ETV Bharat / state

ಕೆಎಂಎಫ್​ ಚುನಾವಣೆ ಮುಂದೂಡಿ ಬಿಜೆಪಿಯಿಂದ ದ್ವೇಷದ ರಾಜಕಾರಣ: ರೇವಣ್ಣ - H D Ravenna press conference

ಕೆಎಮ್ಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯನ್ನ ಯಾಕೆ ಮುಂದೂಡಿದ್ರು ಅಂದ್ರೆ, ನಮಗೆ ಎಂಟು ನಿರ್ದೇಶಕರ ಬೆಂಬಲ ಇದೆ. ಇಂದು ಚುನಾವಣೆ ನಡೆದರೆ ನಾವು ಗೆಲ್ಲುತ್ತೇವೆ ಎಂದು ಸಿಎಂ ಚುನಾವಣೆ ಮುಂದೂಡಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ.

ಎಚ್ ಡಿ ರೇವಣ್ಣ ಪತ್ರಿಕಾಗೋಷ್ಠಿ
author img

By

Published : Jul 29, 2019, 8:27 PM IST

ಬೆಂಗಳೂರು: ಇಂದು ನಡೆಯಬೇಕಿದ್ದ ಕೆಎಂಎಫ್​​ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿ ಸುತ್ತೋಲೆ ಹೊರಡಿಸಿದ ಹಿನ್ನೆಲೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪತ್ರಿಕಾಗೋಷ್ಠಿ ನಡೆಸಿದರು.

ರಾಜ್ಯ ಸರ್ಕಾರ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಮುಂದೂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, ಸಿಎಂ ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ರು. ನಾವು ಗೆಲ್ಲುತ್ತೇವೆ ಅಂತ ಚುನಾವಣೆ ಮುಂದೂಡಿದ್ದಾರೆ. ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿವೆ. ಅದರಲ್ಲಿ ಮಂಡ್ಯ ಮತ್ತು ತುಮಕೂರು ಸೂಪರ್ ಸೀಡ್ ಆಗಿದೆ. 4 ಬಾರಿ ಬೋರ್ಡ್ ಮೀಟಿಂಗ್ ಆಗಿದ್ರೂ ಪ್ರಯೋಜನವಾಗಿಲ್ಲ. 2 ನಾಮೀನೇಷನ್ ಅನರ್ಹ ಮಾಡಲಾಗಿದೆ. 15ನೇ ತಾರೀಖಿನಿಂದ 30ರ ಒಳಗೆ ಎಲೆಕ್ಷನ್ ಮಾಡಬೇಕೆಂದಿತ್ತು. ಅದಕ್ಕೆ ನಾವು ಇಂದು ಬೆಳಿಗ್ಗೆ 6:45ಕ್ಕೆ ನಾಮಿನೇಷನ್ ಹಾಕಿದ್ದೆವು.

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪತ್ರಿಕಾಗೋಷ್ಠಿ

ರಾಮನಗರ ಹಾಗೂ ಬೆಂಗಳೂರು ಒಕ್ಕೂಟದ ನಾಮಿನೇಷನ್​​ಗಳನ್ನ ರದ್ದು ಮಾಡಿದ್ದಾರೆ. ಆದ್ರೆ ಚುನಾವಣೆಯನ್ನ ಯಾಕೆ ಮುಂದೂಡಿದ್ರು? ನಮಗೆ ಎಂಟು ನಿರ್ದೇಶಕರ ಬೆಂಬಲ ಇದೆ. ಇಂದು ಚುನಾವಣೆ ನಡೆದರೆ ನಾವು ಗೆಲ್ಲುತ್ತೇವೆ ಎಂದು ಸಿಎಂ ಚುನಾವಣೆ ಮುಂದೂಡಿದ್ದಾರೆ. ಅಧಿಕಾರಿಗಳನ್ನ ಮ್ಯಾನ್ಯುಪ್ಲೇಟ್ ಮಾಡಿದ್ದಾರೆ. ದ್ವೇಷದ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ನಾನು ಭೀಮಾನಾಯ್ಕ್​​ಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಬಿಟ್ಟು ಕೊಡ್ತೀನಿ ಅಂತಾ ಹೇಳಿಲ್ಲ. ಅವರು ಇದುವರೆಗೂ ಡೈರಿಗೆ ಹಾಲೇ ಹಾಕಿಲ್ಲ. ಇನ್ನು ಅಧ್ಯಕ್ಷ ಸ್ಥಾನ ಕೊಡೋದು ಹೇಗೆ? ನಾನು ಯಾರನ್ನೂ ಹೈಜಾಕ್ ಮಾಡಿಲ್ಲ. ‌ಎಲ್ಲ ನಿರ್ದೇಶಕರು ಇಲ್ಲೇ ಇದ್ದಾರೆ ಬೇಕಿದ್ರೆ ಕೇಳಿ. ಮಧ್ಯಾಹ್ನ ಚುನಾವಣೆಗೆ ಸ್ಟೇ ಕೊಡ್ತಾರೆ ಅಂದ್ರೆ ಇದರಿಂದ ಅರ್ಥ ಆಗುತ್ತೆ. ಇದರ ಹಿಂದೆ ರಾಜಕೀಯ ಕೈವಾಡ ಇದೆ ಎಂದರು.

