ETV Bharat / state

ತುರ್ತುಸೇವೆ ಒದಗಿಸುವಲ್ಲಿ EMRI ವಿಫಲ ಆರೋಪ; ನಿಲುವು ಸ್ಪಷ್ಟಪಡಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ - ಹೈ ಕೋರ್ಟ್

ಒಪ್ಪಂದದ ಷರತ್ತುಗಳಂತೆ ತುರ್ತುಸೇವೆಗಳನ್ನು ಒದಗಿಸುವಲ್ಲಿ ಇಎಂಆರ್‌ಐ ಸಂಸ್ಥೆ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅವಧಿ ಮೀರಿ ಅನಧಿಕೃತವಾಗಿ ಸೇವೆ ಮುಂದುವರಿಸಲಾಗಿದ್ದು, ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಹೈಕೋರ್ಟ್
author img

By

Published : Jun 25, 2019, 11:06 AM IST

ಬೆಂಗಳೂರು : 108 ಆ್ಯಂಬುಲೆನ್ಸ್ ಸೇವೆ ಒದಗಿಸುವ ಖಾಸಗಿ ಸಂಸ್ಥೆ EMRIಯ ಗುತ್ತಿಗೆ ಮುಂದುವರೆಸುವ ಕುರಿತಂತೆ ತನ್ನ ನಿಲುವು ಸ್ಪಷ್ಟಪಡಿಸಬೇಕೆಂದು ಹೈಕೋರ್ಟ್‌, ಸರ್ಕಾರಕ್ಕೆ ನಿರ್ದೇಶನ ನೀಡಿದೆ‌.

ರಾಜ್ಯದ ಜನತೆಗೆ ತುರ್ತು ಆರೋಗ್ಯ ಸೇವೆ ಒದಗಿಸುವ ಇಎಂಆರ್‌ಐ ಸಂಸ್ಥೆ, ರಾಜ್ಯ ಸರ್ಕಾರದ ಒಡಂಬಡಿಕೆ ಷರತ್ತು ಉಲ್ಲಂಘಿಸಿದೆ ಎಂದು ಆರೋಪಿಸಿ ಹಾವೇರಿ ಜಿಲ್ಲೆಯ ಮಾರುತಿ ಬಣಕಾರ ಹಾಗೂ ಇತರರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವತ್ತು ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸಿತು.

ಒಪ್ಪಂದದ ಷರತ್ತುಗಳಂತೆ ತುರ್ತುಸೇವೆಗಳನ್ನು ಒದಗಿಸುವಲ್ಲಿ ಇಎಂಆರ್‌ಐ ಸಂಸ್ಥೆ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅವಧಿ ಮೀರಿ ಅನಧಿಕೃತವಾಗಿ ಸೇವೆ ಮುಂದುವರಿಸಲಾಗಿದೆ. ಇಲ್ಲಿ ನೇರವಾಗಿ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ದೂರಿದ್ದರು.

108 ಆ್ಯಂಬುಲೆನ್ಸ್ ಸೇವೆ ಬಗ್ಗೆ ರಾಜ್ಯ ಸರ್ಕಾರ ಹಾಗೂ ಇಎಂಆರ್‌ಐ ನಡುವೆ 2008ರ ಆಗಸ್ಟ್ 14ರಂದು 10 ವರ್ಷಗಳ ಕಾಲಾವಧಿಗೆ ಒಪ್ಪಂದ ಆಗಿತ್ತು. ಈ ಬಗ್ಗೆ ಸೂಕ್ತ ತನಿಖೆಗೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ‌ ಅವಧಿ ಮುಗಿದರೂ ಏಕೆ ಸೇವೆ ಮುಂದುವರೆಸುತ್ತಿದ್ದೀರಾ? ಇದರ ಬಗ್ಗೆ ನಿಮ್ಮ ನಿಲುವೇನು? ಎಂದು ನ್ಯಾಯಮೂರ್ತಿಗಳು ಸರ್ಕಾರಿ ಪರ ವಕೀಲರನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಜೂನ್ 27 ರಂದು ನಿಲುವು ಸ್ಪಷ್ಟಪಡಿಸುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿದರು.

