ETV Bharat / state

ಗ್ರಾಮ ಪಂಚಾಯತ್ ಮಟ್ಟದಲ್ಲಿ ಬೀಜ ವಿತರಣಾ ಕೇಂದ್ರ ಸ್ಥಾಪನೆ : ಕೃಷಿ ಸಚಿವ ಶಿವಶಂಕರ್ ರೆಡ್ಡಿ - undefined

ರಾಜ್ಯ ಸರ್ಕಾರ ಬಿತ್ತನೆ ಬೀಜವನ್ನು ರೈತರಿಗೆ ರಿಯಾಯಿತಿ ದರದಲ್ಲಿ ಒದಗಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೀಜ ಮತ್ತು ಅದರ ಸಂರಕ್ಷಣೆ ಮಹತ್ವವಾಗಿದ್ದು, ಈ ನಿಟ್ಟಿನಲ್ಲಿ ರೈತರಿಗೆ ಅವಶ್ಯವಿರುವ ಬೀಜಗಳ ಪೂರೈಕೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲು ಚಿಂತನೆ ನಡೆಸಲಾಗುವುದು ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ತಿಳಿಸಿದ್ದಾರೆ.

ಕೃಷಿ ಸಚಿವ ಶಿವಶಂಕರ್ ರೆಡ್ಡಿ
author img

By

Published : Apr 27, 2019, 8:26 AM IST

ಬೆಂಗಳೂರು: ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿದ್ದಾರೆ.

ನಗರದ ಜಿಕೆವಿಕೆಯ ಎನ್ಜಿಒ ಸಭಾಂಗಣದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಹಾಗೂ ರಾಷ್ಟ್ರೀಯ ಬೀಜ ಪ್ರಾಯೋಜನೆ ವಿಭಾಗದ ವತಿಯಿಂದ ಬೀಜ ದಿನಾಚರಣೆ ಮತ್ತು ಕಾರ್ಯಾಗಾರ ಸುಧಾರಿತ ನೂತನ ತಳಿಗಳ ಬೀಜ ಪರಿಚಯ ಹಾಗೂ ಜನಪ್ರಿಯಗೊಳಿಸುವ ಕುರಿತು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಿತ್ತನೆ ಬೀಜವನ್ನು ರೈತರಿಗೆ ರಿಯಾಯಿತಿ ದರದಲ್ಲಿ ಒದಗಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಬೀಜ ಮತ್ತು ಅದರ ಸಂರಕ್ಷಣೆ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ರೈತರಿಗೆ ಅವಶ್ಯವಿರುವ ಬೀಜಗಳ ಪೂರೈಕೆಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲು ಚಿಂತನೆ ನಡೆಸಲಾಗುವುದು ಎಂದರು.

ಬೀಜ ದಿನಾಚರಣೆ ಕಾರ್ಯಕ್ರಮ

ಕೃಷಿ ಆವಿಷ್ಕಾರಗಳು ತ್ವರಿತ ತಗತಿಯಲ್ಲಿ ರೈತರ ಮನೆ ಬಾಗಿಲಿಗೆ ತಲುಪುವಂತಾಗಬೇಕು. ಈ ಕಾರ್ಯಾಗಾರದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರಾಜ್ಯ ಸರ್ಕಾರ ರೈತರ ಅಭಿವೃದ್ಧಿಗೋಸ್ಕರ ಬದ್ಧವಾಗಿದ್ದು, ರೈತರ ಸಮಸ್ಯೆಗಳನ್ನು ಕಾಲಕಾಲಕ್ಕೆ ತಿಳಿಯಲು ರೈತರ ಸಲಹಾ ಸಮಿತಿಯನ್ನು ರಚಿಸಿದೆ ಎಂದರು.

