ETV Bharat / state

ಅಕ್ರಮಗಳ ಮೇಲೆ ಚು.ಆಯೋಗದ ಹದ್ದಿನ ಕಣ್ಣು: ₹39 ಕೋಟಿ ಮೌಲ್ಯದ ನಗದು, ಮದ್ಯ ಜಪ್ತಿ - ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ವಿಶೇಷ ನಿಗಾ

ರಾಜ್ಯದಲ್ಲಿ ಮೇ 10ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಚುನಾವಣಾ ಆಯೋಗ ವಿಶೇಷ ನಿಗಾ ಇಟ್ಟಿದೆ.

Election Commission
ಚುನಾವಣಾ ಆಯೋಗ
author img

By

Published : Apr 2, 2023, 6:54 AM IST

Updated : Apr 2, 2023, 7:26 AM IST

ಬೆಂಗಳೂರು: ರಾಜ್ಯದಲ್ಲೀಗ ಚುನಾವಣೆಯದ್ದೇ ಮಾತುಕತೆ. ಇತ್ತ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗ ಈವರೆಗೆ ಒಟ್ಟು 39.38 ಕೋಟಿ ರೂ ಮೌಲ್ಯದ ನಗದು, ಮದ್ಯ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದೆ. 2,040 ಫ್ಲೈಯಿಂಗ್ ಸ್ಕ್ಯಾಡ್, 2,605 ಸ್ಥಾಯಿ ವಿಚಕ್ಷಣಾ ತಂಡಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ.

ಚುನಾವಣೆ ಘೋಷಣೆಯಾದ ಬಳಿಕ ಖಾಸಗಿ ಆಸ್ತಿಗಳ ಮೇಲಿದ್ದ 29,828 ಗೋಡೆ ಬರಹ, 37,955 ಪೋಸ್ಟರ್, 14,413 ಬ್ಯಾನರ್ ಹಾಗೂ 16,290 ಇತರವುಗಳನ್ನು ತೆರವು ಮಾಡಲಾಗಿದೆ. ಸಾರ್ವಜನಿಕ ಆಸ್ತಿಗಳ ಮೇಲಿದ್ದ 28,740 ಗೋಡೆ ಬರಹ, 69,245 ಪೋಸ್ಟರ್, 45,081 ಬ್ಯಾನರ್ ಮತ್ತು 23,611 ಇತರವುಗಳನ್ನು ತೆರವು ಮಾಡಲಾಗಿದೆ. 73 ಪ್ರಕರಣಗಳನ್ನು ದಾಖಲಿಸಲಾಗಿದೆ.

ಜಪ್ತಿ ವಿವರ: ಪೊಲೀಸ್ ಇಲಾಖೆ, ಫ್ಲೈಯಿಂಗ್ ಸ್ಕ್ಯಾಡ್ ಸೇರಿ ಒಟ್ಟು 7.07 ಕೋಟಿ ನಗದು, 5.80 ಲಕ್ಷ ರೂ. ಮೌಲ್ಯದ ಮದ್ಯ, 21.76 ಲಕ್ಷ ರೂ. ಮೌಲ್ಯದ ಡ್ರಗ್ಸ್, 9.58 ಕೋಟಿ ಮೊತ್ತದ ಫ್ರೀಬೀಸ್​​ಗಳನ್ನು(ಉಚಿತ ವಸ್ತುಗಳು) ವಶಕ್ಕೆ ಪಡೆಯಲಾಗಿದೆ. ಒಟ್ಟು 172 ಎಫ್ಐಆರ್ ದಾಖಲಿಸಲಾಗಿದೆ. ಐಟಿ ಇಲಾಖೆ ‌ಒಟ್ಟು 3.90 ಕೋಟಿ ರೂ.‌ನಗದು ಜಪ್ತಿ ಮಾಡಿದೆ.

ಅಬಕಾರಿ ಇಲಾಖೆ 11.66 ಕೋಟಿ ಮೊತ್ತದ 1.93 ಲಕ್ಷ ಲೀಟರ್ ಮದ್ಯ ವಶಪಡಿಸಿಕೊಂಡಿದೆ. 1.81 ಲಕ್ಷ ರೂ.‌ಮೊತ್ತದ 12 ಕೆ.ಜಿ ಡ್ರಗ್ಸ್ ವಶಕ್ಕೆ ‌ಪಡೆಯಲಾಗಿದೆ. 264 ಗಂಭೀರ ಸ್ವರೂಪದ ಪ್ರಕರಣ, 195 ಪರವಾನಿಗೆ ಷರತ್ತು ಉಲ್ಲಂಘನೆ ಪ್ರಕರಣ, 14 ಎನ್​​ಡಿಪಿಎಸ್​ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್) ಮತ್ತು 737 ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 150 ವಿವಿಧ ರೀತಿಯ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

19,255 ಶಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, 1,091 ಸಿಆರ್​​ಪಿಸಿಯಡಿ ಪ್ರಕರಣ ದಾಖಲಿಸಲಾಗಿದೆ. 2,710 ಜಾಮೀನುರಹಿತ ವಾರಂಟ್ ಜಾರಿಗೊಳಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 1.39 ಕೋಟಿ ರೂ. ನಗದು, ಬೆಂಗಳೂರು ‌ನಗರದ ಚಿಕ್ಕಪೇಟೆ ಕ್ಷೇತ್ರದಲ್ಲಿ 30 ಲಕ್ಷ ರೂ., ಕಲಬುರಗಿ ನಗರದಲ್ಲಿ 1 ಕೋಟಿ ರೂ. ನಗದು ಜಪ್ತಿಯಾಗಿದೆ.

₹54 ಲಕ್ಷ ಮೌಲ್ಯದ ಮದ್ಯ ವಶ: ಮಾ.29ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಅಬಕಾರಿ ಉಪ ಆಯುಕ್ತ ನಾಗೇಶ್ ಕುಮಾರ್ ಹಾಗೂ ಅಬಕಾರಿ ಉಪಾಧೀಕ್ಷ ಪರಮೇಶ್ವರಪ್ಪ ಮತ್ತು‌ ಸಿಬ್ಬಂದಿ ಗಸ್ತು‌ ತಿರುಗುವ ಸಮಯದಲ್ಲಿ ದಾಬಸ್​​ಪೇಟೆ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಲಾರಿ ತಡೆದು ಪರಿಶೀಲನೆ ನಡೆಸಿದ್ದಾರೆ. ಚಾಲಕನ ಕ್ಯಾಬಿನ್​ನಲ್ಲಿದ್ದ 18 ಲೀಟರ್ ಮದ್ಯ ಹಾಗೂ 30 ಸಾವಿರ ಲೀಟರ್​ ಸ್ಪಿರಿಟ್ ಪತ್ತೆಯಾಗಿತ್ತು. ಯಾವುದೇ ದಾಖಲೆಗಳಿಲ್ಲದ ಕಾರಣ ವಾಹನ ಸಮೇತ ಚಾಲಕ ಶ್ರೀಧರ್​ ಎಂಬಾತನನ್ನು ವಶಕ್ಕೆ ಪಡೆಯಾಲಾಗಿತ್ತು. ವಶಪಡಿಸಿಕೊಂಡ ಮದ್ಯದ ಮೌಲ್ಯ 54 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಅಬಕಾರಿ ಇಲಾಖೆಯ ಭರ್ಜರಿ ಕಾರ್ಯಾಚರಣೆ ಬರೋಬ್ಬರಿ 54 ಲಕ್ಷ ಮೌಲ್ಯದ ಮದ್ಯ ವಶ

Last Updated : Apr 2, 2023, 7:26 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.