ದೇವನಹಳ್ಳಿ/ಬೆಂಗಳೂರು: ಪ್ರಯಾಣಿಕರು ಹಾಗೂ ಸಿಬ್ಬಂದಿಯ ಅನುಕೂಲಕ್ಕಾಗಿ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲೆಂದು ಹತ್ತು ತುರ್ತು ಆಮ್ಲಜನಕ ಜನರೇಟರ್‌ಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿದೆ.
ನಿರ್ಗಮನ ಮತ್ತು ಆಗಮನದ ಪ್ರದೇಶದಲ್ಲಿ ತುರ್ತು ಆಮ್ಲಜನಕದ ಸಕಾಲಿಕ ಲಭ್ಯತೆಯು ಹೃದಯಾಘಾತ, ಉಸಿರಾಟದ ತೊಂದರೆ, ಮೂರ್ಛೆ ಅಥವಾ ಇತರೆ ಉಸಿರಾಟದ ಸಮಸ್ಯೆಯುಳ್ಳವರಿಗೆ ಆಮ್ಲಜನಕ ಒದಗಿಸಲಿದೆ. ಆಕ್ಸಿಜನ್ ಜನರೇಟರ್ಸ್ 40 ನಿಮಿಷಗಳವರೆಗೆ ಶೇ. 99.7 ಶುದ್ಧ ವೈದ್ಯಕೀಯ ದರ್ಜೆಯ ಆಮ್ಲಜನಕ ಒದಗಿಸುತ್ತದೆ. ಅಗತ್ಯ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಕೂಡಾ ಇದು ಸಹಕಾರಿ.
ಇದನ್ನೂ ಓದಿ: ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿಯಾಗಿ ಅಲೋಕ್ ಆರಾಧೆ ನೇಮಕ