ETV Bharat / state

ವಾರದಲ್ಲಿ ಮೂರು ಸಾರಿ ಕಂಪಿಸಿದ ಭೂಮಿ : ಆತಂಕದಲ್ಲಿ ಜನ

ಹಾಸನ, ಕೊಡಗು, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಗುರುವಾರ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದೆ. ಇದು ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಹಾಸನದಲ್ಲಿ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟು ದಾಖಲಾಗಿದೆ..

ಭೂಮಿ ಕಂಪಿಸಿದ ಸ್ಥಳ
ಭೂಮಿ ಕಂಪಿಸಿದ ಸ್ಥಳ
author img

By

Published : Jun 28, 2022, 6:16 PM IST

ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಲ್ಲಿ ಮೂರು ಸಲ ಭೂಕಂಪನ ಸಂಭವಿಸಿದ್ದು, ಇದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಆದರೆ, ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂಬ ಮಾಹಿತಿಯನ್ನು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಧೈರ್ಯ ತುಂಬಿದೆ.

ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಮೂರು ಸಾರಿ ಭೂಕಂಪನದ ರೀತಿಯ ಅನುಭವವಾಗಿದೆ. ಈ ಬಗ್ಗೆ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವು ವಸ್ತು ಸ್ಥಿತಿ ಅರಿಯುವ ಪ್ರಯತ್ನ ನಡೆಸಿದ್ದು, ರಿಕ್ಟರ್ ಮಾಪನದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಭೂಕಂಪನದ ಅನುಭವ ಆಗಿರುವ ಹಿನ್ನೆಲೆ ಜನ ಆತಂಕಗೊಳ್ಳುವ ಅಗತ್ಯವಿಲ್ಲ. ಇದು ಲಘು ಭೂಕಂಪನದ ಮಾದರಿಯ ಅನುಭವ ಎಂದು ಹೇಳಿದೆ.

ಏನಾಗಿತ್ತು?: ಹಾಸನ, ಕೊಡಗು, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಗುರುವಾರ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದೆ. ಇದು ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಹಾಸನದಲ್ಲಿ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟು ದಾಖಲಾಗಿದೆ. ಜಿಲ್ಲೆಯ ಅರಕಲಗೂಡು, ಹೊಳೆನರಸೀಪುರ ತಾಲೂಕಿನ ಹಲವೆಡೆ ನಸುಕಿನ ಜಾವ 4.30 ರಿಂದ 5 ಗಂಟೆಯ ಮಧ್ಯೆ ಭೂಮಿ ಕಂಪಿಸಿತ್ತು.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಯುಕ್ತರು ಭೂಕಂಪ ಸಂಭವಿಸಿರುವುದನ್ನು ಖಚಿತಪಡಿಸಿದ್ದರು. ಇಂದು ನಸುಕಿನ ಜಾವ 4.38ರ ಸುಮಾರಿಗೆ ಅರಕಲಗೂಡು, ಹೊಳೆನರಸೀಪುರ ತಾಲೂಕುಗಳ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿತು. ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟಿತ್ತು ಎಂದು ಕೇಂದ್ರವು ತಿಳಿಸಿತ್ತು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರೇಂಜರ್ ಬ್ಲಾಕ್, ನೇಗಳ್ಳೆ ಗ್ರಾಮಗಳಲ್ಲಿ ಸಹ ಭೂಕಂಪನವುಂಟಾಗಿತ್ತು. ಮಡಿಕೇರಿನಗರ, ದೇವಸ್ತೂರು ಸೇರಿದಂತೆ ವಿವಿಧೆಡೆಗಳಲ್ಲಿ ನಸುಕಿನ ಜಾವ 4.37ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಂಡ್ಯ ಜಿಲ್ಲೆಯಲ್ಲಿಯೂ ಅಂದು ನಸುಕಿನ ಜಾವ 4.40ರ ಸುಮಾರಿಗೆ ಲಘು ಭೂಕಂಪನವಾಗಿದೆ. ಕೆ ಆರ್ ಪೇಟೆ ತಾಲೂಕಿನ ಐಕನಹಳ್ಳಿ, ಚಿನ್ನೇನಹಳ್ಳಿ, ಮಾದಾಪುರ, ಗೊಂದಿಹಳ್ಳಿ, ಬಿದರಹಳ್ಳಿ, ಗೊಡೇಹೊಸಹಳ್ಳಿಯ ಗ್ರಾಮಗಳ ಜನರು ಭೂಕಂಪನದ ಅನುಭವ ಹೊಂದಿದ್ದರು.