ನವದೆಹಲಿ ಪಿಟಿವಿಎಸ್ಆರ್​ಎ ಮಾಜಿ ಅಧ್ಯಕ್ಷ ಡಾ.ಆರ್.ಆರ್ ಹಂಚಿನಾಳ ಮಾತನಾಡಿ, ಭಾರತ ಜೀವ ವೈವಿಧ್ಯಮಯ ದೇಶ. ಇಲ್ಲಿ 49 ಸಾವಿರಕ್ಕಿಂತ ಹೆಚ್ಚಿನ ಜಾತಿಯ ಗಿಡ ಮರಗಳಿಗೆ. ಪ್ರಪಂಚದಲ್ಲಿ ಕೇವಲ 17 ದೇಶಗಳು ಜೀವ ವೈವಿಧ್ಯಮಯ ದೇಶವಾಗಿದೆ. ಅವುಗಳಲ್ಲಿ ಭಾರತ ಕೂಡ ಒಂದಾಗಿದೆ. ನಮ್ಮ ರಾಜ್ಯದ ರಾಜಮುಡಿ ಮತ್ತು ನವರಣ ದೇಶಿ ಭತ್ತದ ತಳಿಗಳು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಪ್ರಚಾರದ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾಕ್ಟರ್ ರಾಜೇಂದ್ರ ಪ್ರಸಾದ್, ನಮ್ಮ ದೇಶದಲ್ಲಿ ಶೇ.42ರಷ್ಟು ಬಿತ್ತನೆ ಬೀಜಗಳನ್ನು ಸರ್ಕಾರಿ ಸಂಸ್ಥೆಗಳು ಮತ್ತು ಉಳಿದ ಶೇ.58 ರಷ್ಟು ಬೀಜಗಳನ್ನು ಖಾಸಗಿ ಸಂಸ್ಥೆಗಳು ಉತ್ಪಾದಿಸುತ್ತಿವೆ. ಶೇ.30-40 ರಷ್ಟು ಬಿತ್ತನೆ ಬೀಜಗಳನ್ನು ಈ ಸಂಸ್ಥೆಗಳು ಉತ್ಪಾದಿಸಿ ರೈತರಿಗೆ ಒದಗಿಸುತ್ತಿವೆ. ಉಳಿದ ಶೇ. 60 ರಿಂದ 70 ರಷ್ಟು ರೈತರು ಬಿತ್ತನೆ ಬೀಜಗಳನ್ನು ಉಪಯೋಗಿಸುತ್ತಿದ್ದಾರೆ ಎಂದರು.

Intro:ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೀಜ ವಿತರಣಾ ಕೇಂದ್ರ ಸ್ಥಾಪನೆ :ಕೃಷಿ ಸಚಿವ ಶಿವಶಂಕರ್ ರೆಡ್ಡಿ ಬೆಂಗಳೂರು: ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೇಳಿದ್ದಾರೆ.

Body:ನಗರದ ಜಿಕೆವಿಕೆ ಯ ಎನ್ಜಿಒ ಸಭಾಂಗಣದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಹಾಗೂ ರಾಷ್ಟ್ರೀಯ ಬೀಜ ಪ್ರಾಯೋಜನೆ ವಿಭಾಗದ ವತಿಯಿಂದ ಬೀಜ ದಿನಾಚರಣೆ ಮತ್ತು ಕಾರ್ಯಗಾರ ಸುಧಾರಿತ ನೂತನ ತಳಿಗಳ ಬೀಜ ಪರಿಚಯ ಹಾಗೂ ಜನಪ್ರಿಯಗೊಳಿಸುವ ಕುರಿತು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಬಿತ್ತನೆ ಬೀಜವನ್ನು ರೈತರಿಗೆ ರಿಯಾಯಿತಿ ದರದಲ್ಲಿ ಒದಗಿಸುತ್ತಿದೆ ಸದ್ಯದ ಪರಿಸ್ಥಿತಿಯಲ್ಲಿ ಬೀಜ ಮತ್ತು ಅದರ ಸಂರಕ್ಷಣೆ ಮಹತ್ತರವಾಗಿದ್ದು ಈ ನಿಟ್ಟಿನಲ್ಲಿ ರೈತರಿಗೆ ಅವಶ್ಯವಿರುವ ಬೀಜಗಳ ಪೂರೈಕೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲು ಚಿಂತನೆ ನಡೆಸಲಾಗುವುದು ಎಂದರು. ಕೃಷಿ ಆವಿಷ್ಕಾರಗಳು ತೋರಿ ತಗತಿಯಲ್ಲಿ ರೈತರ ಮನೆ ಬಾಗಿಲಿಗೆ ತಲುಪುವಂತಾಗಬೇಕು. ಈ ಕಾರ್ಯಗಾರದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರಾಜ್ಯ ಸರ್ಕಾರ ರೈತರ ಅಭಿವೃದ್ಧಿಗೋಸ್ಕರ ಕಟಿಬದ್ಧವಾಗಿದ್ದು ರೈತರ ಸಮಸ್ಯೆಗಳನ್ನು ಕಾಲಕಾಲಕ್ಕೆ ತಿಳಿಯಲು ರೈತರ ಸಲಹಾ ಸಮಿತಿಯನ್ನು ರಚಿಸಿದೆ ಎಂದು ಶಿವಶಂಕರ್ ರೆಡ್ಡಿ ತಿಳಿಸಿದರು

