ETV Bharat / state

ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ ಮಾಡಿದ ಸಿಎಂ

ಸಿಎಂ ಬಸವರಾಜ ಬೊಮ್ಮಯಿ ನಗರದಲ್ಲಿ ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ ಮಾಡಿದರು.

author img

By

Published : Nov 6, 2021, 1:57 AM IST

Environment friendly Diwali lamps, Environment friendly Diwali lamps launched, Environment friendly Diwali lamps launched by CM bommai, ಪರಿಸರಸ್ನೇಹಿ ದೀಪ, ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ, ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ,
ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ ಮಾಡಿದ ಸಿಎಂ

ಬೆಂಗಳೂರು: ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿರುವ ಪರಿಸರಸ್ನೇಹಿ ಮಣ್ಣಿನ ದೀಪಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.

ದೀಪಾವಳಿಯ ಅಂಗವಾಗಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣಾಗೆ ತೆರಳಿ ಗ್ರಾಮೀಣ ಮಹಿಳೆಯರು ತಯಾರಿಸಿರುವ ಈ ದೀಪಗಳನ್ನು ಕೊಟ್ಟು, ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಸಿಎಂ ಮಾತನಾಡಿ, ಹೆಣ್ಣು ಮಕ್ಕಳು ತಯಾರಿಸಿರುವ ಈ ಪರಿಸರಸ್ನೇಹಿ ದೀಪಗಳು ದೀಪಾವಳಿಯ ಅರ್ಥ ಮತ್ತು ಸಂಭ್ರಮವನ್ನು ಹೆಚ್ಚಿಸುವಂತಿವೆ. ಮಹಿಳೆಯರ ಬದುಕಿನ ಘನತೆಯನ್ನು ಹೆಚ್ಚಿಸುವಂತಹ ಇಂತಹ ಉಪಕ್ರಮಗಳು ನಮ್ಮ ಆಚರಣೆಗಳಿಗೆ ಹೊಸ ನೆಲೆಯನ್ನು ತಂದುಕೊಡುವಂತಿವೆ ಎಂದು ಶ್ಲಾಘಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.