ETV Bharat / state

ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ವಿದ್ಯುತ್ ಚಾಲಿತ ಬೈಕ್ ಕಾರ್: ಏನಿದರ ವಿಶೇಷತೆ? - ಹೈಬ್ರಿಡ್ ಕಾರು

ಬೈಕ್ ಮತ್ತು ಕಾರಿನ ಮಿಶ್ರಣದಂತಿರುವ ವಿದ್ಯುತ್ ಚಾಲಿತ ವಾಹನವೊಂದನ್ನು ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್ ಕಂಪನಿ ಆವಿಷ್ಕಾರ ಮಾಡಿದೆ. ಈ ವಾಹನವನ್ನು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ.

electric bike car
ವಿದ್ಯುತ್ ಚಾಲಿತ ಬೈಕ್ ಕಾರ್
author img

By

Published : Nov 4, 2022, 9:53 AM IST

ಬೆಂಗಳೂರು: ಜಗತ್ತು ವಿದ್ಯುತ್ ಚಾಲಿತ ವಾಹನಗಳತ್ತ ಚಿತ್ತ ಹರಿಸಿದ್ದು, ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಇದೀಗ ಇವಿ ಬೈಕ್ ಕಾರು ಮಾದರಿಯಲ್ಲಿ ಮೂರು ಚಕ್ರದ ವಾಹನವನ್ನು ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ಅಭಿವೃದ್ಧಿಪಡಿಸಿದ್ದು, ಮುಂದಿನ ವರ್ಷ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗುತ್ತಿದೆ.

ಹೌದು, ಬೈಕ್ ಮತ್ತು ಕಾರಿನ ಮಿಶ್ರಣದಂತಿರುವ ವಿದ್ಯುತ್ ಚಾಲಿತ ವಾಹನವೊಂದನ್ನು ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್ ಕಂಪನಿ ಆವಿಷ್ಕಾರ ಮಾಡಿದೆ. ಈ ವಾಹನವನ್ನು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಗಮನ ಸೆಳೆಯುತ್ತಿದೆ.

ಮೂರು ಚಕ್ರ ಎಂದಾಕ್ಷಣ ಕೂಡಲೇ ನೆನಪಾಗುವುದು ಆಟೋ ಹಾಗೂ ವಿಶೇಷ ಚೇತನರ ಬೈಕ್. ಈ ಎರಡೂ ಮಾದರಿ ವಾಹನಗಳು ಮುಂದೆ ಒಂದು ಚಕ್ರ ಹಾಗೂ ಹಿಂಭಾಗದಲ್ಲಿ ಎರಡು ಚಕ್ರವನ್ನ ಹೊಂದಿವೆ. ಅದ್ರೆ, ಈಗ ಆವಿಷ್ಕಾರ ಮಾಡಿರುವ ತ್ರಿಚಕ್ರದ ವಿದ್ಯುತ್ ಚಾಲಿತ ವಾಹನ ಮುಂದೆ ಎರಡು ಚಕ್ರ ಹಾಗೂ ಹಿಂಭಾಗದಲ್ಲಿ ಒಂದು ಚಕ್ರವನ್ನು ಒಳಗೊಂಡಿದೆ. ಹಾಗಾಗಿ, ಇದು ತುಂಬಾ ವಿಶೇಷ ಎನಿಸುತ್ತದೆ.

ಈ ವಾಹನಕ್ಕೆ ಕಾರಿನ ರೀತಿಯ ಸ್ಟಿಯರಿಂಗ್ ಬದಲು ಬೈಕ್​ನಂತೆ ಹ್ಯಾಂಡಲ್ ಇರಲಿದೆ. ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ಟಾಪ್ ಇದ್ದು, ಕಾರಿನ ರೀತಿಯಲ್ಲಿಯೇ ಬಾಗಿಲು, ವಿಂಡ್ ಶೀಲ್ಡ್ ಹೊಂದಿದೆ. ಹಾಗಾಗಿ, ಬೈಕ್ ರೀತಿ ಇದು ಸ್ಕಿಡ್ ಆಗುವುದಿಲ್ಲ. ಸುಲಭವಾಗಿ ಚಾಲನೆ ಮಾಡಬಹುದಾಗಿದೆ. ಜೊತೆಗೆ ಇದು ವಿದ್ಯುತ್ ಚಾಲಿತ ವಾಹನವಾಗಿರುವ ಕಾರಣ ಆಟೋಗೇರ್ ವ್ಯವಸ್ಥೆ ಇರಲಿದೆ. ರಿವರ್ಸ್ ತೆಗೆಯಲು ಬಟನ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ಕುರುಕಲು ತಿಂಡಿ ಅಂದ್ರೆ ಮೂಗು ಮುರಿಯುವುದೇಕೆ?: ಮುಖ ಅರಳುವ ಸಂಗತಿ ಇಲ್ಲಿದೆ ನೋಡಿ

