ETV Bharat / state

ಮಕ್ಕಳಿಗೆ ಆನ್‍ಲೈನ್ ತರಗತಿ: ಅನಾವಶ್ಯಕ ಶೋಷಣೆ ಮಾಡದಂತೆ ಸಚಿವರ ಸೂಚನೆ - ಮಕ್ಕಳಿಗೆ ಆನ್​ಲೈನ್ ಪಾಠ

ದೇಶಾದ್ಯಂತ ಲಾಕ್​ಡೌನ್​ ಹೇರಿಕೆ ಮಾಡಿರುವ ಕಾರಣ ಶಿಕ್ಷಣ ಸಂಸ್ಥೆಗಳು ಆನ್​ಲೈನ್​ನಲ್ಲಿ ಪಾಠ ಮಾಡ್ತಿದ್ದು, ಇದರಿಂದ ಕೆಲವೊಂದು ಸಂಸ್ಥೆಗಳು, ವಿದ್ಯಾರ್ಥಿ ಹಾಗೂ ಪೋಷಕರ ಮೇಲೆ ಒತ್ತಡ ಹೇರುತ್ತಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿವೆ.

Education minister suresh kumar
Education minister suresh kumar
author img

By

Published : May 12, 2020, 7:13 PM IST

ಬೆಂಗಳೂರು: ರಾಜ್ಯದ ಕೆಲ ಶಾಲೆಗಳು ಎಲ್​ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಮಕ್ಕಳಿಗೆ ಮನೆಯಲ್ಲೇ ಆನ್​ಲೈನ್​ ತರಗತಿ ನಡೆಸಲು ಮುಂದಾಗಿವೆ. ಈ ಮೂಲಕ ಪೋಷಕರಿಂದ ಶುಲ್ಕ ವಸೂಲಿ ಮಾಡುತ್ತಿವೆ. ಇದು ಸಲ್ಲದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್​.ಸುರೇಶ್​​ ಕುಮಾರ್​​ ಖಡಕ್​ ವಾರ್ನ್​​ ಮಾಡಿದ್ದಾರೆ.

Education minister suresh kumar warns
ಮಕ್ಕಳಿಗೆ ಆನ್‍ಲೈನ್ ಮೂಲಕ ತರಗತಿ

ಮಕ್ಕಳಿಗೆ ಆನ್​ಲೈನ್​ ತರಗತಿ ಅವಶ್ಯಕತೆ ಇರುವುದೇ? ಅಥವಾ ಇಲ್ವಾ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.‌ ಆನ್‍ಲೈನ್ ಮೂಲಕ ಶಿಕ್ಷಣದ ಅವಶ್ಯಕತೆ ಇಲ್ಲದಿರುವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೂ ಈ ಮೂಲಕ ಶಿಕ್ಷಣ ನೀಡುತ್ತೇವೆಂದು ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಶೋಷಿಸುತ್ತಿರುವುದು ಇಲಾಖೆಯ ಗಮನಕ್ಕೆ‌ ಬಂದಿದೆ.

  • Karnataka education minister @nimmasuresh warns the private schools conducting online teaching. Says unnecessary online teaching won't be tolerated and it can have an adverse impact on the health of children. #KarnatakaFightsCorona

    — DP SATISH (@dp_satish) May 12, 2020 " class="align-text-top noRightClick twitterSection" data=" ">

ಆನ್‍ಲೈನ್ ತರಗತಿಗಳನ್ನು ನಡೆಸಬೇಕಾದಲ್ಲಿ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದೇ ಮಕ್ಕಳು ಅನಾವಶ್ಯಕವಾಗಿ ಶೋಷಣೆಗೆ ಒಳಗಾಗಬಾರದು. ಇಂತಹ ಸಂದರ್ಭದಲ್ಲಿ ಮಕ್ಕಳ ಗಮನದ ಅವಧಿ ಹಾಗೂ ತಾಂತ್ರಿಕ ಪರಿಕರಗಳನ್ನು ಉಪಯೋಗಿಸುವಾಗ ಉಂಟಾಗಬಹುದಾದ ಆರೋಗ್ಯದ ಅಡ್ಡ ಪರಿಣಾಮ ಗಮನದಲ್ಲಿಟ್ಟುಕೊಂಡು ಆನ್‍ಲೈನ್ ಶಿಕ್ಷಣ ನೀಡಬೇಕಾಗುತ್ತದೆ.

ಅವೈಜ್ಞಾನಿಕವಾಗಿ ದಿನವಿಡೀ ಆನ್‍ಲೈನ್ ತರಗತಿ ನಡೆಸುವಂತಹ ಕ್ರಮಗಳಿಗೆ ಕಡಿವಾಣ ಹಾಕಲು ತಕ್ಷಣ ಕಟ್ಟನಿಟ್ಟಾದ ಸುತ್ತೋಲೆ ಹೊರಡಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.