ETV Bharat / state

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಲಿಂಕ್ ಆರೋಪ ಪ್ರಕರಣ: ನಟಿಮಣಿಯರ ವಿಚಾರಣೆ ಮುಗಿಸಿದ ಇಡಿ - ED

ಇಡಿ ಅಧಿಕಾರಿಗಳು ನಟಿಮಣಿಯರಾದ ಸಂಜನಾ ಹಾಗೂ ರಾಗಿಣಿ ವಿಚಾರಣೆ ನಡೆಸಿದ್ದಾರೆ. 5 ದಿನಗಳ ಕಾಲ ವಿಚಾರಣೆ ನಡೆಸಲು ಎನ್​ಡಿಪಿಎಸ್ ನ್ಯಾಯಾಲಯದಿಂದ ಅನುಮತಿ ಪಡೆದಿದ್ದ ಇಡಿ, ನಿರಂತರವಾಗಿ ಮಾಹಿತಿ ಕಲೆ ಹಾಕಿ ಸಿನಿಮಾ ವಹಿವಾಟು ಹಾಗೂ ಆದಾಯದ ಮೂಲಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗ್ತಿದೆ.

sandalwood drugs case
ಸ್ಯಾಂಡಲ್​ವುಡ್ ಡ್ರಗ್
author img

By

Published : Oct 4, 2020, 12:20 PM IST

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣ ಸಂಬಂಧ ನ್ಯಾಯಾಲಯದ ಅನುಮತಿ ಪಡೆದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಟಿಮಣಿಯರು ಹಾಗೂ ಆಪ್ತರ ವಿಚಾರಣೆ ನಡೆಸಿದ್ದಾರೆ.

ಇಡಿ ಅಧಿಕಾರಿಗಳಿಂದ ನಟಿಮಣಿಯರಾದ ಸಂಜನಾ ಹಾಗೂ ರಾಗಿಣಿ ವಿಚಾರಣೆ ಮುಕ್ತಾಯವಾಗಿದೆ. 5 ದಿನಗಳ ಕಾಲ ವಿಚಾರಣೆ ನಡೆಸಲು ಎನ್​ಡಿಪಿಎಸ್ ನ್ಯಾಯಾಲಯದಿಂದ ಅನುಮತಿ ಪಡೆದಿದ್ದ ಇಡಿ, ನಿರಂತರ ಮಾಹಿತಿ ಕಲೆ ಹಾಕಿ ಸಿನಿಮಾ ವಹಿವಾಟು ಹಾಗೂ ಆದಾಯದ ಮೂಲಗಳ ಬಗ್ಗೆ ಪ್ರಶ್ನೆ ಮಾಡಿತ್ತು. ರಾಗಿಣಿ ತಂದೆ ಮಿಲಿಟರಿ ಕುಟುಂಬದವರಾದ ಕಾರಣ ಕೆಲ ಆಸ್ತಿಗಳು ಅವರ ಸಂಪಾದನೆಯಿಂದ ಬಂದಿದ್ದಾಗಿವೆ. ಹಾಗೆಯೇ ಇಡಿ ತನಿಖೆಗೆ ಅವರು ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಇಡಿ ವಿಚಾರಣೆ ವೇಳೆ ಸಂಜನಾ ಕಣ್ಣೀರು ಹಾಕಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇಡಿ ಅಧಿಕಾರಿಗಳು ಸಂಜನಾಗೆ ಇದುವರೆಗೆ ಎಷ್ಟು ಸಿನಿಮಾ ಮಾಡಿದ್ದೀರಿ? ಸಿನಿಮಾ ಮೂಲಕ ಎಷ್ಟು ಆದಾಯ ಬಂದಿದೆ? ಕಂಪನಿ ಹೂಡಿಕೆ ಎಷ್ಟು? ಪಿತ್ರಾರ್ಜಿತ ಆಸ್ತಿ ಇದೆಯಾ? ಇತ್ತೀಚೆಗೆ ಆಸ್ತಿ ಖರೀದಿ ಮಾಡಿದ್ದೀರಾ? ಹಾಗೆ ಅಜೀಜ್ ಪಾಷಾರನ್ನು ಮದುವೆಯಾಗಿದ್ದೀರಿ. ಅವರ ಆಸ್ತಿ ಎಷ್ಟು? ಎಂಬ ಪ್ರಶ್ನೆ ಮಾಡಿದಾಗ ಸಂಜನಾ ಕಕ್ಕಾಬಿಕ್ಕಿಯಾಗಿದ್ದಾರೆ ಎನ್ನಲಾಗ್ತಿದೆ. ಸಂಜನಾ ಇಲ್ಲಿಯವರೆಗೆ 42 ಸಿನಿಮಾ ಮಾಡಿದ್ದು, ಅದರಲ್ಲಿ ಯಾವುದೂ ದೊಡ್ಡ ಹೆಸರು ಮಾಡಿಲ್ಲ. ಸದ್ಯ ಈಗಾಗಲೇ ಐಟಿಗೆ ಇಡಿ ಅಧಿಕಾರಿಗಳು ಸಂಜನಾ ಆಸ್ತಿ ಬಗ್ಗೆ ಮಾಹಿತಿ ಕೇಳಿ ಪತ್ರ ಬರೆದಿದ್ದಾರೆ ಎನ್ನಲಾಗ್ತಿದೆ.

ಪರಪ್ಪನ ಅಗ್ರಹಾರದಿಂದ ಒಂದು ವೇಳೆ ಜಾಮೀನು ಪಡೆದು ಹೊರಬಂದರೂ ಕೂಡ, ಸಂಜನಾಗೆ ಇಡಿ ಉರುಳು ಮಾತ್ರ ತಪ್ಪಿದ್ದಲ್ಲ. ಪರಪ್ಪನ ಅಗ್ರಹಾರದಲ್ಲಿ ವಿಚಾರಣೆ‌ ಮುಕ್ತಾಯಗೊಳಿಸಿ ದಾಖಲೆಗಳ ಪರಿಶೀಲನೆಯಲ್ಲಿ ಇಡಿ ತೊಡಗಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.