ಬೆಂಗಳೂರು: ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಈಸ್ ಆಫ್ ಲಿವಿಂಗ್ ಇಂಡೆಕ್ಸ್ (Ease of Living Index-Eoli) ಅಂದ್ರೆ 'ಸುಲಲಿತ ಜೀವನ ಮಟ್ಟ' ಕುರಿತು ಸಮೀಕ್ಷೆಯನ್ನು ಬೆಂಗಳೂರು ನಗರದಲ್ಲಿ ನಡೆಸಲಾಗುತ್ತಿದೆ.
ಇದರ ಭಾಗವಾಗಿ ಬಿಬಿಎಂಪಿ ನೀಡುವ ಸೇವೆಗಳ ಬಗ್ಗೆ ಜನರು ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಸಮೀಕ್ಷೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಬಹುದಾಗಿದೆ.


ಫೆಬ್ರವರಿ 01-2020ರಿಂದ ಫೆ. 29-2020ರವರೆಗೆ ಪಾಲಿಕೆಯ ಕಾರ್ಯಕ್ಷಮತೆ ಸೂಚ್ಯಂಕ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಸುಲಲಿತ ಜೀವನ ಮಟ್ಟ ಸಮೀಕ್ಷೆ ನಡೆಯಲಿದೆ. ಶಿಕ್ಷಣ, ಆರೋಗ್ಯ, ನೀರು ಮತ್ತು ನೈರ್ಮಲ್ಯ, ಘನತ್ಯಾಜ್ಯ, ಮೂಲ ಸೌಕರ್ಯ, ನೋಂದಣಿ ಹಾಗೂ ಪರವಾನಗಿ ಸೇವೆ ಬಗ್ಗೆ ಸಮೀಕ್ಷೆ ನಡೆಸುತ್ತಿದೆ.