ETV Bharat / state

ಕೋವಿಡ್ ಕೇರ್ ಸೆಂಟರ್​​ಗಳಲ್ಲಿ ಐಸಿಯು ಘಟಕ ಸ್ಥಾಪನೆ: ಡಿಸಿಎಂ ಪರಿಶೀಲನೆ - Establishment of ICU Unit at Covid Care Centers

ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಭಾನುವಾರ ಬೆಂಗಳೂರು ಅಂತಾ​​ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಮಾಡಲಾಗಿರುವ ಕೋವಿಡ್ ಬೆಡ್ ಮತ್ತಿತರ ಸೌಲಭ್ಯಗಳನ್ನು ಪರಿಶೀಲಿಸಿದ್ದಾರೆ.

ಕೋವಿಡ್ ಕೇರ್ ಸೆಂಟರ್​​ಗಳಲ್ಲಿ ಐಸಿಯು ಘಟಕ ಸ್ಥಾಪನೆ

author img

By

Published : Jul 6, 2020, 6:14 AM IST

ಬೆಂಗಳೂರು: ಮಹಾನಗರದಲ್ಲಿ ಕೋವಿಡ್- 19 ಸೋಂಕಿತರ ಚಿಕಿತ್ಸೆಗೆ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಕೋವಿಡ್ ಕೇರ್ ಕೇಂದ್ರಗಳಲ್ಲಿ ತುರ್ತು ನಿಗಾ ಘಟಕಗಳನ್ನು (ಐಸಿಯು) ಸ್ಥಾಪಿಸಲು ಮುಂದಾಗಿದೆ.

ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಭಾನುವಾರ ಬೆಂಗಳೂರು ಅಂತಾ​​ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಮಾಡಲಾಗಿರುವ ಕೋವಿಡ್ ಬೆಡ್ ಮತ್ತಿತರ ಸೌಲಭ್ಯಗಳನ್ನು ಪರಿಶೀಲಿಸಿದ ವೇಳೆ ಈ ವಿಷಯ ತಿಳಿಸಿದರು.

ಕೋವಿಡ್ ಕೇರ್ ಸೆಂಟರ್​​ಗಳಲ್ಲಿ ಐಸಿಯು ಘಟಕ ಸ್ಥಾಪನೆ

ಜಿಕೆವಿಕೆ, ಹಜ್ ಭವನ ಮತ್ತು ರವಿಶಂಕರ್ ಗುರೂಜಿ ಆಶ್ರಮದಲ್ಲಿರುವ ಕೋವಿಡ್ ಕೇರ್ ಕೇಂದ್ರಗಳು ಈಗಾಗಲೇ ಆರಂಭವಾಗಿವೆ. ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಬೆಂಗಳೂರು ಅಂತಾ​ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಕೇರ್ ಸೆಂಟರ್​​ಗಳು ಇನ್ನಷ್ಟೇ ಆರಂಭವಾಗಬೇಕಿದೆ ಎಂಬ ಮಾಹಿತಿಯನ್ನು ನೀಡಿದರು.

ಪ್ರತಿ ಕೋವಿಡ್ ಕೇರ್ ಕೇಂದ್ರದಲ್ಲೂ 10 ತುರ್ತು ನಿಗಾ ಘಟಕಗಳನ್ನು ತೆರೆಯಲಾಗುವುದು. ವಸ್ತು ಪ್ರದರ್ಶನ ಕೇಂದ್ರದಲ್ಲಿ 100 ಐಸಿಯು ಬೆಡ್​ಗಳನ್ನು ಮಾಡುತ್ತೇವೆ. ಇಲ್ಲಿ ಆಮ್ಲಜನಕ ವ್ಯವಸ್ಥೆ ಸೇರಿ ಅತ್ಯಾಧುನಿಕ ಸೌಲಭ್ಯಗಳು ಇರುತ್ತವೆ. ನಗರದ ಎಲ್ಲೆಡೆ ಸೋಂಕಿತರು ತುಂಬಿದರೆ ಉಳಿದವರನ್ನು ವಸ್ತು ಪ್ರದರ್ಶನ ಕೇಂದ್ರಕ್ಕೆ ಶಿಫ್ಟ್ ಮಾಡುತ್ತೇವೆ. ಈ ಕೇಂದ್ರದಲ್ಲಿ ಸೋಮವಾರದ ಹೊತ್ತಿಗೆ 7,000 ಬೆಡ್​​ಗಳು ಸಿದ್ಧವಾಗಲಿವೆ. ಉಳಿದ 3,000 ಬೆಡ್​​ಗಳು ಮೂರು-ನಾಲ್ಕು ದಿನಗಳಲ್ಲಿ ಸಿದ್ಧವಾಗಲಿವೆ. ಅಷ್ಟರೊಳಗೆ ಈ ಕೇಂದ್ರವು ಸೋಂಕಿತರಿಗೆ ಲಭ್ಯವಾಗಲಿದೆ. 'ಎ' ಸಿಂಪ್ಟಮೆಟಿಕ್ ರೋಗಿಗಳನ್ನು ಇಲ್ಲಿಗೆ ಸ್ಥಳಾಂತರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್​​ ನಾರಾಯಣ ವಿವರ ನೀಡಿದರು.

