ETV Bharat / state

ಸಸ್ಯ ಕಾಶಿ ಲಾಲ್​ಬಾಗ್​ನ ಬ್ಯಾಂಡ್ ಸ್ಟ್ಯಾಂಡ್ ಬಳಿ ಕೀಟ ಕೆಫೆ ಸ್ಥಾಪನೆ.. ಸರ್ವ ರೀತಿಯಲ್ಲೂ ಕೀಟಗಳಿಗೆ ಪೂರಕ - ಕೀಟಗಳ ಕೆಫೆ

ಕೀಟಗಳ ಪೋಷಣೆ ಮತ್ತು ಸಂತಾನೋತ್ಪತ್ತಿ ವೃದ್ಧಿಗಾಗಿ ಲಾಲ್​ಬಾಗ್​ನ ಬ್ಯಾಂಡ್ ಸ್ಟ್ಯಾಂಡ್ ಬಳಿ ಕೀಟ ಕೆಫೆ ಸ್ಥಾಪನೆ ಮಾಡಲಾಗಿದೆ.

ಬೆಂಗಳೂರಲ್ಲಿ ಕೀಟ ಕೆಫೆ ಸ್ಥಾಪನೆ
ಬೆಂಗಳೂರಲ್ಲಿ ಕೀಟ ಕೆಫೆ ಸ್ಥಾಪನೆ
author img

By ETV Bharat Karnataka Team

Published : Oct 14, 2023, 5:18 PM IST

Updated : Oct 14, 2023, 6:56 PM IST

ಕೀಟಗಳ ಕೆಫೆ

ಬೆಂಗಳೂರು: ಕಾಫಿ ಪ್ರೀಯರಿಗೆ ಕಾಫಿ ಕೆಫೆ ಮಾದರಿಯಲ್ಲಿ ಕೀಟಗಳಿಗೂ ಪೋಷಣೆ ಮತ್ತು ಸಂತಾನೋತ್ಪತ್ತಿ ವೃದ್ಧಿಗಾಗಿಯೇ ಪ್ರತ್ಯೇಕ ಕೆಫೆ(ಕೀಟ ಮನೆ)ಯನ್ನು ನಿರ್ಮಾಣ ಮಾಡಲಾಗಿದೆ. ಕೀಟಗಳಿಗೆ ಸರ್ವ ರೀತಿಯಲ್ಲೂ ಪೂರಕವಾಗಿರಬಲ್ಲ ಹೊಸ ಪರಿಕಲ್ಪನೆಯಲ್ಲಿ ಈ ಕೀಟ ಕೆಫೆಯನ್ನು ನಿರ್ಮಿಸಲಾಗಿದೆ. ಹುಲ್ಲು ಗಿಡಗಳ ನಡುವೆ, ಎಲೆಗಳ ಮರೆಯಲ್ಲಿ, ಮರಗಳ ರಂಧ್ರ, ಪೊಟರೆಯಲ್ಲಿ ವಾಸವಾಗಿರುವ ದುಂಬಿ, ಕೀಟ ಇತ್ಯಾದಿಗಳಿಗಾಗಿ ಕೀಟ ಕೆಫೆ ಮೂಲ ಆಶ್ರಯ ತಾಣವಾಗಲಿದೆ. ನಗರೀಕರಣದ ದೆಸೆಯಿಂದ ಪ್ರಕೃತಿ ದತ್ತವಾಗಿದ್ದ ಹಸಿರು ತಾಣಗಳು, ಹುಲ್ಲುಗಾವಲು ಮರೆಯಾಗುತ್ತಿದ್ದು, ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ತಮ್ಮದೇ ಆದ ಸಂರಕ್ಷಿತ ಮತ್ತು ಸುರಕ್ಷಿತ ನೆಲೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕೀಟ ಕೆಫೆ ತಲೆ ಎತ್ತಿದೆ.

