ETV Bharat / bharat

ಶೂಟಿಂಗ್ ಅಭ್ಯಾಸದ ವೇಳೆ ಶೆಲ್ ಸ್ಫೋಟ: ಇಬ್ಬರು ಅಗ್ನಿವೀರರು ಸಾವು - TWO AGNIVEERS DIED

ಶೂಟಿಂಗ್ ಅಭ್ಯಾಸದ ವೇಳೆ ಭಾರತೀಯ ಫೀಲ್ಡ್ ಗನ್‌ನಿಂದ ಶೆಲ್ ಸ್ಫೋಟಗೊಂಡು ಇಬ್ಬರು ಅಗ್ನಿವೀರರು ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಶೂಟಿಂಗ್ ಅಭ್ಯಾಸ
ಶೂಟಿಂಗ್ ಅಭ್ಯಾಸ (ETV Bharat)
author img

By ETV Bharat Karnataka Team

Published : Oct 11, 2024, 9:31 PM IST

ನಾಸಿಕ್​(ಮಹಾರಾಷ್ಟ್ರ): ಆರ್ಟಿಲರಿ ಸೆಂಟರ್‌ನಲ್ಲಿ ಶೂಟಿಂಗ್ ಅಭ್ಯಾಸದ ವೇಳೆ ಭಾರತೀಯ ಫೀಲ್ಡ್ ಗನ್‌ನಿಂದ ಶೆಲ್ ಸ್ಫೋಟಗೊಂಡು ಇಬ್ಬರು ಅಗ್ನಿವೀರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನ ನಾಸಿಕ್ ರೋಡ್ ಪ್ರದೇಶದ ಆರ್ಟಿಲರಿ ಸೆಂಟರ್‌ನಲ್ಲಿ ಘಟನೆ ಸಂಭವಿಸಿದೆ. ಸ್ಫೋಟದಲ್ಲಿ ಅಗ್ನಿವೀರರಾದ ಗೋಹಿಲ್ ವಿಶ್ವರಾಜ್ ಸಿಂಗ್ (20) ಮತ್ತು ಸೈಫತ್ (21) ಮೃತಪಟ್ಟಿದ್ದಾರೆ.

"ಶೂಟಿಂಗ್ ಅಭ್ಯಾಸದ ವೇಳೆ ಫಿರಂಗಿ ಶೆಲ್ ಸ್ಫೋಟಗೊಂಡು ಭಾರತೀಯ ಸೇನೆಯ ಇಬ್ಬರು ಅಗ್ನಿವೀರರು ಪ್ರಾಣ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನ ಡಿಯೋಲಾಲಿಯಲ್ಲಿರುವ ಆರ್ಟಿಲರಿ ಶಾಲೆಯಲ್ಲಿ ತರಬೇತಿಗಾಗಿ ಅಗ್ನಿವೀರರು ಹೈದರಾಬಾದ್‌ನಿಂದ ಬಂದಿದ್ದರು. ಘಟನೆಯ ಕುರಿತು ತನಿಖೆ ನಡೆಯಲಿದೆ" ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ತಿರುಚಿ: ಹಾರಾಟದ ವೇಳೆ ವಿಮಾನದಲ್ಲಿ ಹೈಡ್ರಾಲಿಕ್ ವೈಫಲ್ಯ; ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.