ಬೆಂಗಳೂರು: ಡಿವೈಎಸ್ಪಿ ಲಕ್ಷ್ಮಿ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಪೊಲೀಸರ ತನಿಖೆ ಚುರುಕುಗೊಂಡಿದೆ. ಈಗ ದೊರೆತಿರುವ ಮಾಹಿತಿ ಪ್ರಕಾರ, ಅವರು ಎರಡು ವಿಚಾರಗಳ ಸಂಬಂಧ ವಿಚಾರಣೆ ಎದುರಿಸುತ್ತಿದ್ದರಂತೆ.
ಪೊಲೀಸ್ ತರಬೇತಿ ವೇಳೆ ಮದ್ಯಪಾನದ ವಿಚಾರವಾಗಿ ಲಕ್ಷ್ಮಿ ಮೇಲೆ ಆರೋಪವಿತ್ತು. ಅಲ್ಲದೇ ತರಬೇತಿ ವೇಳೆ ನೀಡಿದ್ದ ಪಿಸ್ತೂಲ್ ಬ್ಯಾರೆಲ್ ಕಳೆದಿದ್ದ ಆರೋಪವೂ ಇತ್ತು. ಪೊಲೀಸ್ ಇಲಾಖೆಯಲ್ಲಿ ಶಸ್ತ್ರಾಸ್ತ್ರ ಕಳೆದುಕೊಳ್ಳುವುದು ಗಂಭೀರ ಅಪರಾಧ. ಆದ್ದರಿಂದ ಈ ಎರಡು ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓದಿ: ಡಿವೈಎಸ್ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣ: FSL ರಿಪೋರ್ಟ್ ನಲ್ಲಿ ಆತ್ಮಹತ್ಯೆ ಎಂದು ಉಲ್ಲೇಖ