Intro:108 ಅಂಬುಲೇನ್ಸ್ ಅಸಮರ್ಪಕ ಸೇವೆ ಸಲ್ಲಿಕೆ ಆರೋಪ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೋಟಿಸ್

ಭವ್ಯ

ರಾಜ್ಯದಲ್ಲಿ, 108 ,ಆ್ಯಂಬುಲೆನ್ಸ್ ಒದಗಿಸುವ ಖಾಸಗಿ ಸಂಸ್ಥೆ ಯ ಗುತ್ತಿಗೆಯನ್ನ ಮುಂದುವರೆಸುವ ಕುರಿತಂತೆ ರಾಜ್ಯ ಸರ್ಕಾರ ತನ್ನ ನಿಲುವನ್ನ ಸ್ಪಷ್ಟ ಪಡಿಸಬೇಕೆಂದು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದೆ‌

ರಾಜ್ಯದ ಜನತೆಗೆ ತುರ್ತು ಆರೋಗ್ಯ ಸೇವೆಗಳನ್ನ
ದಿ ಎಮರ್ಜನ್ಸಿ ಮ್ಯಾನೇಜ್‌ಮೆಂಟ್ ಆ್ಯಂಡ್ ರಿಸರ್ಚ್ ಇನ್ಸಿಟಿಟ್ಯೂಟ್ (ಇಎಂಆರ್‌ಐ) ಸಂಸ್ಥೆಯು ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಷರತ್ತು ಉಲ್ಲಂಘನೆ ಮಾಡಿದೆ ಎಂದು ಹಾವೇರಿ ಜಿಲ್ಲೆಯ ಮಾರುತಿ ಬಣಕಾರ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು‌.

ಆದ್ರೆ ಅರ್ಜಿ ದಾರರು ವಾದ ಮಾಡಿ ಒಪ್ಪಂದದ ಷರತ್ತು ಗಳಂತೆ ತುರ್ತು ಸೇವೆಗಳನ್ನು ಒದಗಿಸುವಲ್ಲಿ ಇಎಂಆರ್‌ಐ ಸಂಸ್ಥೆ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅವಧಿ ಮೀರಿ ಅನಧಿಕೃತವಾಗಿ ಸೇವೆ ಮುಂದುವರಿಸಲಾಗಿದೆ. ಇಲ್ಲಿ ನೇರವಾಗಿ ಅಗ್ರಿಮೆಂಟ್ ವೈಲೇಷನ್ ಆಗಿದೆ.108 ಆ್ಯಂಬುಲೆನ್ಸ್ ಸೇವೆಗೆ ರಾಜ್ಯ ಸರ್ಕಾರ ಹಾಗೂ ಇಎಂಆರ್‌ಐ ನಡುವೆ 2008ರ ಆಗಸ್ಟ್ 14ರಂದು ಹತ್ತು ವರ್ಷಗಳ ಅವಧಿಗೆ ಒಪ್ಪಂದ ಆಗಿತ್ತು ಈ ಬಗ್ಗೆ ಸೂಕ್ತ ತನಿಖೆ ಗೆ ಆದೇಶ ಮಾಡಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ರು

ಇನ್ನು ನ್ಯಾಯಲಯ‌ ಅವಧಿ ಮುಗಿದ್ರೂ ಏಕೆ ಸೇವೆ ಮುಂದುವರೆಸುತ್ತಿದ್ದೀರಾ..? ನಿಮ್ಮ ನೀಲುವೇನು.ಎಂದು ಸರ್ಕಾರಿ ಪರ ವಕೀಲರಿಗೆ ಹೈ ಕೋರ್ಟ್ ಪ್ರಶ್ನೆ ಮಾಡಿ ಜೂನ್ 27 ರಂದು ನಿಲುವು ತಿಳಿಸಲು ಹೇಳಿ ವಿಚಾರಣೆ ಮುಂದೂಡಿಕೆ ಮಾಡಿದೆBody:KN_BNG_08_25_108_BHAVYA_7204498Conclusion:KN_BNG_08_25_108_BHAVYA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.