ETV Bharat / state

ಸೈಬರ್ ಕ್ರೈಂ ವಂಚನೆಗಳ ಪಟ್ಟಿಯಲ್ಲಿ ಹೊಸ‌ ಸೇರ್ಪಡೆ ಇ - ಸಿಮ್ ಆ್ಯಕ್ಟಿವೇಷನ್ - ಇ ಸಿಮ್ ಆ್ಯಕ್ಟಿವೇಷನ್ ವಂಚನೆ,

ಸೈಬರ್ ಕ್ರೈಂ ವಂಚನೆಗಳ ಪಟ್ಟಿಯಲ್ಲಿ ಹೊಸ‌ದಾಗಿ ಇ-ಸಿಮ್​ ಆ್ಯಕ್ಟಿವೇಷನ್​ ಸೇರ್ಪಡೆಯಾಗಿದೆ.

e SIM activation, e SIM activation news, e SIM activation scam, e SIM activation latest news, ಇ ಸಿಮ್ ಆ್ಯಕ್ಟಿವೇಷನ್, ಇ ಸಿಮ್ ಆ್ಯಕ್ಟಿವೇಷನ್ ಸುದ್ದಿ, ಇ ಸಿಮ್ ಆ್ಯಕ್ಟಿವೇಷನ್ ವಂಚನೆ, ಇ ಸಿಮ್ ಆ್ಯಕ್ಟಿವೇಷನ್ ವಂಚನೆ ಸುದ್ದಿ,
ಸೈಬರ್ ಕ್ರೈಂ ವಂಚನೆಗಳ ಪಟ್ಟಿಯಲ್ಲಿ ಹೊಸ‌ ಸೇರ್ಪಡೆ ಇ-ಸಿಮ್ ಆ್ಯಕ್ಟಿವೇಷನ್
author img

By

Published : Jul 25, 2020, 6:35 AM IST

ಬೆಂಗಳೂರು: ತಂತ್ರಜ್ಞಾನ ಬೆಳೆದಂತೆಲ್ಲ ದುರ್ಬಳಕೆ‌ ಮಾಡಿಕೊಳ್ಳುವವರ ಪ್ರಮಾಣ ಹೆಚ್ಚಾಗುತ್ತಿದೆ. ಕಸ್ಟಮರ್ ಕೇರ್ ಸೋಗಿನಲ್ಲಿ ತರಹೇವಾರಿ ರೀತಿಯಲ್ಲಿ ಸೈಬರ್ ಖದೀಮರು ಸಾರ್ವಜನಿಕರನ್ನು ನಂಬಿಸಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದಾರೆ. ಇಂತಹ ವಂಚನೆ ಸಾಲುಗಳ ಪಟ್ಟಿಯಲ್ಲಿ ಹೊಸ ಸೇರ್ಪಡೆ‌ ಎಲೆಕ್ಟ್ರಾನಿಕ್ ಸೀಮ್ ಆಕ್ಟೀವೇಷನ್.

ಹೌದು, ಏರ್​ಟೆಲ್ ಕಸ್ಟಮರ್ ಕೇರ್​ ಸೋಗಿನಲ್ಲಿ ಯುವತಿಗೆ ಕರೆ ಮಾಡಿ ಸೈಬರ್ ಖದೀಮರು ಇ-ಸೀಮ್ ಆ್ಯಕ್ಟಿವೇಷನ್ ಮಾಡುವುದಾಗಿ ಹೇಳಿ ನಂಬರ್ ಹ್ಯಾಕ್ ಮಾಡಿಕೊಂಡು ಸಾವಿರಾರು ರೂಪಾಯಿ ದೋಚಿದ್ದಾರೆ.

ಬೆಳ್ಳಂದೂರು ನಿವಾಸಿ ಸೃಷ್ಟಿದಾಸ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇದೇ ತಿಂಗಳು 14 ರಂದು ಏರ್​ಟೆಲ್ ಕಂಪನಿಯ ಕಸ್ಟಮರ್ ಕೇರ್ ಸೋಗಿನಲ್ಲಿ ಯುವತಿಗೆ ಕರೆ ಮಾಡಿದ್ದಾನೆ. ಕಂಪನಿಯಿಂದ‌ ಇ-ಸೀಮ್ ಆಗಿ ಪರಿವರ್ತಿಸಲಾಗುತ್ತಿದ್ದು, ನಿಮ್ಮ ಸೀಮ್ ಸಹ ಇ-ಸೀಮ್​ಗಳಾಗಿ ಪೋರ್ಟ್ ಮಾಡುವುದಾಗಿ ಯುವತಿಗೆ ಹೇಳಿದ್ದಾನೆ.

