ETV Bharat / state

ದಸರಾ ಉತ್ಸವ: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಮದ್ಯದಂಗಡಿಗಳು ಬಂದ್

ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ್ದಾರೆ.

ಬೆಂಗಳೂರು ನಗರ
Bengaluru city
author img

By ETV Bharat Karnataka Team

Published : Oct 23, 2023, 5:04 PM IST

ಬೆಂಗಳೂರು: ದಸರಾ ಉತ್ಸವ ಹಿನ್ನೆಲೆಯಲ್ಲಿ ನಗರದ ಕೇಂದ್ರ ಹಾಗೂ ಉತ್ತರ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಕ್ಟೋಬರ್ 24ರಂದು ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ. ದಸರಾ ಉತ್ಸವ ಹಾಗೂ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಗಳಿವೆ. ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ಉತ್ತರ ವಿಭಾಗ ವ್ಯಾಪ್ತಿಗಳಲ್ಲಿರುವ ಎಲ್ಲಾ ಮದ್ಯದಂಗಡಿ, ರೆಸ್ಟೋರೆಂಟ್, ಬಾರ್ ಹಾಗೂ ವೈನ್ ಶಾಪ್​ಗಳಲ್ಲಿ ಮದ್ಯ ಮಾರಾಟ ಮಾಡದಂತೆ ನಿಷೇಧಿಸಲಾಗಿದೆ.

ಕೇಂದ್ರ ವಿಭಾಗ ವ್ಯಾಪ್ತಿಯ ಅಶೋಕನಗರ, ವಿವೇಕನಗರ, ಹೈಗ್ರೌಂಡ್ಸ್​ಗಳಲ್ಲಿ 24 ರಂದು ಬೆಳಗ್ಗೆ 6 ರಿಂದ 25ರ ಬೆಳಿಗ್ಗೆ 10 ರವರೆಗೆ ಹಾಗೂ ಉತ್ತರ ವಿಭಾಗದ ಜೆ.ಸಿ.ನಗರ, ಹೆಬ್ಬಾಳ, ಸಂಜಯನಗರ, ಪೂರ್ವ ವಿಭಾಗದ ಭಾರತೀನಗರ, ಕೆ.ಜಿ.ಹಳ್ಳಿ ಹಾಗೂ ಶಿವಾಜಿನಗರ ಸೇರಿದಂತೆ ನಗರದ ಹಲವೆಡೆ ಇದೇ ತಿಂಗಳು 24 ರಂದು ಬೆಳಿಗ್ಗೆ 6 ರಿಂದ ಮಾರನೇ‌ ದಿನ 12 ಗಂಟೆವರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಅರಮನೆಯ ಐಷಾರಾಮಿ ಕಾರುಗಳಿಗೆ ಆಯುಧ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ ಒಂದೇ! ಏನಿದರ ಗುಟ್ಟು?- ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.