ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಕೊರೊನಾಗೆ ಬಲಿಯಾದ ಇಬ್ಬರ ಮೃತದೇಹಗಳನ್ನು ಸರಿ ಸುಮಾರು 15 ತಿಂಗಳ ಕಾಲ ಶವಾಗಾರದಲ್ಲೇ ಬಿಟ್ಟ ಘಟನೆ ಸಂಬಂಧ ಆಸ್ಪತ್ರೆಯ ಡೀನ್ ಜಿತೇಂದ್ರ ಕುಮಾರ್ ತಲೆದಂಡವಾಗಿದೆ.
ಇಎಸ್ಐ ಆಸ್ಪತ್ರೆ ಡೀನ್ ಆಗಿದ್ದ ಜಿತೇಂದ್ರ ಕುಮಾರ್ ಅವರನ್ನು ವರ್ಗಾವಣೆ ಮಾಡಿ, ಹೊಸ ಡೀನ್ರನ್ನು ನೇಮಕಗೊಳಿಸಿ ಕೇಂದ್ರ ಕಾರ್ಮಿಕ ಇಲಾಖೆ ಆದೇಶಿಸಿದೆ. ಹೊಸ ಡೀನ್ ಆಗಿ ಡಾ. ರೇಣುಕಾ ರಾಮಯ್ಯ ಎಂಬುವರನ್ನ ನೇಮಿಸಿ ಆದೇಶಿಸಲಾಗಿದೆ.
ಜುಲೈ 2020ರಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದ ಇಬ್ಬರ ಮೃತದೇಹಗಳು ಬರೋಬ್ಬರಿ 1 ವರ್ಷ ಮೂರು ತಿಂಗಳ ಕಾಲ ರಾಜಾಜಿನಗರ ಇಎಸ್ಐ ಆಸ್ಪತ್ರೆಯ ಶವಾಗಾರದಲ್ಲೇ ಉಳಿದ ಆಘಾತಕಾರಿ ಘಟನೆ ಕೆಲದಿನಗಳ ಹಿಂದೆ ಬೆಳಕಿಗೆ ಬಂದಿತ್ತು.
ಶವಾಗಾರವನ್ನು ಸ್ವಚ್ಛಗೊಳಿಸಲು ಹೋದಾಗ ಶೈತ್ಯಾಗಾರದಲ್ಲೇ ಎರಡು ಮೃತದೇಹಗಳು ಕೊಳೆತು ನಾರುತ್ತಿದ್ದವು. ಮೃತದೇಹಗಳಿಗೆ ಹಾಕಿದ್ದ ಬಿಬಿಎಂಪಿ ಟ್ಯಾಗ್ ನಿಂದಾಗಿ ಮೃತದೇಹಗಳು ಚಾಮರಾಜಪೇಟೆಯ ದುರ್ಗಾ (40) ಮತ್ತು ಕೆ.ಪಿ ಅಗ್ರಹಾರದ ಮುನಿರಾಜು(35) ಅವರದ್ದು ಎಂದು ತಿಳಿದು ಬಂದಿತ್ತು.
ಇದನ್ನೂ ಓದಿ: ಇದನ್ನೂ ಓದಿ: ಇದೆಂಥ ಯಡವಟ್ಟು.. ವರ್ಷದ ನಂತ್ರ ಬೆಂಗಳೂರಿನ ಆಸ್ಪತ್ರೆಯಲ್ಲಿ ಇಬ್ಬರು ಕೋವಿಡ್ ರೋಗಿಗಳ ಕೊಳೆತ ಮೃತದೇಹ ಪತ್ತೆ!!