ETV Bharat / state

'ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜ್ಯ ನಾಯಕರಿಂದ ಒತ್ತಡ' - ಬೆಂಗಳೂರು ಉತ್ತರ

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ರಾಜ್ಯ ನಾಯಕರು ಒತ್ತಡ ಹೇರುತ್ತಿದ್ದಾರೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

state-leaders-forcing-me-to-contest-in-lok-sabha-says-dv-sadananda-gowda
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜ್ಯ ನಾಯಕರು ಒತ್ತಡ ಹೇರುತ್ತಿದ್ದಾರೆ: ಡಿ ವಿ ಸದಾನಂದಗೌಡ
author img

By ETV Bharat Karnataka Team

Published : Dec 28, 2023, 5:13 PM IST

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಜ್ಯದ ನಾಯಕರು ಒತ್ತಡ ಹೇರುತ್ತಿದ್ದಾರೆ. ಆದರೆ ಹೊಸಬರಿಗೆ ಅವಕಾಶ ನೀಡಲು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದೇನೆ. ಮುಂದೇನಾಗುತ್ತದೆ ನೋಡೋಣ ಎಂದು ಡಿ.ವಿ.ಸದಾನಂದ ಗೌಡ ತಿಳಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ್ ನಿನ್ನೆ ನಮ್ಮ ಮನೆಗೆ ಬಂದಿದ್ದರು. ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡಬೇಕು, ನಿಮ್ಮ ಅವಶ್ಯಕತೆ ಇದೆ ಎಂದಿರುವುದು ನಿಜ. ಆದರೆ ಅವರಷ್ಟೇ ಅಲ್ಲ, ನಮ್ಮ ಎಲ್ಲ ಮಾಜಿಮಂತ್ರಿಗಳೂ, ಶಾಸಕರೂ ಎಲ್ಲರೂ ಕೂಡ ನಿತ್ಯ ಫೋನ್ ಮಾಡಿ ಒತ್ತಡ ಹಾಕುತ್ತಿದ್ದಾರೆ ಎಂದರು.

ನನ್ನ ಮೇಲೆ ಅವರೆಲ್ಲ ಇಷ್ಟೊಂದು ಪ್ರೀತಿ ಇಟ್ಟುಕೊಂಡಿರುವುದು ತುಂಬಾ ಸಂತೋಷ ತಂದಿದೆ. ಆದರೆ ನನ್ನದೇ ಆದ ನಿರ್ಧಾರ ಮಾಡಿದ್ದೇನೆ. ಹೊಸಬರಿಗೆ ಅವಕಾಶ ಮಾಡಿಕೊಡಬೇಕೆಂಬ ಉದ್ದೇಶವಿದೆ. ನಿನ್ನೆ ನಮ್ಮ‌ ಮನೆಗೆ ಅವರೆಲ್ಲ ಬಂದಿದ್ದಕ್ಕೆ ಅಭಿನಂದನೆ ಹೇಳುತ್ತೇನೆ. ಪದೇ ಪದೇ ನನಗೆ ಹಿರಿಯರು, ಮುಖಂಡರು ಉತ್ತರದಿಂದ ನಿಲ್ಲುವಂತೆ ಹೇಳುತ್ತಿದ್ದಾರೆ. ಏನಾಗುತ್ತದೆ ಎಂಬುದನ್ನು ಮುಂದೆ ನೋಡೋಣ ಎಂದು ಹೇಳಿದರು.

ಇದನ್ನೂ ಓದಿ: 'ಚಾಮರಾಜನಗರದಿಂದ ಖರ್ಗೆ ಸ್ಪರ್ಧಿಸಿದರೆ ಲಕ್ಷ ಮತಗಳ ಲೀಡ್​​ನಿಂದ ಗೆಲ್ಲಿಸುತ್ತೇನೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.