ETV Bharat / state

ಪುಟ್ಟೇನಹಳ್ಳಿ ಹವಾಲ ಕೇಸ್ ಇಡಿ ಅಂಗಳಕ್ಕೆ: ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲು ಸಿದ್ಧತೆ - ಪುಟ್ಟೇನಹಳ್ಳಿ ಹವಾಲ ಕೇಸ್ ತನಿಖೆ ನಡೆಸಲಿರುವ ಇಡಿ

ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಡಿ ತನಿಖೆ ನಡೆಸಲಿದ್ದು, ಪ್ರತ್ಯೇಕ‌ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದೆ.

ED will investigate Puttenahalli illegal money transfer case
ಪುಟ್ಟೇನಹಳ್ಳಿ ಹವಾಲ ಕೇಸ್ ತನಿಖೆ ನಡೆಸಲಿರುವ ಇಡಿ
author img

By

Published : Jan 20, 2022, 7:37 PM IST

Updated : Jan 21, 2022, 10:38 PM IST

ಬೆಂಗಳೂರು: ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣ ಇಡಿ ಅಂಗಳ ತಲುಪಿದ್ದು, ಪ್ರತ್ಯೇಕ‌ ಪ್ರಕರಣ ದಾಖಲಿಸಿಕೊಂಡು ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಮುಂದಾಗಿದೆ.

ನವೆಂಬರ್ 2021ರಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಫೈಜಲ್, ಫಜಲ್, ಅಬ್ದುಲ್ ಮನಾಫ್, ಮೊಹಮ್ಮದ್ ಸಾಲಿ ಈ ನಾಲ್ವರಿಂದ ಕೋಟ್ಯಂತರ ರೂ. ಅಕ್ರಮ ವ್ಯವಹಾರ ನಡೆದಿತ್ತು. ಈ ಅಸಾಮಿಗಳು ಸುಮಾರು 2,886 ಅಕೌಂಟ್​ಗಳಿಂದ ನೂರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆಗಿದ್ದು ಬೆಳಕಿಗೆ ಬಂದಿತ್ತು.

accused
ಪ್ರಕರಣದ ಆರೋಪಿಗಳು

ಸದ್ಯ ಅಕೌಂಟ್ ಫ್ರೀಜ್ ಮಾಡಿರುವ ಪುಟ್ಟೇನಹಳ್ಳಿ ಪೊಲೀಸರು, ಖಾತೆ ಹೋಲ್ಡರ್​​ಗಳ ವಿಚಾರಣೆ ನಡೆಸುತ್ತಿದ್ದಾರೆ. ಹಲವರಿಗೆ ನೋಟಿಸ್ ನೀಡಿದರೂ ಕೋವಿಡ್ ನೆಪ‌ ನೀಡುತ್ತಿದ್ದಾರೆ. ಇತ್ತ ಇಡಿ ಕೂಡ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಇದೇ ಜಾಲ ರಾಜ್ಯವನ್ನು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹವಾಲಾ ದಂಧೆಯ ಕಿಂಗ್​​​ಪಿನ್​ಗಳಾದ ಕೇರಳ ಮೂಲಕ ರಿಯಾಜ್ ಹಾಗೂ ಮನಸ್ ಸಹೋದರರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಹವಾಲ ದಂಧೆ ಪ್ರಕರಣ: 800 ಬ್ಯಾಂಕ್ ಅಕೌಂಟ್​​ಗಳಿಂದ 70 ಕೋಟಿ ರೂ.ಚಲಾವಣೆ

ಬೆಂಗಳೂರಿನ ವಿವಿಧೆಡೆ ಕೋಟಿ ಕೋಟಿ ಹಣ ಪಡೆಯುತಿದ್ದ ನಾಲ್ವರು, ವಾಟ್ಸಾಪ್​​​​​​​​​​​​ನಲ್ಲಿ ರಿಯಾಜ್ ಕಳುಹಿಸುತ್ತಿದ್ದ ಅಕೌಂಟ್​​​​ಗೆ ಬ್ಯಾಂಕಿಗೆ ತೆರಳದೆ ಡೆಪಾಸಿಟ್ ಮಿಷಿನ್ ಮೂಲಕ ಜಮೆ ಮಾಡುತ್ತಿದ್ದರು. ಆದರೆ ಆ ಹಣ ಯಾರಿಗೆ ತಲುಪುತ್ತಿತ್ತು. ಯಾಕಾಗಿ ಆ ದುಡ್ಡು ಬಳಕೆ ಆಗ್ತಾ ಇತ್ತು ಅನ್ನೋದು ನಿಗೂಢವಾಗಿದ್ದು, ಇಡಿ ಪತ್ತೆ ಹಚ್ಚುತ್ತಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 10:38 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.