ETV Bharat / state

ಶಾಸಕ, ಮತ್ತಿತರರಿಗೆ ಸಂಬಂಧಿಸಿದ ನಗದು, ಸ್ಥಿರಾಸ್ತಿ ದಾಖಲೆ ವಶಕ್ಕೆ ಪಡೆದ ಇಡಿ - ಇಡಿ

ಶಾಸಕ ಕೆ ವೈ ನಂಜೇಗೌಡ ಮತ್ತಿತರರಿಗೆ ಸಂಬಂಧಿಸಿದ ಸ್ಥಿರ, ಚರಾಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.

ಇಡಿ
ಇಡಿ
author img

By ETV Bharat Karnataka Team

Published : Jan 11, 2024, 8:23 PM IST

Updated : Jan 11, 2024, 8:58 PM IST

ಬೆಂಗಳೂರು : ಅನಧಿಕೃತವಾಗಿ ಸರ್ಕಾರಿ ಜಮೀನು ಹಂಚಿಕೆ ಪ್ರಕರಣದಲ್ಲಿ ಕರ್ನಾಟಕದ ಮಾಲೂರು ಶಾಸಕ ಕೆ. ವೈ ನಂಜೇಗೌಡ ಮತ್ತಿತರ ಆರೋಪಿಗಳಿಗೆ ಸಂಬಂಧಿಸಿದ 25 ಲಕ್ಷ ರೂ ನಗದು, 50 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ದಾಖಲೆಗಳನ್ನ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. 150 ಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ ಕಾಯ್ದೆ 2002 ರಡಿ ಇಡಿ ಅಧಿಕಾರಿಗಳು ಜನವರಿ 8 ರಂದು ಶೋಧ ಕಾರ್ಯಾಚರಣೆ ನಡೆಸಿದ್ದರು.

ಮಾಲೂರು ಶಾಸಕರಾಗಿರುವ ಕೆ. ವೈ ನಂಜೇಗೌಡ, ಮಾಲೂರು ಭೂ ಮಂಜೂರಾತಿ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇತರ ಸದಸ್ಯರ ಸಹಕಾರದಿಂದ ಒಂದೇ ತಿಂಗಳ ಅವಧಿಯಲ್ಲಿ 150 ಕೋಟಿ ಮೌಲ್ಯದ ಸುಮಾರು 80 ಎಕರೆ ಜಮೀನು ಮಂಜೂರು ಮಾಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಇದಕ್ಕಾಗಿ ನಕಲಿ ದಾಖಲೆಗಳು, ಪತ್ರಗಳನ್ನ ಸಲ್ಲಿಸಿರುವುದು ಪ್ರಾದೇಶಿಕ ಆಯುಕ್ತರ ತಪಾಸಣೆಯ ಸಂದರ್ಭದಲ್ಲಿ ತಿಳಿದು ಬಂದಿತ್ತು ಎಂದು ಆರೋಪಿಸಲಾಗಿತ್ತು. ಭಾರಿ ಪ್ರಮಾಣದ ಅಕ್ರಮ ಹಾಗೂ ಹಣ ವರ್ಗಾವಣೆ ಆರೋಪ ಕೇಳಿ ಬಂದ ಬಳಿಕ ಪ್ರಕರಣಕ್ಕೆ ಇಡಿ ಎಂಟ್ರಿಯಾಗಿತ್ತು.

  • ED has conducted search operations in the case of KY Nanje Gowda, MLA, Malur, Karnataka and his associates under the provisions of PMLA, 2002. Search actions were conducted in connection with a case related to illegal allotment of Government Land worth Rs.150 Crore. During the…

    — ED (@dir_ed) January 11, 2024 " class="align-text-top noRightClick twitterSection" data=" ">

ಜನವರಿ 8 ರಂದು ಕೋಲಾರ ಸೇರಿದಂತೆ ವಿವಿಧೆಡೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಕೆ ವೈ ನಂಜೇಗೌಡ ಮತ್ತಿತರ ಆರೋಪಿಗಳಿಗೆ ಸಂಬಂಧಿಸಿದ 25 ಲಕ್ಷ ರೂ ನಗದು, 50 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೇ ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೋಮುಲ್)ಗೆ ನಡೆಯುತ್ತಿರುವ ನೇಮಕಾತಿಗೆ ಸಂಬಂಧಿಸಿದ ಮತ್ತೊಂದು ಹಗರಣ ಸಹ ಬೆಳಕಿಗೆ ಬಂದಿದೆ. ನಾಲ್ಕು ಸದಸ್ಯರ ಸಹಿತ ಕೋಮುಲ್'ನ ನೇಮಕಾತಿ ಸಮಿತಿಯ ಅಧ್ಯಕ್ಷರಾಗಿರುವ ಕೆ. ವೈ ನಂಜೇಗೌಡ, ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆಯನ್ನ ಸಂಪೂರ್ಣವಾಗಿ ದುರುದ್ದೇಶಪೂರಿತವಾಗಿ ಮಾಡಲಾಗಿದೆ ಎಂದು ಇ.ಡಿ ಆರೋಪಿಸಿದೆ. ಅಲ್ಲದೇ ನೇಮಕಾತಿ ಸಮಿತಿಯು ಕೆಲವು ನಿರ್ದಿಷ್ಟ ರಾಜಕಾರಣಿಗಳು ಸೂಚಿಸಿರುವ ಅಭ್ಯರ್ಥಿಗಳಿಗೆ 20-30 ಲಕ್ಷ ರೂ. ಪಡೆದು ಸೀಟು ಮಾರಾಟ ಮಾಡಿರುವುದು ಸಹ ಇಡಿ ತನಿಖೆ ವೇಳೆ ತಿಳಿದುಬಂದಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮಾಲೂರು ಶಾಸಕ ಕೆ.ವೈ.ನಂಜೇಗೌಡ ನಿವಾಸ, ಕಚೇರಿಗಳ ಮೇಲೆ ಇಡಿ ದಾಳಿ

Last Updated : Jan 11, 2024, 8:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.