ಅಲ್ಲದೆ ಕುಮಾರಸ್ವಾಮಿ ಭೀಮಾನಾಯ್ಕ್​​​ಗೆ ಮಾತು ಕೊಟ್ಟಿದ್ದಾರೆ ಎನ್ನುವ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ರೇವಣ್ಣ, ಭೀಮಾನಾಯ್ಕ್​​ಗೆ ಮಾತು ಕೊಡಲು ಕುಮಾರಸ್ವಾಮಿ ಯಾರು? ಕೆಎಂಎಫ್​​ಗೂ ಅವರಿಗೂ ಏನು ಸಂಬಂಧ? ಸದ್ಯ ಸ್ಟೇ ಆರ್ಡರ್​​ಗೆ ಅರ್ಜಿ‌ ಸಲ್ಲಿಸಿದ್ದೇನೆ. ಅದು ಸಿಕ್ಕ ಕೂಡಲೇ ನಿರ್ದೇಶಕರ ಜೊತೆ ಚರ್ಚಿಸಿ ಕಾನೂನು ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ತೇವೆ ಎಂದು ರೇವಣ್ಣ ತಿಳಿಸಿದರು.

Intro:ರೇವಣ್ಣ ಪ್ರೆಸ್ ಮೀಟ್

ಇಂದುನಡೆಯ ಬೇಕಿದ್ದ ಕೆ ಎಮ್ ಎಫ್ ನ ಅಧ್ಯಕ್ಷರ ಚುನಾವಣೆಯನ್ನು ರಾಜ್ಯಸರ್ಕಾರ ಮುಂದೂಡಿ ಸುತ್ತೋಲೋ ಹೊರಡಿಸಿ ಹಿನ್ನೆಲೆ. ಕೆಎಮ್ ಎಫ್ ನಲ್ಲಿ ಇಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಪತ್ರಿಕಾಗೋಷ್ಠಿ ನಡೆಸಿದರು. ರಾಜ್ಯ ಸರ್ಕಾರ ಅಧ್ಯಕ್ಷರ ಚುನಾವಣೆ ಮುಂದೂಡಿದಕ್ಕೆ ಅಸಮಾಧಾನ ವ್ಯಕ್ತಪಡಿಸದ ರೇವಣ್ಣ
ರಾಜ್ಯದಲ್ಲಿ‌ ಈಗ ೧೪ ಒಕ್ಕೂಟಗಳಿವೆ. ೧೪ ರಲ್ಲಿ ಒಂದು ಮಂಡ್ಯ ಒಕ್ಕೂಟ ಸೂಪರ್ ಸೀಡ್ ಆಗಿದೆ. ಇನ್ನೂಂದು ತುಮಕೂರು ‌ಒಕ್ಕೂಟವಾಗಿದೆ. ಇನ್ನೂ ನಾಲ್ಕು ಬಾರಿ ಬೋರ್ಡ್ ಮೀಟಿಂಗ್ ಆಗಿದ್ರು ಎಲ್ಲವೂ ಸರಿಯಾಗಿ ಆಗಿಲ್ಲ.ಆದರಲ್ಲಿ ಎರಡು ನಾಮೀನೇಷನ್ ಅನರ್ಹ ಮಾಡಲಾಗಿದೆ.೧೫ ನೇ ತಾರೀಖಿನಿಂದ ೩೦ ರೊಳಗೆ ಎಲೆಕ್ಷನ್ ಮಾಡಬೇಕೆಂದು ಇತ್ತು. ನಾವು ಇಂದು ಬೆಳಗ್ಗೆ ೬:೪೫ ಕ್ಕೆ ನಾಮೀನೇಷನ್ ಹಾಕಿದ್ದೆವು.ರಾಮನಗರ ಹಾಗೂ ಬೆಂಗಳೂರು ಒಕ್ಕೂಟದ ನಾಮೀನೇಷನ್ ಗಳನ್ನ ರದ್ದು ಮಾಡಿದ್ದಾರೆ.ಆದ್ರೆ ಚುನಾವಣೆಯನ್ನ ಯಾಕೆ ಮುಂದೂಡಿದ್ರು. ನಮಗೆ ಎಂಟು ನಿರ್ದೇಶಕರ ಬೆಂಬಲ ಇದೆ.ಇಂದು ಚುನಾವಣೆ ನಡೆದ್ರೆ ನಾವು ಗೆಲ್ತಿವಿ ಎಂದು ಸಿಎಮ್ ಚುನಾವಣೆ ಮುಂದೂಡಿದ್ದಾರೆ.
