ETV Bharat / state

ಕನ್ನಡಕ್ಕೆ ಆದ್ಯತೆಯ ಕೆಲಸ ನಮ್ಮ ನಾಡಿನಲ್ಲೇ ಆಗಬೇಕಿದೆ: ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ - ವಿಮರ್ಶಕಿ ಎಂ ಎಸ್‌ ಆಶಾದೇವಿ

ಕೆಲವು ಮರಾಠಿ ಮುಖಂಡರು ಸಲ್ಲದ ಹೇಳಿಕೆಗಳನ್ನೆಲ್ಲಾ ನೀಡುತ್ತಾರೆ, ಆದರಿಂದ ಪ್ರೇರಿತರಾದ ಜನ ಭಾವೋದ್ವೇಗದಿಂದ ಕನ್ನಡಿಗರಿಗೆ ಕಿರುಕುಳ ಕೊಡುವುದು, ಅವರ ಆಸ್ತಿಪಾಸ್ತಿಗಳನ್ನು ನಾಶಮಾಡುವುದು ಮತ್ತು ಉಭಯ ರಾಜ್ಯಗಳ ಸಂಬಂಧವನ್ನು ಕೆಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇವೆಲ್ಲಾ ಅಸಂವಿಧಾನಾತ್ಮಕ ಚಟುವಟಿಕೆಗಳಾಗಿವೆ ಹಾಗೂ ನಿಜಕ್ಕೂ ಖಂಡನೀಯ ವಿಷಯವಾಗಿದೆ.

Go.Ru  Channabasappa
ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ
author img

By

Published : Dec 4, 2022, 8:47 PM IST

ಬೆಂಗಳೂರು: ಕನ್ನಡಕ್ಕೆ ಆದ್ಯತೆಯನ್ನು ಬೇರೆಲ್ಲೋ ಕೇಳಲು ಸಾಧ್ಯವಿಲ್ಲ. ಈ ಕೆಲಸ ನಮ್ಮ ನಾಡಿನಲ್ಲೇ ಆಗಬೇಕು, ಅದನ್ನು ಸರ್ಕಾರವೇ ಮಾಡಬೇಕಿದೆ ಎಂದು ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ತಿಳಿಸಿದರು.

ಭಾನುವಾರ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಕನ್ನಡ ನುಡಿ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಮಾನ್ಯತೆ ಹಾಗೂ ಆದ್ಯತೆಯನ್ನು ನಾವು ಬೇರೆಲ್ಲೋ ಕೇಳಲು ಸಾಧ್ಯವಿಲ್ಲ, ನಮ್ಮ ಕನ್ನಡ ನಾಡಿನಲ್ಲೇ ಕೇಳಬೇಕು. ಆ ಕೆಲಸವನ್ನು ನಮ್ಮ ಸರ್ಕಾರವೇ ಮಾಡಬೇಕಾಗಿದೆ. ಇಂತಹ ಕಾರ್ಯಕ್ರಮಗಳು ಚಿಂತನೆಯ ಸಂಕಲ್ಪದ ಸಂದರ್ಭಗಳಾಗಬೇಕು. ಈ ವೇದಿಕೆಯು ಈ ದೆಸೆಯಲ್ಲಿ ಮುನ್ನುಡಿ ಬರೆಯಬೇಕು ಎಂದು ಆಶಿಸಿದರು.

ಈಗ ಸಂದರ್ಭೋಚಿತವಾಗಿ ಗಡಿ ಸಂಘರ್ಷ ಈಗ ನಡಿಯುತ್ತಿದೆ. ಭಾರತ ಸ್ವಾತಂತ್ರ್ಯವಾದ ನಂತರದಲ್ಲಿ ರಾಜ್ಯಗಳು ಮರುವಿಂಗಡನೆಯಾಗಿದ್ದು, ಈ ಗಂಭೀರ ಸಮಯದಲ್ಲಿ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ಮನಸ್ಸು ಮಾಡಬೇಕಿದ್ದು, ಆದರೆ ಉದಾಸೀನ ತಾಳಿದೆ. ಹೀಗೆಯೇ ಮುಂದುವರೆದರೆ ರಾಜ್ಯ ರಾಜ್ಯಗಳು ಪರಸ್ಪರ ಜಗಳದಲ್ಲಿ ಇರಬೇಕು ಅನ್ನುವುದು ಕೇಂದ್ರ ಸರ್ಕಾರಕ್ಕೆ ಉದ್ದೇಶವಾಗಿದೆ ಎಂದು ಅರ್ಥ ಆಗುತ್ತಿದ್ದು, ಈ ವಿಷಯ ಸರ್ವೋಚ್ಛನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ನ್ಯಾಯಾಲಯದಲ್ಲಿ ಎರಡು ರಾಜ್ಯಗಳು ಕೂಡ ತಮ್ಮ ವಿಷಯಗಳನ್ನು ಪ್ರತಿಪಾದಿಸಲು ಬಹಳ ಅವಕಾಶವಿದೆ.

