ETV Bharat / state

ವಿಚಾರಣೆ ಹಂತದಲ್ಲಿರುವುದರಿಂದ ಎಲಿವೇಟೆಡ್​ ಕಾರಿಡಾರ್​​ ಕಾಮಗಾರಿ ತಡ: ಡಿಸಿಎಂ ಕಾರಜೋಳ - ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ

ಎಲಿವೇಟೆಡ್​ ಕಾರಿಡಾರ್​​ ಕಾಮಗಾರಿ ಕುರಿತ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಹೇಳಿದ್ದಾರೆ.

Govinda M Karajola
ಗೋವಿಂದ ಎಂ ಕಾರಜೋಳ
author img

By

Published : Mar 10, 2020, 1:52 AM IST

ಬೆಂಗಳೂರು: ಎಲಿವೇಟೆಡ್​ ಕಾರಿಡಾರ್​​ ಕಾಮಗಾರಿ ಯೋಜನೆ ಸಂಬಂಧ ಕರ್ನಾಟಕದ ಉಚ್ಚನ್ಯಾಯಾಲಯದಲ್ಲಿ ದಾವೆ ದಾಖಲಾಗಿದೆ. ಈ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

ಈ ಎಲಿವೇಟೆಡ್ ಕಾರಿಡರ್ ಯೋಜನೆಯನ್ನು ನಾಲ್ಕು ಹಂತಗಳಲ್ಲಿ ಅನುಷ್ಠಾನಗೊಳಿಸಲು ಯೋಜಿಸಿ, ಯೋಜನೆಗೆ 26,960 ಕೋಟಿ ರೂ. ತಾತ್ವಿಕ ಅನುಮೋದನೆ ನೀಡಲಾಗಿದೆ. ನಾಲ್ಕು ಹಂತಗಳ ಪೈಕಿ, ಮೂರು ಪ್ಯಾಕೇಜ್‍ಗಳಿಂದ ಒಟ್ಟಾರೆಯಾಗಿ ಬ್ಯಾಸ್ಟಿನ್ ಆಸ್ಪತ್ರೆಯಿಂದ ಕಂಟೋನ್‍ಮೆಂಟ್ ರಿಚ್‍ಮಂಡ್ ಸರ್ಕಲ್-ಶಾಂತಿನಗರ ಬಸ್ ನಿಲ್ದಾಣ- ಬಾಷ ಆವರಣ ಮೂಲಕ ಹೊಸೂರು ರಸ್ತೆ ಮುಖಾಂತರ ಸಿಲ್ಕ್ ಬೋರ್ಡ್‍ವರೆಗೆ 21.ಕಿ.ಮೀ ಉದ್ದಕ್ಕೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಭೂಸ್ವಾಧೀನ ಮತ್ತು ಯುಟಿಲಿಟಿ ಸ್ಥಳಾಂತರ ಮೊತ್ತವನ್ನು ಒಳಗೊಂಡಂತೆ 6,855 ಕೋಟಿ ಮೊತ್ತಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಈ ಕಾಮಗಾರಿ ಕುರಿತು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ 42,796 ಕೊಳವೆ ಬಾವಿ ಗಂಗಾ ಕಲ್ಯಾಣ ಯೋಜನೆಯಡಿ 2016-17 ರಿಂದ ಈವರೆಗೆ ಪರಿಶಿಷ್ಟ ಜಾತಿ ಅವರಿಗೆ 32,480 ಹಾಗೂ ಪರಿಶಿಷ್ಟ ಪಂಗಡದ 10,316 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.