ಅಧಿಕಾರಿಗಳನ್ನ ಮ್ಯಾನ್ಯುಪ್ಲೇಟ್ ಮಾಡಿದ್ದಾರೆ ಸಿಎಂ ನಾವು ದ್ವೇಷ ರಾಜಕಾರಣ ಮಾಡಲ್ಲ ಎಂದು ಹೇಳ್ತಾ ಇದ್ದಾರೆ ಅದ್ರೆ ಇಲ್ಲಿ ದ್ವೇಷದ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆBody:ಎಂದು ಬಿಜೆಪಿ ವಿರುದ್ದ ರೇವಣ್ಣ ಅಸಮಧಾನ ವ್ಯಕ್ತಪಡಿಸಿದ್ರು.ಇನ್ನೂ ಭೀಮಾನಾಯ್ಕ್ ಗೆ ನಾನು ಕೆ ಎಮ್ ಎಫ್ ಅಧ್ಯಕ್ಷ ಸ್ಥಾನ ಬಿಟ್ಟುಕೊಡ್ತಿನಿ ಎಂದು ಹೇಳಿಲ್ಲ. ಭೀಮನಾಯ್ಕ್ ಅವರು ಇದುವರೆಗೂ ಡೈರಿಗೆ ಹಾಲೇ ಹಾಕಿಲ್ಲ ಹೇಗೆ ಅಧ್ಯಕ್ಷ ಸ್ಥಾನಕೊಡೋದು .
ನಾನು ಯಾರನ್ನ ಹೈಜಾಕ್ ಮಾಡಿಲ್ಲ ‌ಎಲ್ಲ ನಿರ್ದೇಶಕರು ಇಲ್ಲೆ ಇದ್ದಾರೆ ಬೇಕಿದ್ರೆ ಕೇಳಿ.ಮಧ್ಯಾಹ್ನ ಚುನಾವಣೆಗೆ ಸ್ಟೇ ಕೊಡ್ತಾರೆ ಅಂದ್ರೆ ಇದರಿಂದ ಅರ್ಥ ಆಗುತ್ತೆ.ಚುನಾವಣೆ ಮುಂದೂಡುವುದರ ಹಿಂದೆ ರಾಜಕೀಯ ಕೈವಾಡ ಇದೆ ಎಂದರು .ಅಲ್ಲದೆ ಕುಮಾರಸ್ವಾಮಿ ಭೀಮಾನಾಯ್ಕ್ ಗೆ ಮಾತು ಕೊಟ್ಟಿದ್ದಾರೆ ಎನ್ನುವ ವಿಚಾರಕ್ಕರೆ ಖಾರವಾಗಿ ಪ್ರತಿಕ್ರಿಯಿಸಿದ ರೇವಣ್ಣ ಭೀಮನಾಯ್ಕ್ ಗೆ ಮಾತು ಕೊಡಲು ಕುಮಾರಸ್ವಾಮಿ ಯಾರು.ಕೆ ಎಂ ಎಫ್ ಗೂ ಅವರಿಗೂ ಏನು ಸಂಬಂಧ.ಸದ್ಯ ಸ್ಟೇ ಆರ್ಡರ್ ಗೆ ಅರ್ಜಿ‌ಸಲ್ಲಿಸಿದ್ದೇನೆ ಅದು ಸಿಕ್ಕ ಕೂಡಲೆ ನಿರ್ದೇಶಕರ ಜೊತೆ ಚರ್ಚಿಸಿ ಕಾನೂನು ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ತೇವೆ ಎಂದು ರೇವಣ್ಣ ತಿಳಿಸಿದ್ರು.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.