ಮೂರು ದಿನದ ಹಿಂದೆ : ಇದಾದ ಬಳಿಕ ಕಳೆದ ಮೂರು ದಿನಗಳ ಹಿಂದೆ ದಕ್ಷಿಣ ಕನ್ನಡದ ಸುಳ್ಯ ತಾಲೂಕು, ಕೊಡಗು ಜಿಲ್ಲೆಯ ಕೆಲವೆಡೆ ಬೆಳಗ್ಗೆ ಮತ್ತೆ ಭೂಕಂಪನದ ಅನುಭವಾಗಿತ್ತು. ಸುಳ್ಯದ ಮರ್ಕಂಜ, ಕೊಡಪ್ಪಾಲ, ಗೊನಡ್ಕ, ಅರಂತೋಡು ಮೊದಲಾದ ಕಡೆ ಬೆಳಗ್ಗೆ 9:10 ರಿಂದ 9:15ರ ಆಸುಪಾಸಿನಲ್ಲಿ ಭೂಮಿ ಕಂಪಿಸಿದ ರೀತಿ ಆಗಿದೆ.

ಅತ್ತ ಕೊಡಗಿನ ಸಂಪಾಜೆ, ಕರಿಕೆ, ಚೆಂಬು, ಪೆರಾಜೆ ಭಾಗದಲ್ಲಿ ಕೂಡ ಬೆಳಗ್ಗೆ 9:10ರ ಸುಮಾರು ಮೂರು ಸೆಕಂಡ್ ಕಂಪನದ ಅನುಭವ ಆಗಿದೆ ಅಂತಾ ವರದಿಯಾಗಿದೆ. ಕಂಪನವು ಸಹ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ದೊಡ್ಡ ಮಟ್ಟದಲ್ಲಿ ಆತಂಕಪಡುವ ಅಗತ್ಯ ಇಲ್ಲ ಎಂದು ತಿಳಿಸಲಾಗಿದೆ. ಜೂನ್‌ 25ರಂದು ಕೂಡ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪ ದಾಖಲಾಗಿತ್ತು ಎಂದು ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ತಿಳಿಸಿತ್ತು. ಬೆಳಗ್ಗೆ ಸುಮಾರು 9 ಗಂಟೆ 9 ಸೆಕೆಂಡಿಗೆ ಈ ಭೂಕಂಪನ ದಾಖಲಾಗಿದ್ದು, 4.7 ಕಿಲೋಮೀಟರ್ ಮುಖ್ಯ ಸ್ಥಾನದಿಂದ ಸುತ್ತಳತೆ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿತ್ತು.

ಇಂದಿನ ವರದಿ : ಎರಡು ಸಾರಿ ಭೂಕಂಪನದ ಅನುಭವ ಎದುರಿಸಿ ಆತಂಕದಲ್ಲಿದ್ದ ಕೊಡಗು ಜನತೆಗೆ ಸಹ ಇನ್ನೊಂದು ಆಘಾತ ಎದುರಾಗಿದೆ. ಮಂಗಳವಾರ ಮತ್ತೆ ಭೂಮಿ ಕಂಪಿಸಿದ್ದು, ಮಡಿಕೇರಿ, ನಾಪೋಕ್ಲು, ಕುಕ್ಕುಂದ, ಕಾಡು, ಬಲ್ಲಮಾವಟ್ಟಿ, ದಬ್ಬಡ್ಕ, ಪೆರಾಜೆ, ಕರಿಕೆ, ಭಾಗಮಂಡಲ, ವನಚಲ್, ಕರಿಕೆ, ಚೆಯ್ಯಂಡಾಣೆ ಸೇರಿದಂತೆ ವಿವಿಧ ಕಡೆ 7.45ಕ್ಕೆ ಭೂಮಿ ಕಂಪಿಸಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, '5 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಸಾಕಷ್ಟು ಕಡೆಗಳಿಂದ ಜನರು ಮಾಹಿತಿ ನೀಡಿದ್ದಾರೆ. ವಿಷಯವನ್ನು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಗಮನಕ್ಕೆ ತರಲಾಗಿದೆ‌. ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವ ದತ್ತಾಂಶಗಳ ಪರಿಶೀಲನೆ ನಡೆದಿದೆ. ಆ ಬಳಿಕ ಕಂಪನದ ತೀವ್ರತೆ ಗೊತ್ತಾಗಲಿದೆ. ಸದ್ಯಕ್ಕೆ ಜನರು ಆತಂಕಪಡುವ ಅಗತ್ಯ ಇಲ್ಲ' ಎಂದು ಹೇಳಿದ್ದರು.