Conclusion:ನವ ದೆಹಲಿ ಪಿ ಟಿ ವಿ ಎಸ್ ಆರ್ ಎ ಮಾಜಿ ಅಧ್ಯಕ್ಷ ಡಾ.ಆರ್.ಆರ್ ಹಂಚಿನಾಳ ಮಾತನಾಡಿ, ಭಾರತ ಜೀವ ವೈವಿಧ್ಯ ಮಯ ದೇಶ ಎಲ್ಲಿ 49ಸಾವಿರಕ್ಕಿಂತ ಹೆಚ್ಚಿನ ಜಾತಿಯ ಗಿಡ ಮರಗಳಿಗೆ ಪ್ರಪಂಚದಲ್ಲಿ ಕೇವಲ 17 ದೇಶಗಳು ಜೀವ ವೈವಿಧ್ಯಮಯ ದೇಶವಾಗಿದೆ ಅವುಗಳಲ್ಲಿ ಭಾರತ ಕೂಡ ಒಂದಾಗಿದೆ ನಮ್ಮ ರಾಜ್ಯದ ರಾಜಮುಡಿ ಮತ್ತು ನವರಣ ದೇಶಿ ಭತ್ತದ ತಳಿಗಳು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಪ್ರಚಾರದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾಕ್ಟರ್ ರಾಜೇಂದ್ರ ಪ್ರಸಾದ್ ನಮ್ಮ ದೇಶದಲ್ಲಿ ಶೇ.42ರಷ್ಟು ಬಿತ್ತನೆ ಬೀಜಗಳನ್ನು ಸರ್ಕಾರಿ ಸಂಸ್ಥೆಗಳು ಮತ್ತು ಉಳಿದ ಶೇ.58 ರಷ್ಟು ಬೀಜಗಳನ್ನು ಖಾಸಗಿ ಸಂಸ್ಥೆಗಳು ಉತ್ಪಾದಿಸುತ್ತಿವೆ. ಶೇ.30-40 ರಷ್ಟು ಬಿತ್ತನೆ ಬೀಜಗಳನ್ನು ಈ ಸಂಸ್ಥೆಗಳು ಉತ್ಪಾದಿಸಿ ರೈತರಿಗೆ ಒದಗಿಸುತ್ತಿವೆ ಉಳಿದ ಶೇ. 60 ರಿಂದ 70 ರಷ್ಟು ರೈತರು ಬಿತ್ತನೆ ಬೀಜಗಳನ್ನು ಉಪಯೋಗಿಸುತ್ತಿದ್ದಾರೆ. ಕೃಷಿ ವಿಶ್ವವಿದ್ಯಾಲಯದ ಸೂರ್ಯಕಾಂತಿ ತಳಿಯಾದ ಕೆಬಿಎಸ್ಎಚ್- 41 ಆಪ್ರೀಕಾದ ಉಗಾಂಡ ದೇಶಕ್ಕೆ ರಫ್ತಾಗುತ್ತಿರುವುದು ಒಂದು ಸಂತೋಷದ ವಿಷಯ. ಇನ್ನು, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ದೇಶದಲ್ಲಿಯೇ ಪ್ರಥಮ ಬಾರಿಗೆ ಬೀಜ್ ಆಧಾರ್ ಮೊಬೈಲ್ ಆಪ್ ಅನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದು ತಿಳಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.