ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ವಿದ್ಯುತ್ ಕೈ ಕೊಟ್ಟಿದೆ. ಸ್ಟ್ರಾಂಗ್ ರೂಂ ಓಪನ್ ವೇಳೆ ಕೆಲ ನಿಮಿಷಗಳ ಕಾಲ ವಿದ್ಯತ್ ಕೈ ಕೊಟ್ಟಿತ್ತು.
ವಿದ್ಯುತ್ ಲೋಡ್ ಹೆಚ್ಚಾಗಿ ಕರೆಂಟ್ ಕೈ ಕೊಟ್ಟಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಬೆಸ್ಕಾಂ ಸಿಬ್ಬಂದಿ ಸಮಸ್ಯೆ ಸರಿಪಡಿಸಿದ್ದಾರೆ. ವಿದ್ಯುತ್ ಕೈ ಕೊಟ್ಟ ಪರಿಣಾಮ ಎಣಿಕೆ ಕಾರ್ಯ ಕೆಲ ಕಾಲ ತಡವಾಗಿ ಆರಂಭವಾಗಿದ್ದು, ಒಟ್ಟು 22 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.