ಕೀಟಕೆಫೆ
ಕೀಟಕೆಫೆ

ಏನಿದು ಕೀಟ ಕೆಫೆ ? ಮರದ ಪ್ರೇಮಿಗಳಿಂದ ಸಣ್ಣ ಮನೆಯಾಕಾರದಲ್ಲಿ ವಿನ್ಯಾಸಗೊಳಿಸಿ. ಅದನ್ನು ಹಲವು ವಿಭಾಗಗಳಾಗಿ ವರ್ಗೀಕರಿಸಿ, ಪ್ರತಿ ವಿಭಾಗದಲ್ಲಿ ಸಣ್ಣ ಮಧ್ಯಮ ಮರದ ತುಂಡುಗಳು, ಒಣ ಹುಲ್ಲು ನಾನಾ ರೀತಿಯ ಸಸ್ಯಗಳ ಕಟ್ಟಿಗೆ ಇತ್ಯಾದಿಗಳನ್ನು ಒಂದಕ್ಕೊಂದು ಅಂಟಿಕೊಂಡಿರುವಂತೆ ಜೋಡಿಸಿ ಭದ್ರಪಡಿಸಿ, ವೇದಿಕೆ ಸಿದ್ಧಪಡಿಸಲಾಗಿದೆ. ಈ ರಚನೆಯು ಎಲ್ಲ ಬಗೆಯ ಕೀಟ, ದುಂಬಿಗಳು ನೆಲೆಸಲು ಮೂಲನೆಲೆ ಕಲ್ಪಿಸಿ, ಸಂತಾನೋತ್ಪತ್ತಿ ಹೊಂದಿ ಅವುಗಳ ವೃದ್ಧಿ ಮತ್ತು ಬೆಳವಣಿಗೆಗೆ ಕಾರಣ ವಾಗಲಿದೆ. ಕೀಟ-ದುಂಬಿಗಳಿಗೆ ಸರ್ವ ರೀತಿಯಲ್ಲಿಯೂ ಸಹಾಯ ಕಾರಿ ಆಗುವಂತೆ ಒಣ ಮರ ಕೊರೆಯುವ ದುಂಬಿ ಪ್ರಭೇದಗಳಿಗೆ ಬೇಕಾದ ಮರಗಳು ಹಾಗೂ ಮಣ್ಣಿನೊಳಗೆ ಕೊರಕಲು ಮಾಡಿ ಅಲ್ಲಿ ಅಡಗಿಕೊಳ್ಳುವ ಕೀಟಗಳಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾರ್ಪೆಂಟರ್‌ ಬೀ, ಬಿಂಬಲ್‌ ಬೀ ಇತ್ಯಾದಿ ಪ್ರಭೇದಗಳಲ್ಲಿ ಪ್ರಮುಖವಾದವುಗಳು. ಗೂಡು ಕಟ್ಟಿ ಚೇನು ಸಂಗ್ರಹಿಸುವ ದುಂಬಿಗಳು ಕಡಿಮೆ ಸಂಖ್ಯೆಯಲ್ಲಿದ್ದು, ಒಂಟಿ-ದುಂಬಿಗಳು ಸಹಸ್ರಾರು ಸಂಖ್ಯೆಯಲ್ಲಿವೆ. ಅವು ಗೂಡು ಕಟ್ಟುವುದರ ಬದಲು ಒ೦ಟಿಯಾಗಿ ಒಣ ಮರ ಕೊರೆದು ರಂಧ್ರ ಮಾಡಿ ಅಲ್ಲೇ ಬದುಕುತ್ತವೆ. ಇಂಡಿಯಾ ಫೌಂಡೇಷನ್ ಸಂಸ್ಥೆಯ ಸಿಇಒ ಆಗಿರುವ ಡೇವಿಡ್ ಕುಮಾರ್‌ ಅವರು ಸಾರ್ವಜನಿಕ ಸಹಭಾಗಿತ್ವದಡಿ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಕವಾಗಿ ಒಂದು ಇನ್‌ಸೆಕ್ಸ್ಟ್ ಕೆಫೆ ಲಾಲ್‌ಬಾಗ್‌ನಲ್ಲಿ ಸ್ಥಾಪಿಸಿದ್ದಾರೆ.

