ್ಮ ಈಟಿವಿ ಭಾರತ ನೊಂದವರ ಪರ ಬೆನ್ನಿಗೆ ನಿಂತಿತ್ತು. ವರದಿಯ ಜೊತೆಗೆ ಬೆಂಗಳೂರು ಗ್ರಾಮಾಂತರ ಆನೇಕಲ್ ಉಪವಿಭಾಗದ ಪೊಲೀಸ್ ಇಲಾಖೆಯ ಡಿವೈಎಸ್ಪಿ ನಂಜುಂಡೇಗೌಡ, ಹೆಬ್ಬಗೋಡಿ ಸಿಐ ಜಗದೀಶ್ ಸಹಕಾರದೊಂದಿಗೆ ವ್ಯಾಪಾರಿಗಳು ಮತ್ತು ಬಿಐಎ ನಡುವೆ ಸೇತುವೆಯಾಗಿ ಮಾತುಕತೆ ನಡೆಸಿ ಬೀದಿ ಬದಿ ವ್ಯಾಪಾರಿಗಳ ಬದುಕನ್ನು ಮನವರಿಕೆ ಮಾಡಿ ನೆರವು ನೀಡಲು ತಾಕೀತು ಮಾಡಲಾಯಿತು.

ಅದರಂತೆ ಕೆಐಎಐಎಡಿಬಿ ಹಾಗೂ ಬಿಐಎ ಅಧಿಕಾರಿಗಳೊಂದಿಗೆ ಡಿವೈಎಸ್ಪಿ ಕಚೇರಿ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳಿಗೆ ಪೆಟ್ಟಿಗೆ ಅಂಗಡಿಗಳನ್ನು ಆಧುನಿಕವಾಗಿ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ವಿದ್ಯುತ್ ಸಂಪರ್ಕ, ಮೂಲಭೂತ ಸೌಕರ್ಯಗಳ ಒದಗಿಸಿ ಕೊಟ್ಟು, ವ್ಯಾಪಾರಿಗಳ ಜೊತೆಗೆ ಸದಾ ನೆರಳಾಗಿರುವ ಭರವಸೆ ನೀಡಿದರು. ಇದು ಈಟಿವಿ ಭಾರತ ವರದಿ ಫಲಶೃತಿ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.