ETV Bharat / state

ಹಣ್ಣು ಹಾಗೂ ತರಕಾರಿ ಬೆಳೆಗಳಿಗೆ ಪ್ರೋತ್ಸಾಹ: ರೈತರಿಗೆ ತೋಟಗಾರಿಕೆ ಇಲಾಖೆ ಯೋಜನೆ ಏನು? - ತೋಟಗಾರಿಕೆ ಸಚಿವ ನಾರಾಯಣಗೌಡ

ತೋಟಗಾರಿಕೆ ಬೆಳೆಗಳು ರೈತರಿಗೆ ಖಚಿತವಾದ ಲಾಭದಾಯಕ ಆದಾಯವಾಗಿದ್ದು, ತೋಟಗಾರಿಕೆ ಇಲಾಖೆಯು ರಾಜ್ಯದ ಒಟ್ಟಾರೆ ತೋಟಗಾರಿಕೆ ಅಭಿವೃದ್ಧಿಗೆ ಜವಾಬ್ದಾರಿಯಾಗಿದೆ.

Encouraging fruit and vegetable crops
ಹಣ್ಣು ಹಾಗೂ ತರಕಾರಿ ಬೆಳೆಗಳಿಗೆ ಪ್ರೋತ್ಸಾಹ
author img

By

Published : Jul 17, 2020, 5:13 PM IST

ಬೆಂಗಳೂರು: ದೇಶದಲ್ಲೇ ಪ್ರತ್ಯೇಕ ತೋಟಗಾರಿಕಾ ಇಲಾಖೆಯನ್ನು ಹೊಂದಿದ ಮೊದಲ ರಾಜ್ಯ ಎಂದರೆ ಅದು ಕರ್ನಾಟಕ. ನಂತರದ ವರ್ಷಗಳಲ್ಲಿ ಇತರ ರಾಜ್ಯಗಳು ಕರ್ನಾಟಕದ ಮಾದರಿಯನ್ನು ಅನುಸರಿಸಿದವು. ಹಾಗಾಗಿ ರಾಜ್ಯ ತೋಟಗಾರಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.

ತೋಟಗಾರಿಕಾ ರಂಗದಲ್ಲಿ ಕರ್ನಾಟಕ ರಾಜ್ಯವು, ದೇಶದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ತೋಟಗಾರಿಕೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಜನರ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಪೌಷ್ಟಿಕ ಆಹಾರ, ಆರ್ಥಿಕ ಆದಾಯ, ನಿರಂತರ ಉದ್ಯೋಗ, ವಿವಿಧ ರೀತಿಯ ಸಂಸ್ಕರಣೆ ಮತ್ತು ಉದ್ಯಮಿಗಳಿಗೆ ಕಚ್ಚಾ ಸಾಮಗ್ರಿಗಳ ಪೂರೈಕೆ, ಗುಣಮಟ್ಟದ ಉತ್ಪನ್ನಗಳು ಉತ್ಪಾದನೆ ಪರಿಸರವನ್ನು ಒದಗಿಸುತ್ತದೆ.

ತೋಟಗಾರಿಕಾ ಬೆಳೆಗಳು: ತೆಂಗು, ಅಡಿಕೆ, ಗೇರು, ಸಾಂಬಾರು ಬೆಳೆಗಳಾದ ಕರಿಮೆಣಸು, ಶುಂಠಿ, ಅರಿಶಿನ, ಹಣ್ಣಿನ ಬೆಳೆಗಳಾದ ಮಾವು, ಬಾಳೆ, ಚಿಕ್ಕು, ಪಪ್ಪಾಯಿ, ದ್ರಾಕ್ಷಿ, ದಾಳಿಂಬೆ, ಕಿತ್ತಳೆ, ಮೋಸಂಬಿ, ಕರಬೂಜ, ಅನಾನಸ್, ಕಲ್ಲಂಗಡಿ, ನೇರಳೆ ಹಣ್ಣು, ಸ್ಟ್ರಾಬರಿ, ಹಲಸಿನಹಣ್ಣು ಅಂಜೂರದ ಹಣ್ಣುಗಳು. ತರಕಾರಿ ಬೆಳೆಗಳಾದ ಕ್ಯಾರೆಟ್, ಬೀಟ್ರೂಟ್, ಹೂಕೋಸು, ಎಲೆಕೋಸ್, ಬೀನ್ಸ್ , ಟೊಮೆಟೊ, ಆಲೂಗಡ್ಡೆ, ಬದನೇಕಾಯಿ, ಈರುಳ್ಳಿ, ಹಸಿ ಮೆಣಸಿನಕಾಯಿ, ನುಗ್ಗೇಕಾಯಿ, ಸೊಪ್ಪುಗಳನ್ನು ಬೆಳೆಸಲಾಗುತ್ತದೆ. ಜೊತೆಗೆ ವಿವಿಧ ಮಾದರಿಯ ಹೂಗಳು.

