ಆನೇಕಲ್: ಬನ್ನೇರುಘಟ್ಟದ ಮೂಲಕ ಕೊರಟಗೆರೆದೊಡ್ಡಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಯುವಕನ ಕಾಲಿನ ಮೂಳೆ ಮುರಿದಿದೆ.
ಕೊರಟಗೆರೆದೊಡ್ಡಿಯ ನಿವಾಸಿ ಗಣೇಶ(30) ದಾಳಿಗೊಳಗಾದ ಯುವಕ. ಬನ್ನೇರುಘಟ್ಟ-ಆನೇಕಲ್ ಮುಖ್ಯರಸ್ತೆಯ ರಾಗಿಹಳ್ಳಿ ರಸ್ತೆಯ ಬಳಿಯಿರುವ ಮುತ್ತುರಾಯಸ್ವಾಮಿ ದೇವಾಲಯದ ಬಳಿ ಘಟನೆ ನಡೆದಿದೆ.
ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುವನ್ನು ಜಯನಗರ ಆರ್ಥೋಪೇಡಿಕ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನೆ ನಡೆದಿರುವ ಸ್ಥಳ ವನ್ಯಜೀವಿ ವಲಯವಾಗಿದ್ದು, ರಸ್ತೆಯುದ್ದಕ್ಕೂ ಕಾಡುಪ್ರಾಣಿಗಳಿರುವ ಪ್ರದೇಶವೆಂಬ ಎಚ್ಚರಿಕೆ ಸೂಚನಾ ಫಲಕಗಳಿವೆ. ಹೀಗಾಗಿ ರಾತ್ರಿ ಬೈಕ್ ಸಂಚಾರ ಅಪಾಯಕಾರಿ ಎನ್ನಲಾಗಿದೆ.