ETV Bharat / state

ಇ-ಬೆಳಕು, ಗಾಂಧಿ ಸಾಕ್ಷಿ ಕಾಯಕ 2.O ತಂತ್ರಾಂಶ ಬಿಡುಗಡೆ

author img

By

Published : Jan 6, 2022, 10:38 PM IST

ಇ-ಬೆಳಕು ಮತ್ತು ಗಾಂಧಿ ಸಾಕ್ಷಿ ಕಾಯಕ 2.O ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬಿಡುಗಡೆಗೊಳಿಸಿದೆ. ಇಲಾಖೆ ಅಭಿವೃದ್ಧಿಪಡಿಸಿದ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದ ಬಳಕೆಯನ್ನು 2013 ರಿಂದ ಕಡ್ಡಾಯಗೊಳಿಸಲಾಗಿದೆ.

e-belaku, Gandhi Sakshi Kayaka 2.O Software Release
ಇ-ಬೆಳಕು, ಗಾಂಧಿ ಸಾಕ್ಷಿ ಕಾಯಕ 2.O ತಂತ್ರಾಂಶ ಬಿಡುಗಡೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇ-ಬೆಳಕು ಹಾಗೂ ಗಾಂಧಿ ಸಾಕ್ಷಿ ಕಾಯಕ 2.0 ತಂತ್ರಾಂಶವನ್ನು ಬಿಡುಗಡೆ ಮಾಡಿದೆ. ಸಚಿವ ಕೆ.ಎಸ್.ಈಶ್ವರಪ್ಪ ತಂತ್ರಾಂಶವನ್ನು ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.

ಎಸ್ಕಾಂಗಳಿಗೆ ನಿಗದಿತ ಸಮಯದೊಳಗೆ ಬಾಕಿ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಲು, ಗ್ರಾಮ ಪಂಚಾಯಿತಿಯ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳಿಗೆ ಮೀಟರ್ ಅಳವಡಿಸಲಾಗಿದೆಯೇ, ಕಾರ್ಯನಿರ್ವಹಿಸದೇ ಇರುವ ಕುಡಿಯುವ ನೀರು ಮತ್ತು ಬೀದಿದೀಪ ಸ್ಥಾವರಗಳ ಸಂಪರ್ಕ ನಿಷ್ಕ್ರಿಯಗೊಳಿಸಲು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಇ-ಬೆಳಕು ತಂತ್ರಾಶವನ್ನು ಅಭಿವೃದ್ಧಿಪಡಿಸಲಾಗಿದೆ.

ಗ್ರಾಮ ಪಂಚಾಯಿತಿಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ, ಅಕ್ಟೋಬರ್-2021ರ ಅಂತ್ಯದವರೆಗೆ ಅಸಲು ಮೊತ್ತ 3518.05 ಕೋಟಿ ರೂ. ಮತ್ತು ಮೊತ್ತ 711.55 ಕೋಟಿ ರೂ. ಸೇರಿ ಒಟ್ಟು 4229.60 ಕೋಟಿಯನ್ನು ಪಾವತಿಸುವುದು ಬಾಕಿ ಇದೆ. 2017ರಿಂದ ಈ ಬಾಕಿ ಇದೆ. ಗ್ರಾಮ ಪಂಚಾಯತಿಗಳಿಗೆ ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಪಾವತಿಸಲು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಶಾಸನಬದ್ಧ ಅನುದಾನದಲ್ಲಿ ಶೇ.60 ರಷ್ಟು ಅನುದಾನವನ್ನು ನಿಗದಿಪಡಿಸಿ ಗ್ರಾಮ ಪಂಚಾಯಿತಿಗಳ ESCROW ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತಿದೆ.

ಗ್ರಾಮ ಪಂಚಾಯಿತಿಗಳು ಕೇಂದ್ರ ಹಣಕಾಸು ಆಯೋಗದಡಿ ಬಿಡುಗಡೆಯಾಗುವ ಅನುದಾನದಲ್ಲಿ ಮತ್ತು ಗ್ರಾಮ ಪಂಚಾಯಿತಿಗಳ ಸಂಪನ್ಮೂಲಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗುವ ಬಾಕಿ ಮೊತ್ತವನ್ನು ಪಾವತಿಸಲು ಅನುದಾನವನ್ನು ನಿಗದಿಪಡಿಸಿ, ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲಾಗಿದೆ. ಆದಾಗ್ಯೂ ಹಲವು ಗ್ರಾಮ ಪಂಚಾಯಿತಿಗಳು ನಿಗದಿತ ಸಮಯದೊಳಗೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಬೇಕಾಗುವ ಬಾಕಿ ಮೊತ್ತವನ್ನು ಪಾವತಿಸದೇ ಇರುವುದು ಕಂಡುಬಂದಿದೆ.

