ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದ ಆರ್ಥಿಕ ಪ್ಯಾಕೇಜ್ ಎಸ್ಎಂಇ ವಲಯಕ್ಕೆ ನಿರಾಶದಾಯಕ ಎಂದು ಕಾಸಿಯಾ ಸಂಘದ ಅಧ್ಯಕ್ಷ ಕೆ.ಬಿ ಅರಸಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತಿರುವ ಹಾಗೂ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆರ್ಥಿಕ ಕೊಡುಗೆಯನ್ನು ನೀಡುತ್ತಿರುವ ವಲಯನ್ನು ಪರಿಗಣಿಸದೇ ಇರುವುದು ಬೇಸರವಾಗಿದೆ. ಹಣಕಾಸು ಹರಿವಿನ ತೊಂದರೆ, ದುಡಿಮೆ ಬಂಡವಾಳದ ಕೊರತೆ, ಕಾರ್ಮಿಕರ ಗೈರುಹಾಜರಿ ಇತ್ಯಾದಿ ವಿಷಯಗಳಲ್ಲಿ ಸಂಕಷ್ಟಕ್ಕೀಡಾಗಿದ್ದೇವೆ. ಅವುಗಳು ಸಾಮಾನ್ಯ ಸ್ಥಿತಿಗೆ ಮರಳುವಂತಾಗಲು ನಮಗೆ ಸರ್ಕಾರ ಆದ್ಯತೆ ನೀಡಬೇಕಿತ್ತು ಎಂದರು.
ಆದರೆ ಆಸ್ತಿ ತೆರಿಗೆಯನ್ನು 2022ರ ಮಾರ್ಚ್ವರೆಗೆ ಏರಿಕೆ ಮಾಡದೆ ಪಾವತಿಸಲು 6 ತಿಂಗಳುಗಳ ಕಾಲಾವಕಾಶ ಮತ್ತು ಇತ್ಯಾದಿ ಪರಿಹಾರಗಳನ್ನು ಕೋರಿದ್ದರೂ ಅವುಗಳನ್ನು ಪರಿಗಣಿಸದೇ ಇರುವುದು ಎಸ್ಎಂಇ ವಲಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಓದಿ:ರೈತರಿಗೋಸ್ಕರ ಕೇಂದ್ರದ ಐತಿಹಾಸಿಕ ನಿರ್ಧಾರ: ರಸಗೊಬ್ಬರ ಸಬ್ಸಿಡಿ 140ಕ್ಕೆ ಏರಿಕೆ