ಆರಂಭದಲ್ಲಿ ಪೋರ್ಟ್​ಗೆ ಒಪ್ಪಿಕೊಳ್ಳದ ಯುವತಿ ತದನಂತರ ಖದೀಮರ ಮಾತಿಗೆ ಮರುಳಾಗಿ ಒಪ್ಪಿಕೊಂಡಿದ್ದಾಳೆ. ಪೋರ್ಟ್ ಮಾಡುವಾಗ ಎರಡು ಗಂಟೆ ಸೀಮ್ ನಿಷ್ಕ್ರಿಯವಾಗಿರಲಿದೆ ಎಂದು ವಂಚಕ ಸೂಚನೆ ನೀಡಿದ್ದಾನೆ‌. ಸೀಮ್‌ ನಿಷ್ಕ್ರಿಯವಾಗುವ‌ ಮುನ್ನ ಬ್ಯಾಂಕಿಂಗ್ ವಿವರ ತಿಳಿದುಕೊಂಡು ಯುವತಿ ಮೊಬೈಲ್​ಗೆ ಬಂದ ಒಟಿಪಿ ಸಹ ಪಡೆದುಕೊಂಡಿದ್ದಾರೆ. ಒಟಿಪಿ ಪಡೆದುಕೊಂಡು ಬ್ಯಾಂಕ್‌ ಖಾತೆಯಲ್ಲಿದ್ದ ಸುಮಾರು ಏಳು ಸಾವಿರ ರೂ. ಎಗರಿಸಿದ್ದಾರೆ. ಇದಾದ ನಂತರ ಯುವತಿಯ ಸ್ನೇಹಿತರಿಗೆ ಕರೆ ಮಾಡಿ ತೊಂದರೆಗೆ ಸಿಲುಕಿದ್ದು, 50 ಸಾವಿರ ನೀಡುವಂತೆ ಸಂದೇಶ ರವಾನಿಸಿದ್ದಾರೆ. ಇದರಿಂದ ಅನುಮಾನಗೊಂಡ ಯುವತಿಗೆ ಸ್ನೇಹಿತೆಯರು ಕರೆ ಮಾಡಿದಾಗ ವಿಚಾರ ಬೆಳಕಿಗೆ ಬಂದಿದೆ. ವಂಚನೆ ಸಂಬಂಧ ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಯುವತಿ‌ ದೂರು ನೀಡಿದ್ದಾಳೆ.

ಏನಿದು ಎಲೆಕ್ಟ್ರಾನಿಕ್ ಸೀಮ್ ?

ಇ ಸೀಮ್ ವಿನೂತನ ತಂತ್ರಜ್ಞಾನವಾಗಿದ್ದು, ಪ್ರತ್ಯೇಕವಾದ ಕಾರ್ಡ್ ಅಲ್ಲ. ಸ್ಮಾರ್ಟ್ ಪೋನ್​ಗಳಲ್ಲಿ ತಂತಿವ್ಯೂಹಗಳಲ್ಲಿ ಅಳವಡಿಸಲಾಗುವ ಮೈಕ್ರೊ ಚಿಪ್. ಈ ಸಿಮ್ ಬಳಸಿಕೊಂಡು ಫೋನ್​​​ ನಂಬರ್ ಅಥವಾ ನೆರ್ಟ್​ವರ್ಕ್ ಕಂಪ‌ನಿ ಬದಲಾಯಿಸಬಹುದಾಗಿದೆ.

ಹೊಸ ನೆರ್ಟ್​ವರ್ಕ್ ಹೋಗುವಾಗ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು. ಸುಲಭವಾಗಿ ಹೇಳುವುದಾದರೆ ಹಳೆ‌‌ ಮೆಮೊರಿ ಕಾರ್ಡ್ ದತ್ತಾಂಶ ಅಳಿಸಿ ಹೊಸ ಮಾಹಿತಿ ಸೇವೆ ಮಾಡಿದ ಹಾಗೆ. ಆದರೆ ಈ ಸಿಮ್ ಹೊರಗೆ ತೆಗೆಯುವಂತಿಲ್ಲ.‌ ಪದೇ ಪದೆ ಸಿಮ್ ಬದಲಾಯಿಸುವವರಿಗೆ ಈ ಸಿಮ್ ಹೊಸ‌ ತಂತ್ರಜ್ಞಾನ ಸಮಸ್ಯೆಯಾಗಬಹುದು.

ಯಾರೆಲ್ಲ ಬಳಸಬಹುದು ?

ಪ್ರಸ್ತುತ ದೇಶದಲ್ಲಿ ಎಲ್ಲ ಸ್ಮಾರ್ಟ್ ಪೋನ್​ಗಳಲ್ಲಿ ಈ ಸಿಮ್ ಸಾಫ್ಟ್ ವೇರ್ ಅಳವಡಿಸಲು ಸಾಧ್ಯವಿಲ್ಲ. ಸದ್ಯ ಈ ವ್ಯವಸ್ಥೆ ಐಪೋನ್ , ಗೂಗಲ್ ಫಿಕ್ಸೆಲ್ಸ್ -2, ಸ್ಯಾಮ್​​ಸಂಗ್​ ಹೊಸ ಸಿರೀಸ್​ನ‌ ಅಂಡ್ರಾಯ್ಡ್ ಮೊಬೈಲ್​ಗಳಲ್ಲಿ ಮಾತ್ರ ಇ ಸಿಮ್ ಅಳವಡಿಸಲು ಸಾಧ್ಯವಿದೆ. ಪ್ರಸ್ತುತ ಈ ತಂತ್ರಜ್ಞಾನವನ್ನು ಏರ್ ಟೆಲ್ ಹಾಗೂ ಜಿಯೊ ಕಂಪನಿಗಳು ಈ ಸೇವೆ ಒದಗಿಸುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.