ETV Bharat / state

ಚುನಾವಣಾ ಅಕ್ರಮ: ಆಯೋಗ ಜಪ್ತಿ ಮಾಡಿದ ನಗದು, ಮದ್ಯ ಇತರೆ ವಸ್ತುಗಳ ಮಾಹಿತಿ

ಚುನಾವಣೆ ಸಂಹಿತೆ ಜಾರಿಯಾದ ನಂತರ ಚುನಾವಣೆಯ ವಿವಿಧ ಜಾಗೃತ ದಳಗಳು ವಶಪಡಿಸಿಕೊಂಡಿರುವ ವಸ್ತುಗಳ ವಿವರ ಇಲ್ಲಿದೆ.

election-irregularities-details-of-cash-liquor-items-seized-by-commission
ಚುನಾವಣಾ ಅಕ್ರಮ: ಆಯೋಗದಿಂದ ಜಪ್ತಿ ಮಾಡಲಾದ ನಗದು, ಮದ್ಯ, ವಸ್ತುಗಳ ಮಾಹಿತಿ
author img

By

Published : Apr 12, 2023, 10:49 PM IST

ಬೆಂಗಳೂರು: ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ಕುರಿತು ಮಾರ್ಚ್ 29 ರಿಂದ ಇಲ್ಲಿಯವರೆಗೆ ಈ ಕೆಳಗಿನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಏ.12ರವರೆಗಿನ ಅಂಕಿ ಅಂಶ ಗಮನಿಸಿದಾಗ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು 55,06,70,204ರೂ. ನಗದು ವಶಪಡಿಸಿಕೊಂಡಿವೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 30,23,28,775 ರೂ. ಮೌಲ್ಯದ 6,55,738 ಲೀಟರ್ ಮದ್ಯ ವಶಪಡಿಸಿಕೊಂಡಿವೆ.

13,06,84,276/- ಮೌಲ್ಯದ 558.30 ಕೆ.ಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿವೆ. ಬಾಳುವ ಲೋಹಗಳನ್ನು ಗಮನಿಸಿದರೆ 53.28 ಕೆಜಿ ತೂಕದ ಚಿನ್ನ ವಶಪಡಿಸಿಕೊಂಡಿದ್ದು ಇದರ ಮೌಲ್ಯ 21,27,39,747 ರೂ. ವಶಪಡಿಸಿಕೊಳ್ಳಲಾಗಿದೆ. 427.07 ಕೆಜಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಇದರ ಮೊತ್ತ 23,83,22,844 ರೂ. ಆಗಿದೆ.

ಪ್ರಕರಣ ದಾಖಲು: ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 1,119 ಪ್ರಥಮ ತನಿಖಾ ವರದಿ (FIR) ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 63,340 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ, 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 17 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆ‌ಪಿಸಿ ಕಾಯ್ದೆಯಡಿ 3,116 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 4,740 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ.

ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ 8,145 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ. ಅಬಕಾರಿ ಇಲಾಖೆಯು 1,329 ಗಂಭೀರ ಪ್ರಕರಣಗಳನ್ನು ಹಾಗೂ 94 ಮದ್ಯದ ಪರವಾನಿಗೆ ಉಲ್ಲಂಘಿಸಿದ ಪ್ರಕರಣಗಳು, 51 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ ಒಟ್ಟು 4,716 ಪ್ರಕರಣಗಳನ್ನು ದಾಖಲಿಸಿದೆ, ಮತ್ತು 870 ವಿವಿಧ ಮಾದರಿಯ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಸಾರ್ವಜನಿಕ ಕುಂದುಕೊರತೆಗಳ ಇತ್ಯರ್ಥ: ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲಾದ 5337 ಕರೆಗಳಲ್ಲಿ 5,243 ಸಾರ್ವಜನಿಕರು ಮಾಹಿತಿ ಕೋರಿದ್ದಾರೆ. 13 ಜನರು ಪ್ರತಿಕ್ರಿಯೆ (ಫೀಡ್‌ಬ್ಯಾಕ್) ನೀಡಿದ್ದಾರೆ. 15 ಜನರು ಸಲಹೆಗಳನ್ನು ನೀಡಿದ್ದಾರೆ ಮತ್ತು 6 ಜನರು ದೂರುಗಳನ್ನು ದಾಖಲಿಸಿದ್ದಾರೆ. ಕರೆಗಳ ಮೂಲಕ ಸ್ವೀಕರಿಸಿದ ಎಲ್ಲಾ 5,337 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ, ಇದಲ್ಲದೇ ಎನ್‌ಪಿಆರ್‌ಸ್‌ ಪೋರ್ಟ್‌ನಲ್ಲಿ 3,963 ದೂರುಗಳನ್ನು ನಾಗರಿಕರು ನೋಂದಾಯಿಸಿದ್ದು ಇವುಗಳಲ್ಲಿ 3,683 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ಸಿ- ವಿಜಿಲ್: ಸಿ-ವಿಜಿಲ್ ಅಪ್ಲಿಕೇಷನ್ ಮೂಲಕ 2,389 ದೂರು ಸ್ವೀಕರಿಸಲಾಗಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಪರವಾನಿಗೆ ಇಲ್ಲದ ಪೋಸ್ಟರ್/ಬ್ಯಾನರ್ ಅಂಟಿಸಿದ ಪ್ರಕರಣಗಳು 1,417, ಹಣ ಹಂಚಿಕೆ ಪ್ರಕರಣಗಳು 22, ಬಂದೂಕುಗಳ ಪ್ರದರ್ಶಿಸಿ ಬೆದರಿಸಿದ ಪ್ರಕರಣಗಳು 261, ಉಡುಗೊರೆ, ಕೂಪನ್ ಹಂಚಿಕೆ ಪ್ರಕರಣಗಳು 31, ಮದ್ಯ ಹಂಚಿಕೆ ಪ್ರಕರಣಗಳು 18, ಆಸ್ತಿ ಹಾನಿಗೊಳಿಸಿದ ಪ್ರಕರಣಗಳು 27, ಪರವಾನಿಗೆ ಇಲ್ಲದ ವಾಹನ ಅಥವಾ ಬೆಂಗಾವಲು ಪಡೆ ಪ್ರಕರಣಗಳು 30 ದಾಖಲಾಗಿದ್ದು, ಈ ಪೈಕಿ 1,979 ದೂರುಗಳು ನಿಜವೆಂದು ಕಂಡುಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಮಾಧ್ಯಮ: ವಿವಿಧ ಮಾಧ್ಯಮಗಳ ಮೂಲಕ ದೂರುಗಳನ್ನು ಸ್ವೀಕರಿಸಲಾಗಿದ್ದು, ಇಮೇಲ್ ಮೂಲಕ 153 ಮತ್ತು ಪತ್ರಗಳ ಮೂಲಕ 151, ಸುದ್ದಿಪತ್ರಿಕೆಗಳಿಂದ 4, ಟಿ.ವಿ ಚಾನಲ್‌ ಗಳಿಂದ 32 ಮತ್ತು ಸಾಮಾಜಿಕ ಜಾಲತಾಣಗಳಿಂದ 46 ಸೇರಿದಂತೆ ಒಟ್ಟು 422 ದೂರುಗಳು ಬಂದಿದ್ದು, 249 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

ಸುವಿಧಾ: ಸುವಿಧಾ ಅಡಿಯಲ್ಲಿ ವಿವಿಧ ಅನುಮತಿಗಳನ್ನು ಕೋರಿ ಇವರೆಗೆ ಒಟ್ಟು 3,595 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 2,260 ಅರ್ಜಿಗಳಿಗೆ ಅನುಮತಿ ನೀಡಲಾಗಿದ್ದು, 910 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅವುಗಳಲ್ಲಿ 17 ಅರ್ಜಿಗಳು ಪ್ರಗತಿಯಲ್ಲಿವೆ. 34 ಬಾಕಿ ಉಳಿದಿದ್ದು, 104 ಅರ್ಜಿಗಳು ರದ್ದಾಗಿರುತ್ತವೆ.

ಇದನ್ನೂ ಓದಿ: ಚುನಾವಣೆ ವೇಳೆ ಅಕ್ರಮ ನಿಯಂತ್ರಣಕ್ಕಾಗಿ ಸುವಿಧಾ, ಸಿ - ವಿಸಿಲ್ ತಂತ್ರಾಂಶ ಬಳಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.