ಅಧಿಕಾರಿಗಳ ವಿವರಣೆ : ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಆಯುಕ್ತ ಮನೋಜ್ ರಾಜನ್ ಈಟಿವಿ ಭಾರತ್​​ಗೆ ಮಾಹಿತಿ ನೀಡಿದ್ದು, ಕಳೆದ ಒಂದು ವಾರದಲ್ಲಿ ಮೂರು ದಿನ ಕೊಡಗು ಜಿಲ್ಲೆಯಲ್ಲಿ ಭೂಮಿ ಕಂಪಿಸಿದೆ. ಇದಲ್ಲದೆ ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ರಿಕ್ಟರ್ ಮಾಪನದಲ್ಲಿ ಇದರ ತೀವ್ರತೆ ಕಡಿಮೆ ಇರುವ ಹಿನ್ನೆಲೆ ಭೂಕಂಪನಕ್ಕೆ ಸ್ಪಷ್ಟ ಕಾರಣ ತಿಳಿಯುತ್ತಿಲ್ಲ.

ಈ ವಿಚಾರವಾಗಿ ಇಂದು ತಜ್ಞರ ಜೊತೆಗೂ ಸಭೆ ನಡೆಸಿದ್ದು, ಭೂಕಂಪನಕ್ಕೆ ಒಳಗಾದ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಕೊಟ್ಟಿದ್ದೇವೆ. ಅಲ್ಲಿನ ವಸ್ತುಸ್ಥಿತಿ ಹಾಗೂ ಜನರ ಅನುಭವವನ್ನು ಪಡೆಯುವ ಜೊತೆಗೆ ಸ್ಥಳೀಯವಾಗಿ ನಮ್ಮ ಕೇಂದ್ರದಿಂದ ಲಭಿಸುವ ಮಾಹಿತಿ ಹಾಗೂ ಸ್ಥಳೀಯವಾಗಿ ಲಭ್ಯವಿರುವ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ಕಾರಣ ತಿಳಿದುಕೊಳ್ಳಲಿದ್ದೇವೆ.

ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಗಳ ಸಂದರ್ಭ ಸಣ್ಣಮಟ್ಟದ ಕಂಪನ ಉಂಟಾಗುವುದು ಸಹಜ. ಆದರೆ, ರಾಜ್ಯದಲ್ಲಿ ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಮೂರು ಸಾರಿ ಭೂಮಿ ಕಂಪಿಸಿದೆ. ಇದು ಸ್ಪಷ್ಟವಾಗಿ ಅನುಭವಕ್ಕೆ ಬರುವ ರೀತಿಯಲ್ಲಿದೆ. ಮಾಹಿತಿ ಸಂಗ್ರಹಿಸುವ ಕಾರ್ಯ ಜಾರಿಯಲ್ಲಿದ್ದು, ಸಂಪೂರ್ಣ ವಿವರ ಸಿಕ್ಕ ನಂತರ ವಿವರ ನೀಡುವುದಾಗಿ ತಿಳಿಸಿದ್ದಾರೆ.

ಓದಿ: ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ತಗ್ಗಿಸಲು ಅಧಿಕಾರಿಗಳೊಂದಿಗೆ ಪೊಲೀಸ್ ಆಯುಕ್ತರ ಸಭೆ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.