ಈ ವಾಹನವನ್ನು ಬೈಕ್ ಕಾರ್ ಎಂದು ಕರೆಯಬಹುದಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 120 ರಿಂದ 150 ಕಿಲೋಮೀಟರ್ ದೂರ ಕ್ರಮಿಸಲಿದೆ. ಬ್ಯಾಟರಿ ಪೂರ್ಣ ಚಾರ್ಜ್ ಮಾಡಲು 4 ಗಂಟೆ ಬೇಕಾಗಲಿದೆ. ಟ್ರಾಫಿಕ್​ನಲ್ಲಿಯೂ ಇದು ಉಪಯುಕ್ತ. ಬೈಕ್​ಗೆ ಹೋಲಿಸಿದರೆ ಉದ್ದ ಹೆಚ್ಚಿಲ್ಲ. ಹಾಗಾಗಿ, ಈ ಇವಿಯ ಪಾರ್ಕಿಂಗ್ ಬಲು ಸುಲಭ.

ವಾಹನದ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಸ್ಪಾಟ್ಟೆರ್ ಸಹ ಸಂಸ್ಥಾಪಕ ಪ್ರಸಾದ್, ಈಗಾಗಲೇ ನಮ್ಮ ವಿದ್ಯುತ್ ಚಾಲಿತ ತ್ರಿಚಕ್ರ ವಾಹನದ ವಿನ್ಯಾಸ ಪೂರ್ಣಗೊಂಡಿದೆ. ಕೇಂದ್ರ ಸರ್ಕಾರದಿಂದ ಅನುಮತಿಗೆ ಪ್ರಯತ್ನಿಸಿದ್ದೇವೆ. 2023 ರ ಜೂನ್​ಗೆ ಮಾರುಕಟ್ಟೆಗೆ ಬಿಡಬೇಕು ಎನ್ನುವ ನಿರೀಕ್ಷೆ ಇರಿಸಿಕೊಂಡಿದ್ದೇವೆ. 1,000-1,500 ಇವಿಗಳನ್ನು ಪ್ರತಿ ತಿಂಗಳು ಉತ್ಪಾದನೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ಕೇಂದ್ರದಿಂದ ಅನುಮತಿ ಸಿಗುತ್ತಿದ್ದಂತೆ ಉತ್ಪಾದನೆ ಆರಂಭಿಸಲಾಗುತ್ತದೆ. 2-3 ಲಕ್ಷ ದರ ನಿಗದಿಪಡಿಸುವ ಚಿಂತನೆ ಇದೆ ಎಂದರು.

ಇದನ್ನೂ ಓದಿ: ಮೆಕ್ಕೆಜೋಳದಿಂದ ಆಹಾರ ಉತ್ಪನ್ನ ಮಾತ್ರವಲ್ಲ..ಕವರ್,ಬ್ಯಾಗ್ ಕೂಡ ಸಿದ್ದವಾಗುತ್ತೆ: ಜಿಮ್ ನಲ್ಲಿ ಗಮನ ಸೆಳೆದ ಬಯೋ ಪ್ಲಾಸ್ಟಿಕ್

ಗಮನ ಸೆಳೆದ ಹೈಬ್ರಿಡ್ ಕಾರು: ಅರಮನೆ ಆವರಣದಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆದಾರರ ಸಮಾವೇಶದ ವಸ್ತು ಪ್ರದರ್ಶನದಲ್ಲಿ ಟೊಯೋಟಾ ಕಂಪನಿಯ ಹೈಬ್ರಿಡ್ ಕಾರುಗಳು ಗಮನ ಸೆಳೆದವು. ಈ ಕಾರುಗಳು ವಿದ್ಯುತ್ ಚಾಲಿತವಾಗಿದ್ದು, ಎಥೆನಾಲ್ ಕೂಡ ಬಳಸಬಹುದಾಗಿದೆ. ಈ ರೀತಿಯ ಹೈಬ್ರಿಡ್ ವಾಹನ ಅಪರೂಪದ್ದಾಗಿದ್ದು, ವಸ್ತುಪ್ರದರ್ಶನಕ್ಕೆ ಬಂದಿದ್ದ ಜನರು ಕುತೂಹಲದಿಂದ ಇವಿ ಮತ್ತು ಎಥೆನಾಲ್ ಚಾಲಿತ ಹೈಬ್ರಿಡ್ ಕಾರುಗಳನ್ನ ವೀಕ್ಷಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.