ETV Bharat / state

ಗ್ರಾ.ಪಂ ಚುನಾವಣೆಯ 610 ಸ್ಥಾನಗಳು ವಿವಿಧ ಕಾರಣಕ್ಕೆ ಖಾಲಿ: ಚುನಾವಣಾ ಆಯೋಗ - ಗ್ರಾಮ ಪಂಚಾಯಿತಿ ಚುನಾವಣೆಯ ಅಂಕಿ ಅಂಶಗಳು

ರಾಜ್ಯದ 30 ಜಿಲ್ಲೆಗಳ 226 ತಾಲೂಕುಗಳ 5,728 ಗ್ರಾಮ ಪಂಚಾಯತಿಗಳ 91,339 ಸ್ಥಾನಗಳಲ್ಲಿ 90,729 ಸ್ಥಾನಗಳಿಗೆ ಎರಡು ಹಂತದಲ್ಲಿ ನಡೆದ ಚುನಾವಣಾ ಫಲಿತಾಂಶ ಹೊರಬಿದ್ದಿದೆ.

election commission
ಚುನಾವಣಾ ಆಯೋಗ
author img

By

Published : Jan 1, 2021, 1:46 AM IST

ಬೆಂಗಳೂರು : ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಾಕಿ ಉಳಿದಿದ್ದ 36,688 ಸ್ಥಾನಗಳ ಫಲಿತಾಂಶವನ್ನು ಚುನಾವಣಾ ಆಯೋಗ ಗುರುವಾರ ಘೋಷಣೆ ಮಾಡಿದೆ.

ರಾಜ್ಯದ 30 ಜಿಲ್ಲೆಗಳ 226 ತಾಲೂಕುಗಳ 5,728 ಗ್ರಾಮ ಪಂಚಾಯತಿಗಳ 91,339 ಸ್ಥಾನಗಳಲ್ಲಿ 90,729 ಸ್ಥಾನಗಳಿಗೆ ಎರಡು ಹಂತದಲ್ಲಿ ನಡೆದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಮತಗಳ ಎಣಿಕೆಯ ಮೊದಲ ದಿನ 54,041 ಸ್ಥಾನಗಳಿಗೆ ಫಲಿತಾಂಶ ಪ್ರಕಟಿಸಿದ್ದ ಚುನಾವಣಾ ಆಯೋಗ, ಬಾಕಿ ಉಳಿದ 36,781 ಸ್ಥಾನಗಳ ಮತ ಎಣಿಕೆ ಕಾರ್ಯವನ್ನು ಇಂದು ನಡೆಸಿ ಫಲಿತಾಂಶ ಪ್ರಕಟಿಸಿದೆ.

ಚುನಾವಣಾ ಆಯೋಗದ ಅಂಕಿ ಅಂಶಗಳು
ಚುನಾವಣಾ ಆಯೋಗದ ಅಂಕಿ ಅಂಶಗಳು

8,153 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 82,576 ಸ್ಥಾನಗಳಿಗೆ ಮತದಾನದ ಮೂಲಕ ಆಯ್ಕೆ ನಡೆಸಿದ್ದು, ಒಟ್ಟು 90,729 ಚುನಾಯಿತ ಸದಸ್ಯರನ್ನು ಆಯ್ಕೆಯಾಗಿದ್ದಾರೆ. ವಿವಿಧ ಕಾರಣಗಳಿಂದಾಗಿ 610 ಸ್ಥಾನಗಳು ಖಾಲಿ ಉಳಿದಿವೆ.

ಇದನ್ನೂ ಓದಿ: ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್‌ ಗಮನಾರ್ಹ ಸಾಧನೆ; ಹೆಚ್​ಡಿಕೆ

ಅನುಸೂಚಿತ ಜಾತಿಯ 18,395 ಸದಸ್ಯರು, ಅನುಸೂಚಿತ ಪಂಗಡದ 10,527 ಸದಸ್ಯರು, ಹಿಂದುಳಿದ 'ಎ' ವರ್ಗಗಳ 12,942 ಸದಸ್ಯರು, ಹಿಂದುಳಿದ 'ಬಿ' ವರ್ಗಗಳ 3,126 ಸದಸ್ಯರು, ಸಾಮಾನ್ಯ ವರ್ಗದ 45739 ಸದಸ್ಯರು ನೂತನವಾಗಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ರಾಜ್ಯದ 30 ಜಿಲ್ಲೆಗಳಲ್ಲಿ ನಡೆದ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಬೀದರ್ ಜಿಲ್ಲೆಯಲ್ಲಿ ಮಾತ್ರ ಮತಯಂತ್ರವನ್ನು ಪ್ರಾಯೋಗಿಕವಾಗಿ ಬಳಸಿಕೊಂಡಿದ್ದು, ಬಾಕಿ ಉಳಿದ 29 ಜಿಲ್ಲೆಗಳಲ್ಲಿ ಮತ ಪತ್ರಗಳನ್ನು ಬಳಸಿಕೊಳ್ಳಲಾಗಿತ್ತು. ಮತ ಪತ್ರಗಳ ಎಣಿಕಾ ಕಾರ್ಯ ಆಯಾ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳಲ್ಲಿ ನಡೆಸಲಾಯಿತು. ಒಟ್ಟು ಎರಡು ದಿನಗಳ ಕಾಲ ಮತ ಎಣಿಕಾ ಕಾರ್ಯ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.