ರೈತರಿಗಾಗಿ ಪರಿಹಾರದ ಯೋಜನೆಗಳು: ಪ್ರಕೃತಿ ವಿಕೋಪ ಮತ್ತು ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸಿ ಸರ್ಕಾರಿ ಸ್ವಾಮ್ಯದ ಅಥವಾ ಮಾನ್ಯತೆ ಪಡೆದ ಸಾಲ ನೀಡಿದ ಸಂಸ್ಥೆಗಳಿಂದ ಪಡೆದ ಸಾಲವನ್ನು ತೀರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡರೇ, ರೈತನ ಕುಟುಂಬಕ್ಕೆ ಒಂದು ಲಕ್ಷ ಸಹಾಯಧನ ಒದಗಿಸಲಾಗುತ್ತದೆ. ಕೃಷಿ ಸಂಬಂಧಿತ ಕೆಲಸ ಮಾಡುವಾಗ ಆಕಸ್ಮಿಕವಾಗಿ ನಿಧನರಾದರೆ ರೈತರು ಹಾಗೂ ಕೃಷಿ ಕಾರ್ಮಿಕ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಸಿಗುತ್ತದೆ. ಬೆಂಕಿ ಅನಾಹುತಗಳಿಂದ ಹುಲ್ಲು ಮೆದೆ ಬಣವೆಗಳ ನಷ್ಟದಲ್ಲಿ 10 ಸಾವಿರ ರೂ. ಪರಿಹಾರ ಸಿಗುತ್ತದೆ.

ಇತರೆ ಸೌಲಭ್ಯಗಳು: ಬಡ್ಡಿ ರಹಿತ ಬೆಳೆ ಸಾಲ ಯೋಜನೆ, ರಾಷ್ಟ್ರೀಯ ಕೃಷಿ ವಿಮಾ ಯೋಜನೆ, ಜಿಲ್ಲಾವಲಯ ಸಾವಯವ ಗೊಬ್ಬರ ಯೋಜನೆ, ತಾಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದ ಯೋಜನೆಗಳು, ಭೂಚೇತನ ಯೋಜನೆಯಡಿ ಮಣ್ಣು ಪರೀಕ್ಷೆ ಮತ್ತು ಪೋಷಕಾಂಶ, ಮಳೆ ನೀರು ನಿರ್ವಹಣೆ, ಸುಧಾರಿತ ತಳಿಗಳು, ತಾಂತ್ರಿಕತೆ ಇತ್ಯಾದಿಗಳ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತದೆ.

ತೋಟಗಾರಿಕೆ ಸಚಿವ ನಾರಾಯಣಗೌಡ

ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ಧನ: ರೈತರ ಮಾಹಿತಿಗಾಗಿ ರೈತರ ಸಂಪರ್ಕ ಕೇಂದ್ರ‌. ಹೆಚ್ಚಿನ ಸಂಪರ್ಕಕ್ಕಾಗಿ ಕೃಷಿ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಕಚೇರಿಗಳಿಗೆ ಸಂಪರ್ಕಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತೋಟಗಾರಿಕೆ ಇಲಾಖೆಯು 2019- 20 ನೇ ಸಾಲಿನ ವಿವಿಧ ಯೋಜನೆಗಳಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿತ್ತು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ, ಗ್ರಾಮೀಣ ಉದ್ಯೋಗ ಖಾತರಿ, ಗೇರು, ತೆಂಗು ಅಭಿವೃದ್ಧಿ, ನೀರಿನ ಟ್ಯಾಂಕರ್ ಖರೀದಿ, ಜೇನು ಸಾಕಣೆ ಯೋಜನೆಗಳಡಿ ಸಹಾಯಧನ ನೀಡಲಾಗುತ್ತದೆ.

ಸಮಗ್ರ ತೋಟಗಾರಿಕೆ ಅಭಿವೃದ್ಧಿ , ಕೃಷಿ ಮತ್ತು ನರ್ಸರಿಗಳ ಅಭಿವೃದ್ಧಿ ಮತ್ತು ನಿರ್ವಹಣೆ.

ಜಿಲ್ಲಾವಲಯ ಯೋಜನೆಗಳು: ಹನಿ ನೀರಾವರಿ, ಕೃಷಿಭಾಗ್ಯ ಯೋಜನೆಯಡಿ ಸುರಕ್ಷಿತ ಬೇಸಾಯಕ್ಕಾಗಿ ಪಾಲಿಹೌಸ್, ನೆರಳು ಪರದೆ ಘಟಕ ಹಾಗೂ ಕೃಷಿ ಹೊಂಡ ಚಟುವಟಿಕೆಗೆ ಸಹಾಯ ಸಹಾಯಧನ ಕೊಡಲಾಗುತ್ತದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತರ ಜಮೀನಿನಲ್ಲಿ ತೆಂಗು, ಮಾವು, ಸಪೋಟ, ಬಾಳೆ, ಕಾಳುಮೆಣಸು, ಪಪ್ಪಾಯಿ ಬೆಳೆ ಹಾಗೂ ವಿವಿಧ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ತೆಂಗು ಮಾವು ಪುನಶ್ಚೇತನ ಕೊಳವೆಬಾವಿ ನೀರು ಸಂಸ್ಕರಣೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