ಪರಿಸರದಲ್ಲಿ ಅಸಂಖ್ಯಾತ ಬಗೆಯ ಕ್ರಿಮಿ, ಕೀಟ, ದುಂಬಿಗಳಿದ್ದು ನೈಸರ್ಗಿಕ ಆಹಾರ ಸರಪಳಿಯ ಪ್ರಥಮ ಹಂತದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಗಿಡ-ಮರಗಳ ಪರಾಗ ಸ್ಪರ್ಶದಲ್ಲಿ ತೊಡಗಿ ನಗರದ ಅಸಂಖ್ಯ ಗಿಡ-ಮರ-ಬಳ್ಳಿಗಳಲ್ಲಿ ಹೂವು, ಹಣ್ಣು ಮತ್ತು ಬೆಳಗೆ ಕಾರಣೀಭೂತವಾಗಿವೆ. ಆದರೆ, ಇತ್ತೀಚಿನ ನಗರೀಕರಣದ ದೆಸೆಯಲ್ಲಿ ಪ್ರಕೃತಿ ದತ್ತವಾಗಿದ್ದಂತಹ ಹಸಿರು ತಾಣಗಳು, ಹುಲ್ಲುಗಾವಲುಗಳೂ ಮರೆಯಾಗಿದ್ದು ಕೀಟಗಳ ಆಸರೆ, ಸಂತಾನೋತ್ಪತ್ತಿ ಮತ್ತು ವೃದ್ಧಿಗಾಗಿ ತಮ್ಮದೇ ಆದ ಸಂರಕ್ಷಿತ ಮತ್ತು ಸುರಕ್ಷಿತ ನೆಲೆ ಇಲ್ಲದಂತಾಗಿದೆ. ಈ ಕೀಠ ಮನೆಯಿಂದ ಎಲ್ಲಾ ಬಗೆಯ ಕೀಟ, ದುಂಬಿಗಳು ನೆಲೆಸಲು ಮೂಲನೆಲೆ ಕಲ್ಪಿಸಿ, ಸಂತಾನೋತ್ಪತ್ತಿ ಹೊಂದಿ ಅವುಗಳ ವೃದ್ಧಿ ಮತ್ತು ಬೆಳವಣಿಗೆಗೆ ಕಾರಣವಾಗಲಿದೆ.

ಕೀಟ-ದುಂಬಿಗಳಿಗೆ ಸರ್ವ ರೀತಿಯಲ್ಲಿಯೂ ಸಹಾಯಕಾರಿಯಾಗುವಂತೆ ಒಣ ಮರವನ್ನು ಕೊರೆಯುವ ದುಂಬಿ ಪ್ರಭೇದಗಳಿಗೆ ಬೇಕಾದ ಮರಗಳು ಹಾಗೂ ಮಣ್ಣಿನೊಳಗೆ ಕೊರಕಲು ಮಾಡಿ ಅಲ್ಲಿ ಅಡಗಿಕೊಳ್ಳುವ ಕೀಟಗಳಿಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದೇ ಮೊದಲಬಾರಿಗೆ ನಿರ್ಮಾಣ ಮಾಡಿರುವ ಈ ಕೀಟ ಕೆಪೆಯನ್ನು ಲಾಲ್‌ ಬಾಗ್ ಬ್ಯಾಂಡ್ ಸ್ಟ್ಯಾಂಡ್ ಬಳಿ ತೋಟಗಾರಿಕೆ ನಿರ್ದೇಶಕ ಡಿ.ಎಸ್. ರಮೇಶ್ ಲೋಕಾರ್ಪಣೆ ಮಾಡಿದರು.

ಈ ಬಗ್ಗೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್‌ ಮಾತನಾಡಿ, ಕೀಠ ಮನೆಯನ್ನು ಇದೀಗ ಲಾಲ್​ಬಾಗ್ನಲ್ಲಿ ಪ್ರಾರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿ‌ನ ದಿನಗಳಲ್ಲಿ ರಾಜ್ಯ ವ್ಯಾಪ್ತಿಯ ಎಲ್ಲಾ ಹೊಸ ಸಸ್ಯಶಾಸ್ತ್ರೀಯ ತೋಟಗಳಲ್ಲಿಯೂ ಈ ಹೊಸ ಪರಿಕಲ್ಪನೆಯಡಿ 50ಕ್ಕೂ ಹೆಚ್ಚು ಇನ್‌ಸೆಕ್ಸ್ಟ್ ಕಥೆಗಳನ್ನು ನಿರ್ಮಿಸಲು ಚಿಂತಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಬಂಡೀಪುರ: ಕಾಡಲ್ಲಿ ಒಟ್ಟಿಗೆ 5 ಚಿರತೆ ದರ್ಶನ... ರಾಷ್ಟ್ರೀಯ ಹೆದ್ದಾರಿ ದಾಟಿದ ವ್ಯಾಘ್ರ ಸಮೂಹ!

Last Updated : Oct 14, 2023, 6:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.