ವೈದ್ಯರಿಗೆ ವೈದ್ಯಕೀಯೇತರ ಕೆಲಸವಿಲ್ಲ:

ಇನ್ಮುಂದೆ ವೈದ್ಯರು ಮತ್ತು ನರ್ಸ್​ಗಳಿಗೆ ಕೋವಿಡ್ ಕೇರ್​​ಗಳಲ್ಲಿ ವೈದ್ಯಕೀಯೇತರ ಕೆಲಸಗಳು ಇರುವುದಿಲ್ಲ. ಅದಕ್ಕೆ ಪ್ರತ್ಯೇಕ ವ್ಯವಸ್ಥಾಪಕರನ್ನು ನಿಯೋಜಿಸಲಾಗುವುದು. ವೈದ್ಯರು, ನರ್ಸ್​ಗಳು ಸಂಪೂರ್ಣವಾಗಿ ತಮ್ಮ ಗಮನವನ್ನು ಸೋಂಕಿತರ ಚಿಕಿತ್ಸೆ, ಆರೈಕೆ ಮೇಲೆ ಕೇಂದ್ರೀಕರಿಸಬೇಕು ಎಂದು ಹೇಳಿದರು.

ಹಜ್ ಭವನದ ಕೋವಿಡ್ ಕೇರ್ ವೈದ್ಯರ ಜತೆ ವಿಡಿಯೋ ಸಂವಾದ ನಡೆಸಿದ ಉಪಮುಖ್ಯಮಂತ್ರಿ, ವೈದ್ಯರಿಗೆ ಈ ವಿಷಯವನ್ನು ತಿಳಿಸಿದರು. ಯಾವುದೇ ಕಾರಣಕ್ಕೆ ನಿಮಗೆ ಹೆಚ್ಚುವರಿ ಒತ್ತಡ ಹೇರುವುದಿಲ್ಲ. ನೀವು ರೋಗಿಗಳ ಮೇಲೆ ಗಮನ ಕೊಟ್ಟರೆ ಸಾಕು. ಸರ್ಕಾರ ಎಲ್ಲ ರೀತಿಯ ನೆರವನ್ನು ನಿಮಗೆ ನೀಡಲಿದೆ. ನಿಮ್ಮ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿದರು.

ಗುತ್ತಿಗೆ ರದ್ದು ಎಚ್ಚರಿಕೆ:

ಇದೇ ವೇಳೆ, ತಮಗೆ ಮತ್ತು ರೋಗಿಗಳಿಗೆ ಪೂರೈಕೆಯಾಗುತ್ತಿರುವ ಆಹಾರದ ಗುಣಮಟ್ಟ ಸರಿ ಇಲ್ಲ ಎಂಬ ವಿಷಯವನ್ನು ವೈದ್ಯರು ಡಿಸಿಎಂ ಗಮನಕ್ಕೆ ತಂದರು. ಮರುಕ್ಷಣವೇ, ಆಹಾರ ಪೂರೈಕೆದಾರರಿಗೆ ಫೋನ್ ಕರೆ ಮಾಡಿದ ಡಿಸಿಎಂ, ಗುಣಮಟ್ಟದ ಆಹಾರ ಪೂರೈಸುವಂತೆ ತಾಕೀತು ಮಾಡಿದರು. ಮತ್ತೆ ದೂರು ಬಂದರೆ ಗುತ್ತಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಔಷಧ ಪೂರೈಕೆಗೆ ಆದೇಶ:

ಕೋವಿಡ್ ಕೇಂದ್ರಕ್ಕೆ ಔಷಧಿಗಳ ಕೊರತೆ ಇದೆ ಎಂಬ ಅಂಶವನ್ನು ವೈದ್ಯರು ಇದೇ ವೇಳೆ ಡಿಸಿಎಂ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೂಡಲೇ ತಮಗೆ ಅಗತ್ಯವಿರುವ ಎಲ್ಲ ಔಷಧಗಳನ್ನು ಪೂರೈಕೆ ಮಾಡಲಾಗುವುದು ಎಂದರಲ್ಲದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಈ ಬಗ್ಗೆ ಆದೇಶ ನೀಡಿದರು. ನೈಸ್ ರಸ್ತೆ ಬಳಿಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಬಿಬಿಎಂಪಿ ಜಂಟಿ ಆಯುಕ್ತ ನರಸಿಂಹ ಮೂರ್ತಿ ಸೇರಿದಂತೆ ಹಲವಾರು ಅಧಿಕಾರಿಗಳು ಜತೆಯಲ್ಲಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.