ETV Bharat / state

ಶಾಸಕ ನಾರಾಯಣರಾವ್ ನಿಧನ: ಈಶ್ವರಪ್ಪ, ರಾಜಶೇಖರ್ ಪಾಟೀಲ್​ ಸಂತಾಪ - ಬಸವಕಲ್ಯಾಣ ಕಾಂಗ್ರೆಸ್ ಶಾಸಕ ನಾರಾಯಣ ರಾವ್

ಕೊರೊನಾ ಸೋಂಕಿಗೆ ತುತ್ತಾಗಿ ಶಾಸಕ ಬಿ. ನಾರಾಯಣ ರಾವ್ ಇಂದು ಸಾವನ್ನಪ್ಪಿದ್ದು, ಇವರ ಅಗಲಿಕೆಗೆ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಸಂತಾಪ ಸೂಚಿಸಿದ್ದಾರೆ.

Eshwarappa, rajashekar
ಈಶ್ವರಪ್ಪ, ಶಾಸಕ ರಾಜಶೇಖರ್ ಪಾಟೀಲ್​ರಿಂದ ಸಂತಾಪ
author img

By

Published : Sep 24, 2020, 7:25 PM IST

ಬೆಂಗಳೂರು: ಬಸವಕಲ್ಯಾಣ ಕಾಂಗ್ರೆಸ್ ಶಾಸಕ ಬಿ. ನಾರಾಯಣ ರಾವ್ ನಿಧನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಕಾಂಗ್ರೆಸ್ ಶಾಸಕ ನಾರಾಯಣರಾವ್ ನಿಧನರಾಗಿದ್ದಾರೆ. ಇನ್ನೆಷ್ಟು ಜನರನ್ನು ಇದು ಕರೆದೊಯ್ಯಲಿದೆಯೋ ಗೊತ್ತಿಲ್ಲ. ನಿನ್ನೆ ಸುರೇಶ್ ಅಂಗಡಿ ಹೋದರು. ಇಂದು ನಾರಾಯಣರಾವ್ ನಮ್ಮ ಜೊತೆ ಇಲ್ಲ. ಸಾಮಾನ್ಯರಲ್ಲೂ ಸಾಮಾನ್ಯ ವ್ಯಕ್ತಿಯಾಗಿದ್ದರು. ವಿಧಾನಸೌಧದಲ್ಲಿ ಅವರು ಎದ್ದರೆ, ಶ್ರೀಸಾಮಾನ್ಯರ ಬಗ್ಗೆಯೇ ಮಾತನಾಡುತ್ತಿದ್ದರು. ಬಸವಕಲ್ಯಾಣದ ಜೊತೆ ಜೊತೆಗೆ ರಾಜ್ಯದ ವಿಷಯಗಳನ್ನು ಪ್ರಸ್ತಾಪ ಮಾಡುತ್ತಿದ್ದರು. ಅವರ ಪ್ರಸ್ತಾವನೆಯಲ್ಲಿ ಹಳ್ಳಿ ಜನರ ಮನಸ್ಸು ತಟ್ಟುವ ರೀತಿ ಮಾತನಾಡುತ್ತಿದ್ದರು. ನಮಗೆಲ್ಲ ಸ್ನೇಹಿತರು, ಹಿರಿಯರು, ಅವರ ನಿಧನಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಸ್ನೇಹಜೀವಿ ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.

ಈಶ್ವರಪ್ಪ, ಶಾಸಕ ರಾಜಶೇಖರ್ ಪಾಟೀಲ್​ರಿಂದ ಸಂತಾಪ

ಸಂತಾಪ ಸೂಚಿಸಿದ ರಾಜಶೇಖರ್ ಪಾಟೀಲ್

ಇನ್ನೊಂದೆಡೆ ನಾರಾಯಣ ರಾವ್ ನಿಧನಕ್ಕೆ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಸಂತಾಪ ಸೂಚಿಸಿದ್ದಾರೆ. ನಾರಾಯಣ ರಾವ್ ಜೊತೆ ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದೆ. ಬಹಳ ಹೋರಾಟ ಮಾಡಿದ್ದರು. ಶರಣರ ನಾಡಿನ ಶಾಸಕ ಆಗಬೇಕು ಎನ್ನುವ ಆಸೆಯನ್ನು ಅನೇಕ ಬಾರಿ ವ್ಯಕ್ತಪಡಿಸುತ್ತಿದ್ದರು. ಅದರಂತೆ ಕಳೆದ ಚುನಾವಣೆಯಲ್ಲಿ ಆಯ್ಕೆಯೂ ಆದರು. ಆ ಭಾಗದ ಅಭಿವೃದ್ಧಿಗೆ ಹಗಲಿರುಳು ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.

ಬಸವಕಲ್ಯಾಣದಲ್ಲಿ ಅನುಭವ ಮಂಟಪ ಆಗಬೇಕು ಎನ್ನುವ ಕನಸು ಕಂಡಿದ್ದರು. ಅನುಭವ ಮಂಟಪಕ್ಕೆ ಯಡಿಯೂರಪ್ಪ 100 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಯೋಜನೆ ಗುದ್ದಲಿ ಪೂಜೆಗೆ ರಾಷ್ಟ್ರಪತಿ ಅವರನ್ನು ಕರೆಸಲು ಆಹ್ವಾನ ನೀಡಲು ದೆಹಲಿಗೆ ಹೋಗೋಣ ಎಂದೆಲ್ಲ ಹೇಳಿದ್ದರು.‌ ಆದರೆ, ದೌರ್ಭಾಗ್ಯ, ಇಂದು ಅವರು ನಿಧನರಾಗಿದ್ದಾರೆ.15 ದಿನಗಳ ಕಾಲ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಚಕಿತ್ಸೆ ಫಲಿಸದೇ ನಮ್ಮನ್ನು ಅಗಲಿದ್ದಾರೆ. ಅವರ ನಿಧನದಿಂದ ರಾಜ್ಯ ಹಾಗೂ ಪಕ್ಷಕ್ಕೆ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಪರಿವಾರದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಸಂತಾಪ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.