ತೋಟಗಾರಿಕೆ ಕೃಷಿ ನಿರ್ವಹಣೆ ಬೀಜ ತೆಂಗಿನಕಾಯಿ ಸಂಗ್ರಹಣೆ ಮತ್ತು ನರ್ಸರಿ ನಿರ್ವಹಣೆಗಾಗಿ ಯೋಜನೆ ಜೇನುಸಾಕಣೆ ರೈತರಿಗೆ ಸಹಾಯ ದೊರೆಯುತ್ತದೆ. ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, 12 - 14 ಲಕ್ಷ ಟನ್ ಇಳುವರಿ ಅಂದಾಜಿಸಲಾಗಿದೆ. ಏರು ಹಂಗಾಮಿನಲ್ಲಿ ಕನಿಷ್ಠ 10 ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ಇಳಿ ಹಂಗಾಮಿನಲ್ಲಿ ಸುಮಾರು 4 ರಿಂದ 5 ಲಕ್ಷ ಟನ್ ಉತ್ಪಾದನೆಯಾಗುತ್ತದೆ.

ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದ್ದು, ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶ ಮಾವಿಗೆ ಮೀಸಲಾಗಿದೆ. ರಾಮನಗರದಲ್ಲಿ 20 ಸಾವಿರ ಹೆಕ್ಟೇರ್, ಉಳಿದಂತೆ ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ 15 ರಿಂದ 19 ಸಾವಿರ ಹೆಕ್ಟೇರ್ ನಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರತಿ ಹೆಕ್ಟೇರ್ ಗೆ 2 ರಿಂದ 2.5 ಟನ್ ಇಳುವರಿ ಪಡೆಯಲಾಗುತ್ತದೆ.

ವಿದೇಶಕ್ಕೂ ರಫ್ತು : ವಾರಕ್ಕೊಮ್ಮೆ ಸುಮಾರು 220 ಮೆಟ್ರಿಕ್ ಟನ್​​ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿ ವಿದೇಶಕ್ಕೆ ರಫ್ತಾಗಲಿದೆ. ಕಾರ್ಗೋ ದರ ಏರಿಕೆಯಿಂದಾಗಿ ರಫ್ತು ಸ್ಥಗಿತವಾಗಿತ್ತು. ತೋಟಗಾರಿಕೆ ಸಚಿವ ನಾರಾಯಣಗೌಡ ಅವರು, ರಫ್ತುದಾರರು ಮತ್ತು ಕೆಪೆಕ್ , ಎಪೆಡಾ ಸಂಸ್ಥೆಗಳ ಜೊತೆ ಇತ್ತೀಚೆಗೆ ಸಭೆ ನಡೆಸಿದ್ದರು. ರಫ್ತಿಗೆ ಇರುವ ಸಮಸ್ಯೆ ಕುರಿತು ಮಾಹಿತಿಯನ್ನು ಪಡೆದು ನಂತರ ಸಿಎಂ ಜೊತೆ ಚರ್ಚಿಸಿ, ಸಿಎಂ ಮೂಲಕ ಕೇಂದ್ರ ವಿಮಾನಯಾನ ಸಚಿವರ ಜೊತೆ ಚರ್ಚಿಸಿ ಸದ್ಯದಲ್ಲೇ ರಫ್ತಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದರು. ನಂತರ ಹತ್ತಕ್ಕೂ ಹೆಚ್ಚು ದೇಶಗಳಿಗೆ ರಫ್ತಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಕೊರೊನಾದಿಂದ ನಷ್ಟ ಹೊಂದಿದ ಹಣ್ಣು-ತರಕಾರಿ ಬೆಳೆಗಾರರಿಗೆ ಸರ್ಕಾರ ನೆರವು ಘೋಷಿಸಿದೆ.

ಲಾಕ್​ಡೌನ್ ವೇಳೆ ನಷ್ಟ ಹೊಂದಿದ ಹೂ ಬೆಳೆಗಾರರಿಗೆ 25 ಸಾವಿರ ರೂ. ಹಾಗೂ ಹಣ್ಣು-ತರಕಾರಿ ಬೆಳೆಗಾರರಿಗೆ 15 ಸಾವಿರ ರೂ ಪರಿಹಾರ ನೀಡಲಾಗುತ್ತದೆ ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ತಿಳಿಸಿದ್ದಾರೆ. ಒಟ್ಟಾರೆ 50, 083 ಹೆಕ್ಟೇರ್ ನಲ್ಲಿ ಬೆಳೆದ ತರಕಾರಿ ಹಾಗೂ 41, 054 ಹೆಕ್ಟೇರ್​​ನಲ್ಲಿ ಬೆಳೆದ ಹಣ್ಣಿನ ಬೆಳೆಗಳಿಗೆ ಸಂಬಂಧಿಸಿದ ಪರಿಹಾರ ಲಭ್ಯವಾಗಲಿದೆ. ಈ ಉದ್ದೇಶಕ್ಕಾಗಿ 136 ಕೋಟಿ ವೆಚ್ಚವಾಗಲಿದೆ ಎಂದು ಸಚಿವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.