ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್ ರನ್‌ವೇ 2ರ ಕಾಮಗಾರಿಯಿಂದ ಕೃಷಿ ಜಮೀನಿಗೆ ಹರಿಯುತ್ತಿದ್ದ ಮಳೆ ನೀರಿನಿಂದ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದ ಯರ್ತಿಗಾನಹಳ್ಳಿ ರೈತ ಪರ ಈಟಿವಿ ಭಾರತ ವರದಿ ಮಾಡಿತ್ತು. ಆ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೃಷಿ ಜಮೀನಿನಲ್ಲಿನ ನೀರು ತೆರವು ಮಾಡಿ, ಪರಿಹಾರ ನೀಡುವಂತೆ ಕೆಐಎಎಲ್‌ಗೆ ತಾಕೀತು ಮಾಡಿದೆ.
ಮಳೆಯಿಂದ ಏರ್ಪೋರ್ಟ್ ರನ್ ವೇಯಲ್ಲಿ ಶೇಖರಣೆಯಾಗಿದ್ದ ನೀರನ್ನು ಯರ್ತಿಗಾನಹಳ್ಳಿ ಗ್ರಾಮದ ರೈತರ ಜಮೀನಿಗೆ ಬಿಡುತ್ತಿದ್ದರು. ಇದರ ಕುರಿತು ಕಳೆದ ಎರಡು ದಿನಗಳ ಹಿಂದೆ ಈಟಿವಿ ಭಾರತ ವಿಸ್ತೃತ ವರದಿ ಮಾಡಿದಲ್ಲದೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಮನ ಸೆಳೆದಿತ್ತು. 20 ಎಕರೆ ಕೃಷಿ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದನ್ನು ಹಾಗೂ ಅಲ್ಲಿನ ಕೃಷಿಕರ ಕಷ್ಟ ವನ್ನು ಈಟಿವಿ ಭಾರತ ಸಮಗ್ರ ವರದಿ ಬಿತ್ತರಿಸಿತ್ತು. ಇದರಿಂದ ಇದೀಗ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಪರಿಶೀಲನೆ ನಡೆಸಿದೆ. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ದೇವನಹಳ್ಳಿ ತಹಶೀಲ್ದಾರ್ ಅಜೀತ್ ಕುಮಾರ್ ರೈ ಸ್ಥಳಕ್ಕೆ ಭೇಟಿ ನೀಡಿ, ಏರ್ಪೋರ್ಟ್ ಸಿಬ್ಬಂದಿ ಸ್ಥಳಕ್ಕೆ ಕರೆದು ಕೃಷಿ ಜಮೀನಿನಲ್ಲಿನ ನೀರು ತೆರವು ಮಾಡಿ, ಪರಿಹಾರ ನೀಡುವಂತೆ ಕೆಐಎಎಲ್‌ಗೆ ತಾಕೀತು ಮಾಡಿದ್ದಾರೆ.
ಇದರ ಕುರಿತು ಕಳೆದ ಎರಡು ದಿನಗಳ ಹಿಂದೆ (ಅಕ್ಟೋಬರ್ 14 ) ಈಟಿವಿ ಭಾರತ ವಿಸ್ತೃತ ವರದಿ ಮಾಡಿದಲ್ಲದೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಗಮನ ಸೆಳೆದಿತ್ತು. ಹಾರಾಟ ಅವರದು.. ನರಳಾಟ ರೈತರದು.. ರನ್‌ವೇ ನೀರು ಹರಿದು ಬೆಳೆ ಸಂಪೂರ್ಣ ಹಾಳು!