ಬೆಂಗಳೂರು: ದೇಶದಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಬ್ಯಾಂಕ್ ಖಾತೆಗಳನ್ನ ಮುಟ್ಟುಗೋಲು ಹಾಕಿರುವ ಜಾರಿ ನಿರ್ದೇಶನಾಲಯ (ED) ಹಾಗೂ ಸರ್ಕಾರದ ನಡೆಯನ್ನ ರಾಜ್ಯ ಪಿಎಫ್ಐ ಸಂಘಟನೆಯ ಜನರಲ್ ಸೆಕ್ರೆಟರಿ ಅನೀಸ್ ಅಹ್ಮದ್ ಖಂಡಿಸಿದ್ದಾರೆ.
ಸಂಘ ಸಂಸ್ಥೆಗಳನ್ನ ನಿಯಂತ್ರಿಸಲು ತನಿಖಾ ಸಂಸ್ಥೆಗಳನ್ನ ಟೂಲ್ ಕಿಟ್ ಆಗಿ ಬಳಕೆ ಮಾಡಲಾಗುತ್ತಿದೆ. ಮುಟ್ಟುಗೋಲು ಹಾಕಿರುವ ಬ್ಯಾಂಕ್ ಖಾತೆಗಳಲ್ಲಿ ಸುಮಾರು 60 ಕೋಟಿ ರೂ. ಹಣ ಇತ್ತು ಎಂದು ಇ.ಡಿ ಉಲ್ಲೇಖ ಮಾಡಿದೆ. ಆದರೆ, ಒಂದು ರಾಷ್ಟ್ರೀಯ ಮಟ್ಟದ ಸಂಘಟನೆಗೆ 60 ಕೋಟಿ ದೊಡ್ಡ ಮೊತ್ತವಲ್ಲ ಎಂದು ಅನೀಸ್ ಹೇಳಿದ್ದಾರೆ.
ದೇಶದಲ್ಲಿ ನಡೆಯುವ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ನೆರವಾಗಲು ಪಿಎಫ್ಐ ದೇಣಿಗೆ ಸಂಗ್ರಹ ಮಾಡುತ್ತದೆ. ಆದರೆ, ಅದನ್ನೇ ಜಾರಿ ನಿರ್ದೇಶನಾಲಯ ದೊಡ್ಡದಾಗಿ ಬಿಂಬಿಸುವ ಯತ್ನ ಮಾಡಿದೆ. ಕಳೆದ ಎಂಟು ವರ್ಷಗಳಿಂದ ಜಾರಿ ನಿರ್ದೇಶನಾಲಯ ಕೇಂದ್ರ ಸರ್ಕಾರದ ಟೂಲ್ ಕಿಟ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ದೇಶದಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಬ್ಯಾಂಕ್ ಖಾತೆಗಳನ್ನ ಮುಟ್ಟುಗೋಲು ಹಾಕಿಕೊಂಡಿದೆ ಎಂದರು.
ಇದನ್ನೂ ಓದಿ: ಬಳ್ಳಾರಿ: ಅಪ್ರಾಪ್ತೆ ಪ್ರೀತಿಸಿ ದುರಂತ ಅಂತ್ಯ ಕಂಡ ಯುವಕ.. ಸಾವಿಗೆ ಹುಡುಗಿ ಮನೆಯವರೇ ಕಾರಣವಾದರಾ?