ಬೆಂಗಳೂರು: ಅಧಿವೇಶನದಲ್ಲಿ ಜೆಡಿಎಸ್ ಹೋರಾಟ ಮಾಡುವ ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದು ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿದ್ದ ಜೆಡಿಎಸ್ ಶಾಸಕಾಂಗ ಸಭೆ ಆರಂಭಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಭೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಕೂಡಾ ಭಾಗವಹಿಸಿದ್ದಾರೆ. ಅವರ ಸಲಹೆ ಸೂಚನೆಗಳನ್ನು ಕೂಡ ಪಡೆಯಲಿದ್ದೇವೆ ಎಂದರು. ರಾಜ್ಯದ ಕಾನೂನು ಸುವ್ಯವಸ್ಥೆ, ಮತ್ತಿತರ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಲಿದ್ದೇವೆ. ನಮಗೆ ಎಷ್ಟು ಸಮಯ ಸಿಗುತ್ತದೋ ಗೊತ್ತಿಲ್ಲ. ನಮಗೆ ಸಿಗುವ ಸಮಯವನ್ನು ಸದನದಲ್ಲಿ ಉಪಯೋಗಿಸಿಕೊಳ್ಳುತ್ತೇವೆ ಎಂದರು.
ಮಂಗಳೂರು ಗೋಲಿಬಾರ್ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಈ ಪ್ರಕರಣದಲ್ಲಿ ಹಿಟ್ ಅಂಡ್ ರನ್ ಮಾಡಲ್ಲ. ನನ್ನ ವ್ಯಾಪ್ತಿಯಲ್ಲಿ ನಾನು ಕೆಲಸ ಮಾಡಿದ್ದೇನೆ. ತಾರ್ಕಿಕ ಅಂತ್ಯ ಕಾಣಿಸಬೇಕಾದದ್ದು ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಎಂದರು. ಎನ್ಆರ್ಸಿ ವಿಚಾರದಲ್ಲಿ ನಾವು ಮೊದಲಿನಿಂದ ಪ್ರತಿಭಟನೆ ಮಾಡಿಕೊಂಡು ಬರುತ್ತಿದ್ದೇವೆ. ಈಗ ಸಂವಿಧಾನದ ಮೇಲೆ ಎರಡು ದಿನ ಚರ್ಚೆ ಇಟ್ಟಿದ್ದಾರೆ. ಆಗ ಏನು ಚರ್ಚೆ ಮಾಡುತ್ತಾರೋ ನೋಡೋಣ. ಎನ್ಆರ್ಸಿ ಕಾಯ್ದೆಗೆ ಬುನಾದಿ ಮಾಡಿಕೊಳ್ಳಲು ಈ ಚರ್ಚೆ ಇಟ್ಟಿದಾರೋ ಏನೋ ಗೊತ್ತಿಲ್ಲ. ಅವರು ಯಾವ ರೀತಿ ಚರ್ಚೆ ತೆಗೆದುಕೊಂಡು ಹೋಗುತ್ತಾರೆ ಕಾದು ನೋಡೊಣ ಎಂದರು.