ಆದರೂ ಕೆಲವು ಮರಾಠಿ ಮುಖಂಡರು ಸಲ್ಲದ ಹೇಳಿಕೆಗಳನ್ನೆಲ್ಲಾ ನೀಡುತ್ತಾರೆ, ಆದರಿಂದ ಪ್ರೇರಿತರಾದ ಜನ ಭಾವೋದ್ವೇಗದಿಂದ ಕನ್ನಡಿಗರಿಗೆ ಕಿರುಕುಳ ಕೊಡುವುದು, ಅವರ ಆಸ್ತಿಪಾಸ್ತಿಗಳನ್ನು ನಾಶಮಾಡುವುದು ಮತ್ತು ಉಭಯ ರಾಜ್ಯಗಳ ಸಂಬಂಧವನ್ನು ಕೆಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇವೆಲ್ಲಾ ಅಸಂವಿಧಾನಾತ್ಮಕ ಚಟುವಟಿಕೆಗಳಾಗಿವೆ ಹಾಗೂ ನಿಜಕ್ಕೂ ಖಂಡನೀಯ ವಿಷಯವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿರುವ ಪ್ರತಿಕ್ರಿಯೆಗೆ ನಾವು ಬೆಂಬಲ ನೀಡುತ್ತೇವೆ. ಈ ಕಾರ್ಯಕ್ರಮ ಕನ್ನಡಿಗರ ಗಡಿ ರಕ್ಷಣೆಗಾಗಿ ಕನ್ನಡಿಗರನ್ನೆಲ್ಲಾ ಒಂದೇ ದನಿ ಎನ್ನುವಂತ ಒಂದು ಸಂದೇಶವನ್ನು ಕೊಡಲಿ ಎಂದು ಹಾರೈಸುತ್ತೇನೆ ಎಂದರು.

ನಿಕಟಪೂರ್ವ ಐಎಎಸ್‌ ಅಧಿಕಾರಿ, ಸಮ್ಮೇಳನಾಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ, ರಾಜ್ಯ ಸರ್ಕಾರ ಕನ್ನಡ ಆಡಳಿತ ಭಾಷೆಯೆಂದು ಘೋಷಣೆ ಮಾಡಿ ಆದೇಶ ಹೊರಡಿಸಿದರೂ ಅದು ಸಂಪೂರ್ಣವಾಗಿ ಜಾರಿಯಾಗಿಲ್ಲ ಟಿಪ್ಪಣಿ ಮತ್ತು ಆದೇಶಗಳು ಆಂಗ್ಲ ಭಾಷೆಯಲ್ಲಿವೆ. ನಮ್ಮ ವಿಧಾನಸೌಧ ಕಚೇರಿಗಳ ಕಡತಗಳನ್ನು ಪರಿಶೀಲಿಸಿದಲ್ಲಿ ಪತ್ರ ವ್ಯವಹಾರಗಳು ಆಂಗ್ಲದಲ್ಲಿ ಇರುವುದು ನಮಗೆ ಗೊತ್ತಾಗುತ್ತದೆ. ಮುಖ್ಯವಾಗಿ ರಾಜ್ಯಮಟ್ಟದಿಂದ ಕೆಳಹಂತದವರೆಗೂ ಇರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡತಗಳ ನಿರ್ವಹಣೆ ಮತ್ತು ಟಿಪ್ಪಣಿ ಹಾಗೂ ಆದೇಶಗಳು ಕನ್ನಡದಲ್ಲಿರಬೇಕು. ಎಲ್ಲಾ ಪತ್ರ ವ್ಯವಹಾರಗಳು ಕನ್ನಡದಲ್ಲಿ ಆಗಬೇಕು. ಎಲ್ಲಾ ನ್ಯಾಯಾಲಯಗಳ ನಡವಳಿ ಮತ್ತು ಆದೇಶಗಳು ಕನ್ನಡದಲ್ಲಿರಬೇಕು. ರಾಜ್ಯದ ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿರಬೇಕು. ಶಾಲಾ ಕಾಲೇಜುಗಳಲ್ಲಿ ಕನ್ನಡ ಮಾತನಾಡುವುದನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಈ ವೇಳೆ ಗಣ್ಯರಿಗೆ ಕದಂಬ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಜೀವನ್ಮುಖಿ, ಸಂಸ್ಕೃತ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ಗೋವಿಂದಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಮಲಿಂಗಶೆಟ್ಟಿ, ಹಿರಿಯ ಹೈಕೋಟ್ ವಕೀಲ ರೇವಣ್ಣಸಿದ್ದಯ್ಯ, ವಿಮರ್ಶಕಿ ಎಂ.ಎಸ್‌. ಆಶಾದೇವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪಡಿತರ ಚೀಟಿ ವಿತರಣೆ ಮತ್ತು ನ್ಯಾಯಬೆಲೆ ಅಂಗಡಿ ಹಂಚಿಕೆಯಲ್ಲಿ ಗೊಂದಲ: ಹೈಕೋರ್ಟ್ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.