ಗಾಂಧಿ ಸಾಕ್ಷಿ ಕಾಯಕ 2.O ತಂತ್ರಾಶ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗಾಂಧಿ ಸಾಕ್ಷಿ ಕಾಯಕ 2.O ತಂತ್ರಾಶವನ್ನು ಬಿಡುಗಡೆಗೊಳಿಸಿತು. ಇಲಾಖೆ ಅಭಿವೃದ್ಧಿ ಪಡಿಸಿದ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದ ಬಳಕೆಯನ್ನು 2013 ರಿಂದ ಕಡ್ಡಾಯಗೊಳಿಸಲಾಗಿದೆ. ಇಲಾಖೆಯ ಅಧೀನ ಇಲಾಖೆಯಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದಿ ನಿಗಮ ಮತ್ತು ಗ್ರಾಮ ಪಂಚಾಯತಿಗಳಿಂದ ಅನುಷ್ಠಾನವಾಗುವ ಎಲ್ಲಾ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಅಳವಡಿಸಿ, ಈ ತಂತ್ರಾಂಶದಿಂದ ಸೃಜಿಸಲಾಗುವ ಪಾವತಿ ಆದೇಶದ ಮೂಲಕ ಪಾವತಿಸಲು ಕಡ್ಡಾಯಗೊಳಿಸಲಾಗಿತ್ತು.

ಇದನ್ನೂ ಓದಿ:ರಾಜ್ಯದ ಶೇ 85ಕ್ಕೂ ಹೆಚ್ಚು ಕೋವಿಡ್‌ ಕೇಸ್ ಬೆಂಗಳೂರಲ್ಲಿ ಪತ್ತೆ: ಶೇ 7.5ಕ್ಕೇರಿದ ಪಾಸಿಟಿವಿಟಿ ದರ

ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿ ಇಲಾಖೆಯ ಅಧೀನ ಇಲಾಖೆಗಳು ಅನುಷ್ಠಾನ ಮಾಡುವ ಕಾಮಗಾರಿಗಳ ವಿವರಗಳನ್ನು secondary entry ಯ ಮೂಲಕ ಅಳವಡಿಸಲಾಗುತ್ತಿತ್ತು. ಹಲವಾರು ಬಾರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಪಾವತಿ ಮಾಡುವ ವೇಳೆಯಲ್ಲಿ ಕಾಮಗಾರಿಗಳ ಭೌತಿಕ ಪ್ರಗತಿಯ ವಿವರಗಳನ್ನು ಅಳವಡಿಸಿ, ಪಾಪತಿ ಆದೇಶವನ್ನು ಸೃಜಿಸಿ ಗುತ್ತಿಗೆದಾರರಿಗೆ ಪಾವತಿಸಲಾಗುತ್ತಿತ್ತು. ಇದರಿಂದಾಗಿ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯು ಯಾವ ಹಂತದಲ್ಲಿ ಇದೆ ಎಂಬುದರ ನಿಖರವಾದ ಮಾಹಿತಿಯು ಸರ್ಕಾರದ ಹಂತದಲ್ಲಿ ಲಭ್ಯವಾಗಿರುತ್ತಿರಲಿಲ್ಲ.

ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಹಾಗೂ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶವನ್ನು ಉನ್ನತೀಕರಣಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನಿರ್ಧರಿಸಿ, “ಗಾಂಧಿ ಸಾಕ್ಷಿ ಕಾಯಕ 2.0” ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. "ಗಾಂಧಿ ಸಾಕ್ಷಿ ಕಾಯಕ 2.0” ತಂತ್ರಾಂಶದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವ ಮುನ್ನವೇ ಕಾಮಗಾರಿಗಳನ್ನು ಯಾವ ಸ್ಥಳದಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಭೌಗೋಳಿಕವಾಗಿ ಗುರುತಿಸುವ ವಿಧಾನವನ್ನು ಅಳವಡಿಸಲಾಗಿದೆ. ಇದರಿಂದಾಗಿ ಕಾಮಗಾರಿಗಳ duplicationನನ್ನು ತಡೆಯಬಹುದಾಗಿದೆ. ಕಾಮಗಾರಿಗಳ ಭೌತಿಕ ಪ್ರಗತಿಯ ಪ್ರತಿಯೊಂದು ಹಂತವನ್ನು ಸರಿಯಾದ ಸಮಯದಲ್ಲಿ ಅಳವಡಿಸುವಂತೆ ಕಡ್ಡಾಯಗೊಳಿಸಿ, ಗುತ್ತಿಗೆದಾರರಿಗೆ ಆನ್-ಲೈನ್​ನಲ್ಲಿ ಪಾವತಿಸುವಂತೆ ಅನುವು ಮಾಡಿಕೊಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.